ಕರ್ನಾಟಕ ಸರ್ಕಾರ ಮೈಸೂರು ಜಿಲ್ಲೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ (Village Accountants) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಮಾಹಿತಿ ಓದಿರಿ.
ಹುದ್ದೆಯ ಹೆಸರು : ಗ್ರಾಮ ಲೆಕ್ಕಿಗರು (Village Accountant)
ಒಟ್ಟು ಹುದ್ದೆಗಳ ಸಂಖ್ಯೆ : 105
ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 15-12-2016
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-01-2017
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 17-01-2017
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 200
ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.200
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.100
– ಬ್ಯಾಂಕ್ ಚಾರ್ಜ್ ಪ್ರತ್ಯೇಕ ರೂ.30 ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಅನ್ವಯ.
ಶೈಕ್ಷಣಿಕ ವಿದ್ಯಾರ್ಹತೆ:
ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಇ, ಐಸಿಎಸ್ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ :
ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಪೂರೈಸಿರಬೇಕು.
ಸಾಮಾನ್ಯ ವರ್ಗ ಗರಿಷ್ಠ : 35 ವರ್ಷ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 40 ವರ್ಷ
ಪ್ರವರ್ಗ 2ಎ/ಬಿ/3ಎ/3ಬಿ : 38 ವರ್ಷ
ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ
Visit the website www.mysore-va.kar.nic.in for selection and verification PDF list, cut off dates.
Karnataka Government Mysore District Revenue Department has invited application for the post of Village Accountant(VA jobs) 2017 18. Read more here..