ಮೈಸೂರಿನಲ್ಲಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದಲ್ಲಿ ಖಾಲಿ ಇರುವ ಕೆಳಕಂಡ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಂಸ್ಥೆಯು ಅಧಿಸೂಚನೆ ಹೊರಡಿಸಲಾಗಿದೆ.
ಹುದ್ದೆಯ ಹೆಸರು ಮತ್ತು ಹುದ್ದೆಯ ಸಂಖ್ಯೆ ಕುರಿತ ಮಾಹಿತಿ ಈ ಕೆಳಗಿನಂತಿದೆ.
ಬೋಧಕರು – 02
ಕಮ್ಯೂನಿಕೇಷನ್(ಐ.ಟಿ. ಅಧಿಕಾರಿ) – 01
ರಿಸರ್ಚ್ (ಟ್ರೈನಿಂಗ್ ಅಸೋಸಿಯೇಟ್ಸ್) – 02
ಸಿಸ್ಟಂ ಆಫೀಸರ್ಸ್ – 02
ಅಸಿಸ್ಟೆಂಟ್ಸ್ – 02
ಒಟ್ಟು – 09
– ಈ ಮೇಲ್ಕಂಡ ಹುದ್ದೆಗಳಿಗೆ ಶೈಕ್ಷಣಿಕ ಅರ್ಹೆ ಬಗ್ಗೆ ಆಡಳಿತ ತರಬೇತಿ ಸಂಸ್ಥೆಯ ಅಧಿಕೃತ ವೆಬ್ಸೈಟ್ atimysore.gov.in ನಲ್ಲಿ ಲಭ್ಯವಿದೆ.
– ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – 07-01-2019
– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-01-2019
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ಲಭ್ಯವಿರುವ ಅಧಿಸೂಚನೆಯಲ್ಲಿ ನಿಗದಿತ ನಮೂನೆಯನ್ನು ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಅಂಚೆಯ ಮೂಲಕ ಅಥವಾ ಸಾಫ್ಟ್ ಕಾಪಿಯನ್ನು ಇಮೇಲ್ (atimysurujobs@gmail.com) ವಿಳಾಸಕ್ಕೆ ಕಳುಹಿಸಬಹುದು.
– ಅಂಚೆ ವಿಳಾಸ – ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು.
– ಅಭ್ಯರ್ಥಿಗಳು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸೂಚನೆ: ಈ ಹುದ್ದೆಗಳನ್ನು ಗುತ್ತಿಗೆ/ನಿಯೋಜನೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.
Mysuru administrative training institute has invited application for various post on the basis of contract. Interested candidates can apply for this post.