Negotiable ಕನ್ನಡ ಪದದ ಅರ್ಥ
1) ಚೌಕಾಶಿ
2) ಬದಲಾಯಿಸಲು ಅವಕಾಶವಿರುವ
3) ಹೆಚ್ಚು ಕಡಿಮೆ ಮಾಡಬಹುದಾದ
4) ದಾಟಲು ಸಾಧ್ಯವಾದ
5) ನಗದು ಪರಿವರ್ತಕ
6) ಚರ್ಚೆ ಅಥವಾ ಮಾರ್ಪಾಡಿಗೆ ಮುಕ್ತವಾದ
ಕ್ರಿಯಾಪದವಾಗಿ ನೆಗೋಶಬಲ್ ಅರ್ಥವನ್ನು ನೋಡುವುದಾದರೆ..
1) ಚೌಕಾಶಿ
2) ಚೌಕಾಶಿ ಮಾಡಲು
3) ಮಾತುಕತೆ
4) ಸಂಘಟಿಸಿ ಮತ್ತು ಮಾತನಾಡಿ
5) ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದಾದ
6) ಸಮಾಲೋಚಿಸಿ
7) ವ್ಯವಹಾರದಲ್ಲಿ ಕಡಿಮೆ ಮಾಡಲು ಅನುಕೂಲವೇ
ನೆಗೋಶಬಲ್ ಕನ್ನಡ ಪದದ ಅರ್ಥವನ್ನು ವಿಶೇಷಣ ಪದವಾಗಿ ಮತ್ತು ಕ್ರಿಯಾಪದವಾಗಿ ಎಲ್ಲ ಅರ್ಥೈಸಿಕೊಂಡು ಬಳಕೆ ಮಾಡಬಹುದು. ನೆಗೋಶಬಲ್ ಪದವನ್ನು ಕ್ರಿಯಾಪದವಾಗಿ ಬಳಕೆ ಮಾಡುವುದಾದರೆ ಚೌಕಾಶಿ, ಹೆಚ್ಚು ಕಡಿಮೆ ಆಗಬಹುದಾ, ಕಡಿಮೆ ಮಾಡಬಹುದಾ ಎಂದು ವ್ಯಾಪರ ವ್ಯವಹಾರಗಳಲ್ಲಿ, ಹಾಗೂ ಉದ್ಯೋಗಿಗಳಿಗೆ ವೇತನ ಫಿಕ್ಸ್ ಮಾಡುವ ವೇಳೆಯೂ ಬಳಕೆ ಮಾಡಲಾಗುತ್ತದೆ.
ಉದಾಹರಣೆಗೆ ಹೆಚ್ಆರ್ ಮ್ಯಾನೇಜರ್ ಒಬ್ಬರು ಉದ್ಯೋಗ ಆಕಾಂಕ್ಷಿ ಹೇಳಿದ ನಿರೀಕ್ಷಿತ ವೇತನಕ್ಕೆ ಇದು ನೆಗೋಶಬಲ್’ ಹಾ ಎಂದು ಕೇಳಬಹುದು. ಅಂದರೆ ಇದರಲ್ಲಿ ಕಡಿಮೆ ಆಗಬಹುದು, ಹೆಚ್ಚು-ಕಡಿಮೆ ಮಾಡಬಹುದಾದ ಎಂತಲೂ ಆಗಬಹುದು