ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿಯನ್ನು ಅಪ್ಡೇಟ್ ಮಾಡುತ್ತದೆ ಎಂದು ಕೇಳಿದಾಗಿನಿಂದ ಬಹಳಷ್ಟು ಬಳಕೆದಾರರಿಗೆ ಗೊಂದಲ ಉಂಟಾಗಿದೆ. ಅಂದರೆ ತನ್ನ ಎಲ್ಲಾ ಮೆಸೇಜ್ಗಳನ್ನು ಓದುವುದೇ, ಏನೇನು ಮೆಸೇಜ್ ಮಾಡುತ್ತೇನೆ, ಯಾರಿಗೆ ಮಾಡುತ್ತೇನೆ ಎಂದೆಲ್ಲಾ ತಿಳಿಯುವುದೇ. ಹೀಗೆ ಏನೇನೋ ಕಲ್ಪನೆ ಉಂಟಾಗಿದೆ.
ಅಂದಹಾಗೆ ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿ ಬಗ್ಗೆ ತಿಳಿಯುವ ಮುನ್ನ ಒಂದು ವಿಷಯ ತಿಳಿದುಕೊಳ್ಳಲೇಬೇಕು. ವಾಟ್ಸಾಪ್ಗೆ ತನ್ನ ಬಳಕೆದಾರರ ಯಾವ ಮಾಹಿತಿ ಗೊತ್ತಿರುತ್ತದೆ ಎಂದು.
ವಾಟ್ಸಾಪ್ನ ಪೇರೆಂಟ್ ಕಂಪನಿ ಫೇಸ್ಬುಕ್. ಫೇಸ್ಬುಕ್ ಒಡೆತನದಲ್ಲೇ ಈ ವಾಟ್ಸಾಪ್ ಮತ್ತು ಫೋಟೋಶೇರಿಂಗ್ ಅಪ್ಲಿಕೇಶನ್ ಇನ್ಸ್ಟಾಗ್ರಾಂ ಇರುವುದು. ಆದ್ದರಿಂದ ಈ ಮೂರು ಕಂಪನಿಗಳು (ಪ್ಲಾಟ್ಫಾರ್ಮ್) ತಮ್ಮ ಬಳಕೆದಾರರ ಪರಸ್ಪರ ಡಾಟಾವನ್ನು ಹಂಚಿಕೊಳ್ಳವ ಸಾಧ್ಯತೆ ಇರುತ್ತದೆ. ಆದರೆ ಅದು ಯಾವ ಡಾಟಾ ಎಂಬುದನ್ನೇ ಈಗ ವಾಟ್ಸಾಪ್ ಕ್ಲಿಯರ್ ಆಗಿ ಹೇಳಿದೆ.
ಒಂದೇ ಮೊಬೈಲ್ ನಂಬರ್ ನೀಡಿ ಹಲವು ಫೋನ್ಗಳಲ್ಲಿ ವಾಟ್ಸಾಪ್ ಬಳಕೆ ಸಾಧ್ಯವೇ?
ವಾಟ್ಸಾಪ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಬಳಕೆ ಮಾಡುತ್ತಿರುವ ಪ್ರತಿಯೊಬ್ಬ ಬಳಕೆದಾರನ ಫೋನ್ ನಂಬರ್, ಅತ ಇರುವ ಸ್ಥಳ, ಆತನ ಮೊಬೈಲ್ ಯಾವುದು, ಎಂಬ ಕನಿಷ್ಠ ಮಾಹಿತಿಯನ್ನು ವಾಟ್ಸಾಪ್ ಹೊಂದಿರುತ್ತದೆ. ಅದನ್ನು ಬಿಟ್ಟು ಗರಿಷ್ಠವಾಗಿ ವಾಟ್ಸಾಪ್ ತನ್ನ ಬಳಕೆದಾರನಿಗೆ ಕಸಿವಿಸಿಯಾಗುವಂತೆ ಇನ್ಯಾವುದೇ ಮಾಹಿತಿಯನ್ನು ಕದಿಯುವುದಿಲ್ಲ. ಇನ್ನಷ್ಟು ಕ್ಲಿಯರ್ ಅಗಿ ಹೇಳುವುದಾದರೆ..
– ವಾಟ್ಸಾಪ್ ಆಗಲಿ, ಫೇಸ್ಬುಕ್ ಆಗಲಿ ಬಳಕೆದಾರರ ವೈಯಕ್ತಿಕ ಮೆಸೇಜ್ ಅನ್ನು ನೋಡುವುದಿಲ್ಲ. ಹಾಗೆಯೇ ಕೇಳುವುದು ಇಲ್ಲ. ವೈಯಕ್ತಿಕ ಮೆಸೇಜ್ಗಳು ಎಂಡ್ ಟು ಎಂಡ್ ಅಂದರೆ ಮೆಸೇಜ್ ಕಳಿಸಿದಾಗಿನಿಂದ, ಸ್ವೀಕೃತದಾರ ಮೆಸೇಜ್ ನೋಡುವವರೆಗೆ ಸುರಕ್ಷಿತವಾಗಿಯೇ ಇರುತ್ತದೆ. ಈ ಫೀಚರ್ ಮುಂದುವರೆಯಲಿದೆ.
– ಬಳಕೆದಾರರು ಮೆಸೇಜ್ ಅಥವಾ ಕರೆ ಮಾಡುವಾಗ ಲಾಗಿನ್ ಆಗಿರುವುದಿಲ್ಲ. ಅಂದರೆ ಬಳಕೆದಾರ ಬಳಕೆ ಸಮಯದಲ್ಲಿಯೂ ಅದು ಯಾವುದೇ ಡಾಟಾ ಪಡೆಯಲು ಯತ್ನಿಸುವುದಿಲ್ಲ.
ಬೆಂಗಳೂರಿನಂತ ನಗರಗಳಲ್ಲಿರುವವರು ಒಮ್ಮೆಯಾದರೂ Quick Ride ಆಪ್ ಬಗ್ಗೆ ತಿಳಿದುಕೊಳ್ಳಲೇಬೇಕು.!
– ವಾಟ್ಸಾಪ್ ನೀವು ನಿಮ್ಮ ಸ್ನೇಹಿತರಿಗೆ, ಯಾರಿಗೆ ಕಳುಹಿಸಿದ ಲೊಕೇಶನ್ ಅನ್ನು ನೋಡುವುದಿಲ್ಲ. ಅದು ಸಹ ಎಂಡ್ ಟು ಎಂಡ್ ಸುರಕ್ಷಿತವಾಗಿರುತ್ತದೆ.
– ವಾಟ್ಸಾಪ್ ನಿಮ್ಮ ಕಾಂಟ್ಯಾಕ್ಟ್ಗಳನ್ನು ಫೇಸ್ಬುಕ್ನೊಂದಿಗೆ ಹಂಚಿಕೊಳ್ಳುವುದಿಲ್ಲ. (ಇತರೆ ಯಾವುದೇ ಅಪ್ಲಿಕೇಶನ್ನೊಂದಿಗೂ ಶೇರ್ ಮಾಡುವುದಿಲ್ಲ).
– ವಾಟ್ಸಾಪ್ನಲ್ಲಿನ ಯಾವುದೇ ಗ್ರೂಪ್ನ ಮೆಸೇಜ್ ಅನ್ನು ಸಹ ಫೇಸ್ಬುಕ್ ನೊಂದಿಗೆ ಹಂಚಿಕೊಳ್ಳುವುದಿಲ್ಲ. ನೀವು ಯಾವುದೇ ಗ್ರೂಪ್ನ ಮೆಂಬರ್ ಆಗಿದ್ದರೂ ಡಾಟಾದ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ.
ವಾಟ್ಸಾಪ್ ಸದ್ಯ ಬಿಡುಗಡೆ ಮಾಡಿರುವ ಹೊಸ ಪ್ರೈವೆಸಿ ಪಾಲಿಸಿಯು ಬ್ಯುಸಿನೆಸ್ ಮೆಸೇಜ್ಗೆ ಮಾತ್ರ ಅನ್ವಯವಾಗುತ್ತದೆ.
ಅಂದರೆ ಬ್ಯುಸಿನೆಸ್ ಉದ್ದೇಶದಿಂದ ಫೋನ್ ಮೂಲಕ ನಡೆಸುವ ಸಂವಹನ, ಇ-ಮೇಲ್, ವಾಟ್ಸಾಪ್ ಚಾಟ್ ಡಾಟಾವನ್ನ ಫೇಸ್ಬುಕ್ ಸಹ ತನ್ನ ಮಾರ್ಕೆಟ್ ಉದ್ದೇಶಕ್ಕೆ ಬಳಸುತ್ತದೆ.
ಅದು ಹೇಗೆ ಎಂದರೆ ಗೂಗಲ್ನಲ್ಲಿ ಇಂದು ನೀವು ಯಾವುದೋ ಒಂದು ಪ್ರಾಡಕ್ಟ್ ಹೆಸರು ಸರ್ಚ್ ಮಾಡಿದಲ್ಲಿ, ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ಇನ್ನು ನೀವು ಯಾವುದೇ ಅಪ್ಲಿಕೇಶನ್ಗಳು, ವೆಬ್ಸೈಟ್ಗಳಿಗೆ ಭೇಟಿ ನೀಡಿದರು ಪ್ರದರ್ಶನವಾಗುತ್ತಿರುತ್ತವೆ. ಅಂತೆಯೇ ಫೇಸ್ಬುಕ್ ಸಹ ಜಾಹೀರಾತುಗಳನ್ನು ಬಳಕೆದಾರರಿಗೆ ಪ್ರದರ್ಶನ ಮಾಡುತ್ತದೆ ಅಷ್ಟೆ. ಅಲ್ಲದೇ ವಾಟ್ಸಾಪ್ ಫಾರ್ ಬ್ಯುಸಿನೆಸ್ ಬಳಕೆದಾರರಿಗೆ ಮಾತ್ರ ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿ ಬಿಡುಗಡೆ ಮಾಡಿರುವುದು.
ಅದನ್ನು ಬಿಟ್ಟು ವಾಟ್ಸಾಪ್ ನ ಹೊಸ ಪ್ರೈವೆಸಿ ಪಾಲಿಸಿ ಎಂದಾಕ್ಷಣ ಬಳಕೆದಾರ ತನ್ನ ಗರ್ಲ್ ಫ್ರೆಂಡ್ಗೆ, ಅಥವಾ ಗರ್ಲ್ ಬಾಯ್ಫ್ರೆಂಡ್ಗೆ ಕಳುಹಿಸಿದ, ಸ್ನೇಹಿತರು ಒಬ್ಬರಿಗೊಬ್ಬರು ನಡೆಸಿದ ಯಾವುದೇ ಮೆಸೇಜ್ಗಳ ಲಾಭವನ್ನು ವಾಟ್ಸಾಪ್ ಆಗಲಿ ಅಥವಾ ಇದರ ಪೇರೆಂಟ್ ಕಂಪನಿ ಫೇಸ್ಬುಕ್ ಆಗಲಿ ಪಡೆಯುವುದಿಲ್ಲ.