ಬೆಳೆಗಳಿಗೆ ಹಾನಿಕಾರಕ, ಜನಜೀವನಕ್ಕೆ ಉಪದ್ರವಕಾರಿಯಾದ ಕೀಟಗಳ ನಿರ್ಮೂಲನಕ್ಕೆ ಇಂದು ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಹೆಚ್ಚು ಇಳುವರಿ ಪಡೆಯಬಹುದೆಂಬ ಮನೋಭಾವದಿಂದ ಇಂದು ರೈತರು ಕೀಟನಾಶಕ ಬಳಕೆಗೆ ಮಾರುಹೋಗಿದ್ದಾರೆ.
ಆದರೆ ಕೀಟನಾಶಕಗಳ ಬಳಕೆಯಿಂದ ಮುಂದಿನ ದಿನಗಳಲ್ಲಿ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಂಡು ಬಂಜರು ಭೂಮಿ ಆಗುವುದು ಖಚಿತ. ಇದಕ್ಕಿಂತ ಹೆಚ್ಚಾಗಿ ಬೇಳೆ ಬೆಳೆಯುವ ಹುಮ್ಮಸ್ಸಿನಲ್ಲಿ ಕೀಟನಾಶಕ ಬಳಸುವ ರೈತ ಅಥವಾ ತಮ್ಮ ಕುಂಟುಂಬದವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ರೈತರು ಕೀಟನಾಶಕಗಳನ್ನು ಬಳಸುವಾಗ ಮುನ್ನೆಎಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಇಲ್ಲದಿದ್ದರೆ ಕೀಟನಾಶಕಗಳ ವಿಷಕಾರಿ ಅಂಶವು ಮಾನವನ ಹಾಗೂ ಸಾಕು ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತದೆ.
ಕೀಟನಾಶಕಗಳ ಬಳಕೆಗೆ ಸಂಬಂಧಿಸಿದಂತೆ ರೈತರಲ್ಲಿ ಜಾಗತಿ ಅಗತ್ಯ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ. ಆದ್ದರಿಂದ ಇಂದು ಕನ್ನಡ ಅಡ್ವೈಜರ್ ಕೀಟನಾಶಕಗಳನ್ನು ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಡಲಿದೆ.
- ಕೀಟನಾಶಕ ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:
- ಕೀಟನಾಶಕ ಖರೀದಿಸುವ ಮುನ್ನ ತಜ್ಞರಿಂದ ಸಲಹೆ ಪಡೆಯಿರಿ.
- ಕೀಟನಾಶಕವನ್ನು ಮಕ್ಕಳ ಕೈಗೆ ನಿಲುಕದಂತೆ ದೂರವಿಡಿ.
- ನಾಜಲನ್ನು ಬಾಯಿಂದ ಊದಬಾರದು.
- ಕೀಟನಾಶಕದ ಮಿಶ್ರಣ ಮಾಡುವಾಗ ರಬ್ಬರ್ ಕೈ ಚೀಲ (ಗ್ಲೋವ್) ಧರಿಸಬೇಕು. ಇಲ್ಲವಾದರೆ ಒಂದು ಕೋಲನ್ನು ಉಪಯೋಗಿಸಬೇಕು.
- ಸಿಂಪಡಿಸುವಾಗ ಅವಶ್ಯಕ ರಕ್ಷಣಾ ಕವಚ ಧರಿಸಿ.
- ಶರೀರದ ಯಾವ ಭಾಗಕ್ಕೂ ಈ ಕೀಟನಾಶಕ ತಾಕದಂತೆ ನೋಡಿಕೊಳ್ಳಬೇಕು.
- ಅಕಸ್ಮಾತ್ತಾಗಿ ಕೀಟನಾಶಕ ಮೈ ಮೇಲೆ ಬಿದ್ದರೆ ಕೂಡಲೇ ನೀರಿನಲ್ಲಿ ಆ ಭಾಗವನ್ನು ತೊಳೆಯಬೇಕು.
- ಗಾಳಿಗೆ ಎದುರಾಗಿ ಸಿಂಪಡಣೆ ಮಾಡಬಾರದು.
- ಸಿಂಪಡಣೆ ಸಮಯದಲ್ಲಿ ಅಸ್ವಸ್ಥತೆ ಕಂಡುಬಂದರೆ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.
- ಸಿಂಪಡಣೆಯ ನಂತರ ಸಾಬೂನಿನಿಂದ ಬಟ್ಟೆ ಮತ್ತು ಮೈ ಕೈಯನ್ನು ಚೆನ್ನಾಗಿ ತೊಳೆಯಿರಿ.
- ಸಿಂಪಡಣೆ ಸಮಯದಲ್ಲಿ ಕುಡಿಯುವುದು, ತಿನ್ನುವುದನ್ನು ಮಾಡಬಾರದು.
- ಮನೆಗಳಲ್ಲಿ ಕೀಟನಾಶಕ ಸಿಂಪಡಿಸುವಾಗ ಮೊದಲಿಗೆ ಆಹಾರ ಪದಾರ್ಥಗಳನ್ನು, ತಿಂಡಿ ತಿನಿಸುಗಳನ್ನು, ಪಾತ್ರೆಗಳನ್ನು ಮತ್ತು ಮೇವನ್ನು ದೊಡ್ಡ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಬೇಕು.
- ಮ್ಯಾಲಥಿಯಾನ್ ಹಾಗೂ ಸಿಂಥಟಿಕ್ ಪೈರಿಥ್ರಾಯ್ಡ್ ಕೀಟನಾಶಕಗಳನ್ನು ಉಪಯೋಗಿಸುವಾಗ ಸ್ಟ್ರೇ ಸಿಬ್ಬಂದಿ ರಬ್ಬರ್ ಗ್ಲೋವ್, ರಕ್ಷಣಾ ಉಡುಪುಗಳನ್ನು ಹಾಗೂ ರಕ್ಷಣಾ ಕನ್ನಡಕವನ್ನು ಉಪಯೋಗಿಸಲೇಬೇಕು.
- ಖಾಲಿಯಾದ ಕೀಟನಾಶಕಗಳ ಪೊಟ್ಟಣಗಳನ್ನು ನಾಶಪಡಿಸಿ ಮಣ್ಣಿನಲ್ಲಿ ಹೂಳಬೇಕು.
pesticides are toxic to man and animals. Use pesticides safely. NEVER eat, drink, while using pesticides. For safe handling of pesticides, follow the precautions