ಹಾಸನ: ರೈತರು ಪಂಜಾಬ್ ರಾಜ್ಯದಿಂದ ಬಿತ್ತನೆ ಬೀಜ ಆಲೂಗಡ್ಡೆಯನ್ನು ತರಿಸುವುದರ ಬದಲು ಸ್ವಾವಲಂಭಿಯಾಗಿ ಅಂಗಾಂಶ ಕೃಷಿ ತಂತ್ರಜ್ಞಾನದಿಂದ ಆಲೂಗೆಡ್ಡೆ ಬೆಳೆದು ರಪ್ತು ಮಾಡಬಹುದಾಗಿದೆ ಎಂದು ಹಾಸನ ಜಿಲ್ಲೆಯ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ತೋಟಗಾರಿಕೆ ಇಲಾಖೆ, ಹೆಚ್.ಆರ್,ಇ.ಎಸ್. ಸೋಮನಹಳ್ಳಿಕಾವಲು, ಕೃಷಿ ವಿಜ್ಞಾನ ಕೇಂದ್ರ, ಕಂದಲಿ ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಸಂಸ್ಥೆಯ ಸಹಯೋಗದೊಂದಿಗೆ ದೇವರಾಜುರವರ ಜಮೀನಿನಲ್ಲಿ ಅಂಗಾಂಶ ಕೃಷಿ ಪದ್ಧತಿಯ ಮೂಲಕ ಆಲೂಗಡ್ಡೆ ಬೆಳೆ ಬೆಳೆಯುವ ತಾಂತ್ರಿಕತೆಯ ಬಗ್ಗೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. ಹಾಸನದಲ್ಲಿ ಬಿತ್ತನೆ ಬೀಜಕ್ಕಾಗಿ ಪಂಚಾಬ್ ವರ್ತಕರ ಲಾಭಿ ಹೆಚ್ಚಾಗಿದ್ದು ಈ ತಂತ್ರಜ್ಞಾನದಿಂದ ಪಾಲಿಮನೆಗಳನ್ನು ನಿರ್ಮಿಸಿ ಆಲೂಗಡ್ಡೆ ಸಸಿಗಳನ್ನು ಬೆಳೆಸಬಹುದಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಸ್ವರೂಪ್ ಮಾತಾನಾಡಿ ಹಾಸನ ತಾಲ್ಲೂಕಿನಲ್ಲಿ ಶೇ 60 ರಷ್ಟು ಆಲೂಗೆಡ್ಡೆ ಬೆಳೆಯನ್ನು ಬೆಳೆಯುತ್ತಾರೆ ಅಲ್ಲದೆ ಹಾಸನ ಜಿಲ್ಲೆಯಲ್ಲಿ ವರ್ಷಪೂರ್ತಿ ಬೆಳೆಯನ್ನು ಬೇರೆ ಹಂಗಾಮಿಗಳಲ್ಲಿಯೂ ಬೆಳೆಯುವುದರಿಂದ ಈ ಕ್ಷೇತ್ರೋತ್ಸವ ಸಫಲತೆಯನ್ನು ಕಂಡಿರುತ್ತದೆ ಇದರ ಪ್ರಯೋಜನವನ್ನು ಎಲ್ಲಾ ರೈತರು ಪಡೆದುಕೊಂಡು ಆರ್ಥಿಕ ಅಭಿವೃದ್ದಿಹೊಂದುವಂತೆ ಅವರು ತಿಳಿಸಿದಲ್ಲದೆ, ರೈತರು ಹೆಚ್ಚು ಶೀಥಲ ಗೃಹ ನಿರ್ಮಿಸುವಂತೆ ಹೇಳಿದರು.
ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತಾರಣಾ ಕೇಂದ್ರದ ಮುಖ್ಯಸ್ಥರರಾದ ಡಾ|| ಅಮರ ನಂಜುಂಡೇಶ್ವರ ರೈತರಿಗೆ ಪ್ರಾಯೋಗಿಕವಾಗಿ ಅಂಗಾಂಶ ಕೃಷಿ ಆಲೂಗಡ್ಡೆ ಸಸಿಗಳನ್ನು ವಿತರಿಸಿ ಅಂಗಾಂಶ ಕೃಷಿಯ ಪ್ರಯೊಗಿಕತ್ವವನ್ನು ಕುರಿತು ವಿವರಿಸಿದರು.
ತೋಟಗಾರಿಕೆ ಉಪ ನಿರ್ದೇಶಕರಾದ ಯೋಗೇಶ್ ಮಾತನಾಡಿ ಈ ತಂತ್ರಜ್ಞಾನದಿಂದ ಮುಂದಿನ ವರ್ಷಗಳಲ್ಲಿ ಹೆಚ್ಚು ಪ್ರದೇಶಗಳಲ್ಲಿ ಆಲೂಗಡ್ಡೆಯನ್ನು ಬೆಳೆಯಬಹುದಾಗಿರುತ್ತದೆಂದು ತಿಳಿಸಿದರು.