ಜನರ ಪ್ರತಿನಿತ್ಯದ ದಿನಚರಿಯನ್ನು ಸರಳಗೊಳಿಸುವಲ್ಲಿ ತಂತ್ರಜ್ಞಾನದ ಪಾತ್ರ ಬಹುದೊಡ್ಡದು. ಅದರಲ್ಲೂ ಸ್ಮಾಟ್ಫೋನ್ನ ಇಲ್ಲದೇ ಜನರು ತಮ್ಮ ದಿನನಿತ್ಯದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಾಗಿದೆ.
ಅಂದಹಾಗೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವವರು ತಮ್ಮ ಪ್ರತಿನಿತ್ಯ ಓಡಾಟಕ್ಕಾಗಿ ಇಂದು ಸ್ಮಾಟ್ಫೋನ್ ನಲ್ಲಿ ಹಲವು ರೀತಿಯ ಅಪ್ಲಿಕೇಶನ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಅವುಗಳು ಊಬರ್, ಓಲಾ, Rapido, ವೊಗೊ(VOGO) ಮತ್ತು ಇತ್ಯಾದಿ. ಈ ಆಪ್ಗಳನ್ನು ನಾವು ಬುಕ್ ಮಾಡಿಕೊಂಡು ಅವರಿಗೆ ಹಣ ಕಟ್ಟಬೇಕು. ಈ ಅಪ್ಲಿಕೇಶನ್ಗಳು ನೀಡುವ ಸೇವೆಯನ್ನೇ ನಾವು ವಿವರಿಸಲು ಹೊರಟಿರುವ ‘QUICK RIDE’ ನೀಡಿದರು ಸಹ, ಅದರ ಉಪಯೋಗ ಇವುಗಳಿಗಿಂತ ಒಂದು ಪಟ್ಟು ಮೇಲು ಹಾಗೂ ಪರಿಸರ ಸ್ನೇಹಿಯಾಗಿದೆ. ಆದ್ದರಿಂದ ‘ಕ್ವಿಕ್ ರೈಡ್’ (Quick Ride) ಮೊಬೈಲ್ ಅಪ್ಲಿಕೇಶನ್ ಬಳಕೆ ಮತ್ತು ಉಪಯೋಗದ ಬಗ್ಗೆ ಸಂಪೂರ್ಣವಾಗಿ ಇಲ್ಲಿ ತಿಳಿಸುತ್ತಿದ್ದೇವೆ.
ಕ್ವಿಕ್ ರೈಡ್ (Quick Ride)
ಕ್ವಿಕ್ ರೈಡ್, ಒಂದು ಕಾರು ಮತ್ತು ಬೈಕ್ ಪೂಲಿಂಗ್ ಅಪ್ಲಿಕೇಶನ್. ಈ ಎರಡು ವಾಹನಗಳು ಇರುವವರು ಯಾರು ಬೇಕಾದರೂ ಈ ಅಪ್ಲಿಕೇಶನ್ ಅನ್ನು ಸ್ಮಾಟ್ಫೋನ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು, ತಾವು ಸಂಚರಿಸುವ ಮಾರ್ಗದಲ್ಲಿ ಇತರೆ ಪ್ರಯಾಣಿಕರು ಹೋಗಬೇಕಾದಲ್ಲಿ ಅವರನ್ನು ಜೊತೆಯಲ್ಲಿ ಕರೆದುಕೊಂಡು, ಅವರು ತಲುಪಬೇಕಾದ ಸ್ಥಳದಲ್ಲಿ ಬಿಟ್ಟು ಹೋಗುವುದು. ಈ ರೀತಿ ಬೇರೆಯವರ ಕಾರಿನಲ್ಲಿ ಹೋಗಲು, ಪ್ರಯಾಣಿಕರು ಸಹ ಈ ಆಪ್ ಡೌನ್ಲೋಡ್ ಮಾಡಿಕೊಂಡಿರಬೇಕು. ಕಾರ್ಪೂಲಿಂಗ್ ಅಥವಾ ಬೈಕ್ಪೂಲಿಂಗ್ ಗಾಗಿ ವಾಹನ ಹೊಂದಿರುವವರು ಮತ್ತು ಪ್ರಯಾಣ ಮಾಡಲು ಬಯಸುವವರು ಇಬ್ಬರು ಸಹ ಆಪ್ ಇನ್ಸ್ಟಾಲ್ ಮಾಡಿಕೊಂಡಿರಬೇಕು.
ಕ್ವಿಕ್ ರೈಡ್ (Quick Ride) ಬಳಕೆ ಹೇಗೆ?
– ಕಾರು, ಬೈಕ್ ಸ್ವಂತವಾಗಿ ಹೊಂದಿರುವವರು ಕಾರ್ಪೂಲಿಂಗ್, ಬೈಕ್ಪೂಲಿಂಗ್ ಗೆ ಇಚ್ಚಿಸುವುದೇ ಆದರೆ, ಅಂತಹವರು ತಮ್ಮ ಸ್ಮಾಟ್ಫೋನ್ ನಲ್ಲಿ ಕ್ವಿಕ್ ರೈಡ್ (Quick Ride) ಆಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು.
– ನಂತರ ತಮ್ಮ ವಾಹನದ ಫೋಟೋ, ರಿಜಿಸ್ಟರ್ ನಂಬರ್ ಮಾಹಿತಿ ನೀಡಬೇಕು. ನಂತರ ಚಲಿಸುವಾಗ ಇತರರಿಗೆ ರೈಡ್ ಆಫರ್ ಮಾಡುವುದಾದರೆ ಆಪ್ ಓಪನ್ ಮಾಡಿ Offer Ride ಆಯ್ಕೆ ಮಾಡಿ ಮಾರ್ಗದ ಮಾಹಿತಿ ಅಪ್ಡೇಟ್ ಮಾಡಬೇಕು.
– ಕ್ವಿಕ್ ರೈಡ್ (Quick Ride) ಬಳಸಿಕೊಂಡು ಪ್ರಯಾಣ ಮಾಡಬಯಸುವವರು ಆಪ್ ಓಪನ್ ಮಾಡಿ Find Ride ಆಯ್ಕೆ ಮಾಡಿಕೊಂಡು, ಎಲ್ಲಿಂದ ಮತ್ತು ಎಲ್ಲಿಗೆ, ಮತ್ತು ಎಷ್ಟು ಜನರು ಎಂಬ ಮಾಹಿತಿ ನೀಡಬೇಕು.
– ಅಥವಾ ಮೇಲಿನ ಮಾಹಿತಿಗಳನ್ನು ನೀಡಿ ಎಷ್ಟು ಗಂಟೆಗೆ ನೀವು ರೈಡ್ ಮಾಡಬೇಕು ಎಂಬುದನ್ನು ಅಪ್ಡೇಟ್ ಮಾಡಿದರೆ ಆ ಸಮಯಕ್ಕೆ ಯಾವುದಾದರೂ ರೈಡ್ ಇರುವ ಬಗ್ಗೆ ಆಪ್ನಲ್ಲಿ ಅಪ್ಡೇಟ್ ದೊರೆಯುತ್ತದೆ.
– ಇದರಿಂದ ರೈಡ್ ಆಫರ್ ಮಾಡಿದವರಿಗೆ ಹಣವು ಸಿಗುತ್ತದೆ. ಹಾಗೆ ರೈಡ್ ಮಾಡಿದವರೂ ಆಪ್ ನಲ್ಲಿ ತೋರಿಸುವ ಹಣ ನೀಡಬೇಕು. ಕೈಗೆ ನಿಲುಕುವಷ್ಟು, ತೃಪ್ತಿದಾಯಕ ಚಾರ್ಜ್ ಆಗಿರುತ್ತದೆ.
– ಕ್ಯಾಶ್ ಹಣ ನೀಡಬೇಕು ಎಂದೇನಿಲ್ಲ. ಫ್ರೀ ಚಾರ್ಜ್, ಪೇಟಿಎಂ, ಡೆಬಿಡ್ ಕಾರ್ಡ್ ಇತರೆ ಆನ್ಲೈನ್ ಪೇಮೆಂಟ್ಗಳ ಮೂಲಕ ಹಣ ಪಾವತಿಸಬಹುದು.
– ರೈಡ್ ಸೇವೆ ಬಯಸುವವರು ಮತ್ತು ರೈಡ್ ಆಫರ್ ನೀಡುವವರು ಇಬ್ಬರು ಬಳಕೆದಾರರನ್ನು ಇಮೇಲ್ ಮತ್ತು ಇತರೆ ಮಾಹಿತಿ ಮೂಲಕ ಸಂಪೂರ್ಣ ಪರಿಶೀಲಿಸಿ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ.
– ಒಮ್ಮೆ ಆಪ್ ಇನ್ಸ್ಟಾಲ್ ಮಾಡಿಕೊಂಡವರು ತಮ್ಮ ಸ್ನೇಹಿತರಿಗೆ ಈ ಆಪ್ ಬಳಸಲು ರೆಫರ್ ಮಾಡಬಹುದು. ಈ ಮೂಲಕ ಅವರು ಪಾಯಿಂಟ್ ಗಳಿಸಬಹುದು. ಗಳಿಸಿದ ಪಾಯಿಂಟ್ಗಳಿಂದಲೇ ಉಚಿತವಾಗಿ ರೈಡ್ ಮಾಡಲು ಸಹಾಯವಾಗುತ್ತದೆ.
ರೈಡ್ ಪಾಯಿಂಟ್ (What is quick ride point)
– ಕ್ವಿಕ್ ರೈಡ್ (Quick Ride) ಬಳಸಿ ರೈಡ್ ಮಾಡುತ್ತ ಹೋದಂತೆ ಆಪ್ ನಲ್ಲಿ ಇಂತಿಷ್ಟು ಪಾಯಿಂಟ್ ಅನ್ನು ಬಳಕೆದಾರರು ಗಳಿಸುತ್ತಾರೆ. ಆ ಪಾಯಿಂಟ್ ಅನ್ನೇ ಮುಂದಿನ ರೈಡ್ಗೆ ಕ್ಯಾಶ್ ಆಗಿ ಪೇಟಿಎಂ ವ್ಯಾಲೆಟ್ ಮೂಲಕ ಪರಿವರ್ತನೆ ಮಾಡಬಹುದು. ಅಥವಾ ಅದನ್ನೇ ಫ್ಯೂಯಲ್ ಹಾಕಿಸಲು ಸಹ ಬಳಸಬಹುದು.
ಶೀಘ್ರ ಸಂವಹನ
ರೈಡ್ ಸೇವೆ ಪಡೆಯುವವರು ಮತ್ತು ರೈಡ್ ಆಫರ್ ಮಾಡುವವರು ಇಬ್ಬರ ನಡುವಿನ ಸಂವಹನಕ್ಕೆ ಆಪ್ ನಲ್ಲಿಯೇ ಮೆಸೇಜ್ ಮತ್ತು ಕರೆ ಮಾಡಲು ಅವಕಾಶ ನೀಡಲಾಗಿದೆ. ಆದ್ದರಿಂದ ಶೀಘ್ರ ಸಂವಹನ ಪ್ರಕ್ರಿಯೆಗೂ ಅವಕಾಶ ನೀಡಲಾಗಿದೆ.
ಕ್ವಿಕ್ ರೈಡ್ (Quick Ride) ಮೊಬೈಲ್ ಅಪ್ಲಿಕೇಶನ್ ಉಪಯೋಗಗಳು
– ದೊಡ್ಡ ದೊಡ್ಡ ನಗರಗಳಲ್ಲಿ ಸ್ವಂತ ವಾಹನ ಇಟ್ಟುಕೊಂಡಿರುವವರು ಈ ಆಪ್ ಬಳಸುವ ಮೂಲಕ ಕಾರ್ಪೂಲಿಂಗ್ ಅವಕಾಶ ನೀಡಿದರೆ ವಾಹನ ದಟ್ಟಣೆ ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ಸಮಾಜಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಕೊಡುಗೆ ನೀಡಿದಂತಾಗುತ್ತದೆ.
– ಹಲವರು ತಾವು ಆಫೀಸ್ಗೆ ಹೋಗುವಾಗ ಒಬ್ಬರೇ ಕಾರಿನಲ್ಲಿ ಸಂಚರಿಸುವುದು ಉಂಟು. ಅಂತಹವರು ಈ ರೀತಿ ಕಾರ್ಪೂಲಿಂಗ್ ಅವಕಾಶ ನೀಡಿದರೆ ಸಮಾಜಕ್ಕೆ ಒಂದು ರೀತಿ ಸೇವೆ ನೀಡಿದಂತೆಯೇ.
– ಬಹುದೊಡ್ಡ ಉಪಯೋಗವೆಂದರೆ ಸಂಚಾರ ದಟ್ಟಣೆ(ಟ್ರಾಫಿಕ್) ಕಡಿಮೆ ಮಾಡಲು ಸಹಾಯಕ.
– ಬಸ್ಸುಗಳಿಗೆ, ಖಾಸಗಿ ವಾಹನಗಳಿಗೆ ಗಂಟೆ ಗಟ್ಟಲೇ ಕಾಯುತ್ತಾ ಕುಳಿತ ಹಲವು ಪ್ರಯಾಣಿಕರಿಗೆ ರೈಡ್ ಆಫರ್ ನೀಡಿ ಸಹಾಯ ಮಾಡಿದಂತೆಯೂ ಆಗುತ್ತದೆ.
– ಕೆಲವರು ಇತರರನ್ನು ಕೂರಿಸಿಕೊಂಡು ಹೋಗಲು ತಮಗೆ ಸಮಯವಿಲ್ಲ, ಆ ತಾಳ್ಮೆಯೂ ಇಲ್ಲ ಎಂದು ಯೋಚಿಸಬಹುದು. ಆದರೆ ಎಲ್ಲರೂ ಹೀಗೆ ಯೋಚಿಸುತ್ತಾ, ಒಬ್ಬರಿಗೆ ಒಂದೊಂದು ವಾಹನದಂತೆ ರಸ್ತೆಗೆ ಇಳಿದರೆ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಹೆಚ್ಚಾಗುತ್ತದೆ. ಆಗ ಹೆಚ್ಚಾಗುವ ಬಿಪಿ, ಸುಗರ್, ಕಳೆದು ಕೊಳ್ಳುವ ತಾಳ್ಮೆಯನ್ನು ಆರಂಭದಿಂದಲೇ ಸುರಕ್ಷಿತವಾಗಿರಿಸಿಕೊಳ್ಳಬಹುದಲ್ಲವೇ.
– ಬೈಕ್, ಕಾರು ಇರುವವರು ತಾವು ಸಂಚರಿಸುವ ಜೊತೆಗೆ ತಾವು ಹೋಗುವ ಮಾರ್ಗದಲ್ಲೇ ಇತರರಿಗೂ ತಮ್ಮ ಜೊತೆ ಬರಲು ಅವಕಾಶ ನೀಡುವುದರಿಂದ ತಾವು ಸಹ ಸಂಪಾದನೆ ಮಾಡಿಕೊಳ್ಳಬಹುದು. ಅಲ್ಲದೇ ಆ ಹಣ ಕೇವಲ ಆ ಸಂಚಾರದ ಫ್ಯೂಯಲ್ ಗೆ ಆದರು ಸಹ ಎಷ್ಟು ಉಪಯೋಗ ಅಲ್ಲವೇ.
– ಇದರಿಂದ ಫ್ಯೂಯಲ್ ಬೇಡಿಕೆ ತಗ್ಗಿಸಲು, ಹಾಗೂ ಅದರ ಬೆಲೆ ಕಡಿಮೆ ಗೊಳಿಸಲು ಸಹ ಸಹಾಯಕ.
– ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬಹುದೊಡ್ಡ ಕೊಡುಗೆ ನೀಡುವ ಸಾಮಾಜಿಕ ಕಳಕಳಿ ಇರುವವರು ಕ್ವಿಕ್ ರೈಡ್ (Quick Ride) ಬಳಕೆ ಮಾಡಿ ರೈಡ್ ಆಫರ್ ಮಾಡಿದರೆ ಉತ್ತಮ ಸಮಾಜ ಸೇವೆ ಮಾಡಿದಂತಾಗುತ್ತದೆ.
– ಕರ್ನಾಟಕದವರೂ ಬೆಂಗಳೂರು ದೆಹಲಿ ನಗರದಂತೆ ಪರಿಸರ ಮಾಲಿನ್ಯಕ್ಕೆ ತುತ್ತಾಗುವ ಮುನ್ನ, ಆಗದಂತೆ ತಡೆಯಲು ಇಂತಹ ಅಪ್ಲಿಕೇಶನ್ಗಳನ್ನು ಬಳಕೆ ಮಾಡಿಕೊಂಡರೆ ಒಳ್ಳೆಯದು ಎನಿಸುತ್ತದೆ.
ಕ್ವಿಕ್ ರೈಡ್ (Quick Ride) ಬಗ್ಗೆ ಮತ್ತು ನಾವು ನೀಡಿರುವ ಅದರ ಉಪಯೋಗಗಳ ಬಗ್ಗ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಮೆಂಟ್ ಬಾಕ್ಸ್ ನಲ್ಲಿ ಟೈಪಿಸಲು ಮರೆಯದಿರಿ.
Quick Ride android app – click here
Quick Ride ios app – click here
Quick Ride official website – click here