ಭಾರತೀಯ ಸ್ಮಾಟ್ಫೋನ್ ಗೀಕ್ಗಳ ಬಹುನಿರೀಕ್ಷಿತ ಡಿವೈಸ್ ಒಪ್ಪೋ ಕೆ3 ( Oppo K3 ) ಅಮೆಜಾನ್ ನಲ್ಲಿ ಇದೇ ಜುಲೈ 19 ಕ್ಕೆ ಬಿಡುಗಡೆ ಆಗುತ್ತಿದೆ. ಈ ಸ್ಮಾರ್ಟ್ಪೋನ್ಗಾಗಿ ಎದುರು ನೋಡುತ್ತಿರುವವರು ಅಮೆಜಾನ್ ವೆಬ್ಸೈಟ್ಗೆ ಭೇಟಿ ನೀಡಿ ಈಗಿನಿಂದಲೇ ಬುಕ್ ಮಾಡಿ ಖರೀದಿಸಲು ರಿಜಿಸ್ಟೇಷನ್ ಮಾಡಿಕೊಳ್ಳಲು ಮತ್ತು ಡಿವೈಸ್ ಲಭ್ಯತೆ ಇದ್ದಾಗ ನೋಟಿಫೈ ಮಾಡುವ ಸೇವೆ ಪಡೆಯಲು ಅವಕಾಶ ನೀಡಿದೆ.
ಇದೇ ಒಪ್ಪೋ ಕೆ3 ಸ್ಮಾಟ್ಫೋನ್ ಮೇ ತಿಂಗಳಲ್ಲಿ ಚೀನದಲ್ಲಿ ಬಿಡುಗಡೆ ಆಗಿತ್ತು. ಜುಲೈ 19 ಕ್ಕೆ ಈಗ ಭಾರತೀಯರ ಕೈ ಸೇರಲು ಡಿವೈಸ್ ರೆಡಿ ಆಗುತ್ತಿದ್ದು, ಇದರ ಸಂಪೂರ್ಣ ಫೀಚರ್ಗಳನ್ನು ಇಲ್ಲಿ ನೀಡಲಾಗಿದೆ.
ಒಪ್ಪೋ ಕೆ3 ಫೀಚರ್ಗಳು(Oppo K3 features)
– ಒಪ್ಪೋ ಕೆ3 ಪಾಪರ್ ಸೆಲ್ಪಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.
– ಡಿಸ್ಪ್ಲೆಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿದೆ.
– ಆಕ್ಟಾ-ಕೋರ್ ಕ್ವಾಲ್ಕಂ ಸ್ನಾಪ್ಡ್ರಾಗನ್ 710 soC ಪ್ರೊಸೆಸರ್
– 256GB ವರೆಗೂ ಆನ್ಬೋರ್ಡ್ ಸ್ಟೋರೇಜ್ ಸಾಮರ್ಥ್ಯ ಹೊಂದಲಿದೆ.
– ಡ್ಯುಯಲ್ ನ್ಯಾನೊ ಸಿಮ್ಹಾಕಿಕೊಳ್ಳಬಹುದು.
– ಒಪ್ಪೋ ಆಂಡ್ರಾಯ್ಡ್ 9.0 ಪೈ ಆಧಾರಿತವಾದ ಕಲರ್ ಓಎಸ್ ಸಿಸ್ಟಮ್ ಚಾಲಿತವಾಗಿದೆ.
ಒಪ್ಪೋ ಕೆ3 ಸ್ಮಾಟ್ಪೋನ್ ಕ್ಯಾಮೆರಾ ಫೀಚರ್
– 16MP ಪಾಪರ್ ಸೆಲ್ಪಿ ಕ್ಯಾಮೆರಾ
– 16MP ಪ್ರೈಮರಿ ಕ್ಯಾಮೆರಾ ಜೊತೆಗೆ 2MP ಡೆಪ್ತ್ ಸೆನ್ಸಾರ್ ಸಪೋರ್ಟ್ ಹೊಂದಿದೆ.
– ಒಪ್ಪೋ ಕೆ3 3765mAh ಬ್ಯಾಟರಿ ಸಾಮಾರ್ಥ್ಯವನ್ನು ಕಂಪನಿಯ VOOC 3.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ.
ಒಪ್ಪೋ ಕೆ3 ಸ್ಮಾಟ್ಪೋನ್ನ ಭಾರತದಲ್ಲಿಯ ನಿರೀಕ್ಷಿತ ಬೆಲೆ
6GB RAM+64GB ಸ್ಟೋರೇಜ್ ಸಾಮಾರ್ಥ್ಯ ಹೊಂದಿರುವ ಒಪ್ಪೋ ಕೆ3 ಸ್ಮಾಟ್ಫೋನ್ ಬೆಲೆ ರೂ.16,100. 6GB RAM+128GB ಸ್ಟೋರೇಜ್ ಸಾಮಾರ್ಥ್ಯ ಹೊಂದಿರುವ ಡಿವೈಸ್ ಬೆಲೆ ರೂ.19,100. ಟಾಪ್ ಎಂಡ್ ನ 8GB RAM+128GB ಸ್ಟೋರೇಜ್ ಸಾಮಾರ್ಥ್ಯ ಹೊಂದಿರುವ ಡಿವೈಸ್ ಬಜೆಟ್ ಬೆಲೆ ರೂ.23,200.
ಒಪ್ಪೋ ಕೆ3 ( Oppo K3 ) ಸ್ಮಾಟ್ಪೋನ್ ನ ಇತರೆ ಫೀಚರ್ಗಳು ಮತ್ತು ಫ್ಲ್ಯಾಶ್ ಅಪ್ಡೇಟ್ಸ್ಗಾಗಿ ಅಮೆಜಾನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಕಾರಣ ಅಮೆಜಾನ್ ಈ ಡಿವೈಸ್ನ ಮಾರಾಟ ಹೊಣೆ ಹೊತ್ತಿದೆ.
Where can i get Oppo k3 smartphone in india is your question – click here