ಹೆಣ್ಣಿಗೆ ನೈಸರ್ಗಿಕ ದತ್ತವಾಗಿ ಆಗುವ ‘ನಾರ್ಮಲ್ ಡೆಲಿವರಿ ‘ ಎನ್ನುವುದು ತುಂಬಾ ಅಪರೂಪದ ವಿಚಾರವಾಗಿದೆ. ಕಾರಣ ತುಂಬ ಇದೆ ಆದರೆ ಯಾವುದೇ ಹೆಣ್ಣು ತಾನು ಅನುಸರಿಸುವ ಜೀವನಶೈಲಿಯಿಂದ ನಾರ್ಮಲ್ ಡೆಲಿವರಿಯಾಗುವಂತೆ ಮಾಡಬಹುದು. ಮನಸ್ಸಿನಲ್ಲಿ ನಾರ್ಮಲ್ ಡೆಲಿವರಿ ಆಗಬೇಕು ಎಂಬ ಆಸೆ ಇದ್ದರೂ ಅದರಿಂದ ಎದುರಾಗುವ ತೊಂದರೆಗಳನ್ನು ಮತ್ತು ಹೆರಿಗೆ ಸಮಯದಲ್ಲಿ ಅಪಾರವಾದ ನೋವು ಅನುಭವಿಸಬೇಕು ಎಂಬ ಭಯದಿಂದ ಗರ್ಭಿಣಿ ಮಹಿಳೆಯರು ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ. ಹಿಂದಿನ ಕಾಲದಲ್ಲಿ ಸಿಸೇರಿಯನ್ ಎಂಬ ಪದವೇ ಇರಲಿಲ್ಲ. ಪ್ರತಿಯೊಬ್ಬರಿಗೂ ಸರಳವಾದ ಹೆರಿಗೆಯ ಸಂದರ್ಭವೇ ಇರುತ್ತಿತ್ತು. ಆಗ ಹುಟ್ಟಿದ ಮಕ್ಕಳನ್ನು ಇಂದಿನ ಮಕ್ಕಳ ಜೊತೆಗೆ ಅಂದರೇ ಸಿಸೇರಿಯನ್ ಮಾಡಿಸಿ ಹುಟ್ಟಿದ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂದು ನಾವು ನೊಡುತ್ತಿದ್ದೇವೆ ಕಾರಣ ಯಾವುದೇ ಕೆಲಸವಾಗಲೇ ನೈಸರ್ಗಿಕ ದತ್ತವಾಗಿ ಆದರೆ ಅದಕ್ಕೆ ಪ್ರಾಮುಖ್ಯತೆ ಜಾಸ್ತಿ ಇರುತ್ತದೆ ಹಾಗೇ ಈ ಡೆಲಿವರಿ ವಿಷಯದಲ್ಲೂ ಕೂಡ.
ಗರ್ಭಿಣಿ ಮಹಿಳೆಯರು ಒಂದು ವೇಳೆ ಸರಳವಾದ ನೈಸರ್ಗಿಕ ದತ್ತವಾದ ಹೆರಿಗೆಗೆ ಮನಸ್ಸು ಮಾಡಿದರೆ ಅನುಸರಿಸಬೇಕಾದ ಕೆಲವು ಟಿಪ್ಸ್‍ಗಳು ಈ ಕೆಳಗಿನಂತಿವೆ
• ಮಹಿಳೆ ತಾನು ಮಗುವನ್ನು ಪಡೆಯಬೇಕು ಎಂದುಕೊಂಡರೇ ಅವರಿಗೆ ಉಪಯೋಗವಾಗಲಿ ಮತ್ತು ಮಾಹಿತಿಯ ಕೊರತೆ ಆಗದಿರಲಿ ಎಂದು ವೈದ್ಯಕೀಯ ತಂಡ ಗರ್ಭಾವಸ್ಥೆಯಲ್ಲಿ ಯಾವೆಲ್ಲಾ ಬಗೆಯ ತೊಂದರೆಗಳು ಮತ್ತು ಗರ್ಭಾವಸ್ಥೆಯಲ್ಲಿ ಹಾಗು ಹೆರಿಗೆಯ ಸಮಯದಲ್ಲಿ ಎಂತಹ ಸಂದರ್ಭಗಳು ಎದುರಾಗಬಹುದು ಎಂಬ ಬಗ್ಗೆ ತರಗತಿಗಳನ್ನು ನಡೆಸುತ್ತಾರೆ. ಒಂದು ವೇಳೆ ನಿಮಗೆ ನಿಮ್ಮ ಹತ್ತಿರದಲ್ಲಿ ಈ ಸೌಲಭ್ಯವಿದ್ದರೆ ಇದನ್ನು ದಯವಿಟ್ಟು ಉಪಯೋಗಿಸಿಕೊಳ್ಳಿ. ಇಲ್ಲವೆಂದರೆ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಈ ವಿಚಾರವಾಗಿ ಮಾಹಿತಿ ಸಂಗ್ರಹಿಸಿ. ಗರ್ಭಾವಸ್ಥೆಗೆ ತಲುಪುವ ಮುಂಚೆ ಗರ್ಭಾವಸ್ಥೆಯ ಸಮಯದಲ್ಲಿ ನೀವು ಅನುಸರಿಸಬೇಕಾದ ಆಹಾರ ಪದ್ಧತಿ, ವ್ಯಾಯಾಮ, ನೋವು ರಹಿತ ಹೆರಿಗೆ ಇತ್ಯಾದಿಗಳ ಬಗ್ಗೆ ಸಂಪೂರ್ಣವಾಗಿ ನಿಮಗೆ ನೀವು ಅರಿವು ಮೂಡಿಸಿಕೊಳ್ಳಿ.
• ಯಾವಾಗಲೂ ಒಂದು ಕಡೆ ಸುಮ್ಮನೆ ಕೂರುವುದರಿಂದ ದೇಹದ ರೋಗ – ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗುವುದರಿಂದ ಕೈಲಾದ ಸಣ್ಣ ಪುಟ್ಟ ಮನೆ ಕೆಲಸಗಳನ್ನು ಮಾಡುವುದರಿಂದ ಹಿಡಿದು ಸರಳವಾದ ಚಿಕ್ಕ ಪುಟ್ಟ ವ್ಯಾಯಾಮಗಳನ್ನು ಮಾಡುತ್ತ. ಪ್ರಮುಖವಾಗಿ ಸೊಂಟದ ಭಾಗದ ಮಾಂಸ ಖಂಡಗಳು ಸಲೀಸಾಗುವಂತೆ ಮತ್ತು ಹೆರಿಗೆಯ ಸಮಯದಲ್ಲಿ ಕಂಡು ಬರುವ ನೋವನ್ನು ಸಹಿಸಿಕೊಳ್ಳುವಂತೆ ಅನುಕೂಲವಾಗುವ ವ್ಯಾಯಾಮಗಳು ಈ ಸಮಯದಲ್ಲಿ ಬಹಳ ಮುಖ್ಯ. ಇದಕ್ಕಾಗಿ ಒಬ್ಬ ಅನುಭವಿ ವ್ಯಾಯಾಮ ತಜ್ಞರನ್ನು ಸಂಪರ್ಕಿಸಿ ಗರ್ಭಿಣಿಯರಿಗೆ ಸೂಕ್ತವಾದ ವ್ಯಾಯಾಮಗಳು ಯಾವುವು ಎಂಬುದನ್ನು ತಿಳಿದು ವ್ಯಾಯಾಮ ಮಾಡಲು ಮುಂದಾಗುವುದು ಒಳ್ಳೆಯದು. ವ್ಯಾಯಾಮ ಮಾಡುವುದರಿಂದ ತಾಯಿ ಹಾಗೂ ಗರ್ಭದಲ್ಲಿರುವ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು.
• ಗರ್ಭಾವಸ್ಥೆಯ ಸಮಯದಲ್ಲಿ ಇಂತಹ ಹಲವಾರು ಆಹಾರಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಕೇವಲ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಸತ್ವಗಳನ್ನು ಒದಗಿಸುವ ಆಹಾರಗಳ ಬಗ್ಗೆ ಮಾತ್ರ ಯೋಚನೆ ಮಾಡಬೇಕು. ತಾಜಾ ಹಣ್ಣು ತರಕಾರಿ ಹೆಚ್ಚಾಗಿ ಸೇವಿಸಬೇಕು. ದೇಹವನ್ನು ತಂಪಾಗಿಸಿಕೊಳ್ಳಲು ಹೆಚ್ಚಿನ ದ್ರವಾಹಾರಗಳನ್ನು ತೆಗೆದುಕೊಂಡು ಆರೋಗ್ಯಕರವಾದ ತೂಕ ನಿರ್ವಹಣೆಗೆ ಅತಿಯಾದ ಕೊಬ್ಬಿನ ಅಂಶಗಳನ್ನು ಉಂಟು ಮಾಡುವ ಆಹಾರಗಳನ್ನು ದೂರ ಇಡಬೇಕು.
• ಮನೆಯಲ್ಲಿನ ಸಮಸ್ಯೆ ಏನಾದರೂ ಇದ್ದರೆ ಅದನ್ನೂ ತಲೆಗೆ ಹಚ್ಚಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ಮಾನಸಿಕವಾಗಿ ಒಬ್ಬ ಗರ್ಭಿಣಿ ಮಹಿಳೆಯು ನೊಂದರೆ ಅದರ ಪ್ರಭಾವ ನೇರವಾಗಿ ಗರ್ಭದಲ್ಲಿರುವ ಮಗುವಿನ ಮೇಲೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಭಯ ಪಡಿಸುವ ಸನ್ನಿವೇಶಗಳಿಂದ ದೂರವಿರಬೇಕು. ಹೆಚ್ಚು ಚಿಂತೆ ನೀಡುವ ವಿಚಾರಗಳ ಬಗ್ಗೆ ಯೋಚಿಸಲು ಹೋಗಬಾರದು. ಕೇವಲ ಸಕಾರಾತ್ಮಕ ಆಲೋಚನೆಗಳಿಗೆ ಮಾತ್ರ ಬೆಲೆ ಕೊಡಬೇಕು. ಸಂತೋಷಕರವಾದ ವಾತಾವರಣವನ್ನು ನೀವೇ ನಿರ್ಮಿಸಿಕೊಂಡು ನಿಮ್ಮ ಮನಸ್ಸನ್ನು ಪ್ರಫುಲ್ಲವಾಗಿಸಿಕೊಳ್ಳಲು ಪ್ರಯತ್ನ ಪಡಬೇಕು
• ತಮ್ಮ ಮಾನಸಿಕ ತೊಳಲಾಟದಿಂದ ದೂರವಾಗಲು, ತಮ್ಮ ದೇಹದ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ರಾತ್ರಿಯ ಸಮಯದಲ್ಲಿ ಗರ್ಭಿಣಿಯರು ಚೆನ್ನಾಗಿ ನಿದ್ರೆ ಮಾಡಬೇಕು. ರಾತ್ರಿ ಊಟ ಮಾಡಿದ ನಂತರ ಅರ್ಧ ಗಂಟೆಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿಕೊಳ್ಳುವುದು ಸೂಕ್ತ.
• ಹೆರಿಗೆಯ ಸಂದರ್ಭದಲ್ಲಿ ಗರ್ಭಾವಸ್ಥೆಯಲ್ಲಿರುವ ಮಹಿಳೆ ಆಗಾಗ ಕೆಲವು ಸೆಕೆಂಡುಗಳ ಕಾಲ ಉಸಿರನ್ನು ಬಿಗಿ ಹಿಡಿದುಕೊಳ್ಳಬೇಕಾಗಿ ಬರುತ್ತದೆ. ಹಾಗಾಗಿ ಅಂತಹ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಗೆ ಮೊದಲೇ ಉಸಿರಾಟಕ್ಕೆ ಸಂಬಂಧ ಪಟ್ಟ ವ್ಯಾಯಾಮಗಳನ್ನು ಮಾಡಿ ಮಾನಸಿಕವಾಗಿ ತಯಾರಾಗುವುದು ಒಳ್ಳೆಯದು. ಏಕೆಂದರೆ ಗರ್ಭದಲ್ಲಿ ಬೆಳವಣಿಗೆ ಆಗುತ್ತಿರುವ ಮಗುವಿಗೆ ಆಮ್ಲಜನಕ ಅತ್ಯಂತ ಮುಖ್ಯ. ಹಾಗಾಗಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಧ್ಯಾನ, ಯೋಗ ಮಾಡುವ ಅಭ್ಯಾಸ ಕೈಗೊಳ್ಳಬೇಕು.
ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿ ದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದು ದೇಹವನ್ನು ನಿರ್ಜಲೀಕರಣದ ಸಮಸ್ಯೆಯಿಂದ ದೂರ ಮಾಡುವುದರ ಜೊತೆಗೆ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ದ್ರವ ಅಂಶಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಗರ್ಭಿಣಿಯರಲ್ಲಿ ಕಾಡುವ ಮೂತ್ರನಾಳದ ಸೋಂಕು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ನೀರಿನ ಜೊತೆಗೆ ಪೌಷ್ಟಿಕ ಭರಿತವಾದ ಹಣ್ಣಿನ ರಸ, ಕೇಸರಿ ಹಾಕಿದ ಬಾದಾಮಿ ಹಾಲು ಇತ್ಯಾದಿಗಳನ್ನು ಸೇವನೆ ಮಾಡಬೇಕು.
• ಗರ್ಭಿಣಿಯರು ತಮ್ಮ ಮೊದಲ ಎರಡು ತ್ರೈಮಾಸಿಕಗಳಲ್ಲಿ ಮೇಲಿನ ಅನುಸರಣೆ ಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಮೂರನೆಯ ತ್ರೈಮಾಸಿಕ ಅಂದರೆ ಗರ್ಭಾವಸ್ಥೆಯಲ್ಲಿ ಅದಾಗಲೇ ಆರು ತಿಂಗಳು ಕಳೆದ ನಂತರ ಮಸಾಜ್ ಪ್ರಕ್ರಿಯೆಯನ್ನು ಹೊಸದಾಗಿ ಸೇರಿಸಿಕೊಳ್ಳಬೇಕು. ಏಕೆಂದರೆ ಹೆರಿಗೆ ಸಮಯ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಸರಾಗವಾಗಿ ಸಾಧಾರಣ ಹೆರಿಗೆ ಆಗಲು ಇದು ಸಹಾಯ ಮಾಡುತ್ತದೆ. ಜೊತೆಗೆ ಮಸಾಜ್ ಪ್ರಕ್ರಿಯೆಯಿಂದ ಮೈಕೈ ನೋವು, ಕೀಲುನೋವು ಮಾಂಸಖಂಡಗಳ ಸೆಳೆತ ಇತ್ಯಾದಿ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ. ಗರ್ಭಾವಸ್ಥೆಯ ಸಮಯದಲ್ಲಿ ಅಜೀರ್ಣತೆಯ ಪ್ರಭಾವದಿಂದ ಉಂಟಾಗುವ ಆರೋಗ್ಯದ ಅಸ್ವಸ್ಥತೆಯನ್ನು ಮಸಾಜ್ ಪ್ರಕ್ರಿಯೆ ದೂರ ಮಾಡುತ್ತದೆ ಎಂದು ಹೇಳಬಹುದು.
ಸಂಶೋಧನೆ ಪ್ರಕಾರ ತಂದೆಯಾಗಲು ಉತ್ತಮ ವಯಸ್ಸು ಯಾವುದು ಗೊತ್ತೇ?