ಆರ್‌ಆರ್‌ಬಿ ಗ್ರೂಪ್ ಡಿ(RRB Group D) ಪರೀಕ್ಷೆ ದಿನಾಂಕ ಹೊರಬಿದ್ದಿದೆ. ಹಿಂದುಸ್ತಾನ್ ಟೈಮ್ಸ್ ಪ್ರಕಾರ ಆರ್‌ಆರ್‌ಬಿ ಗ್ರೂಪ್ ‘ಡಿ’ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಸ್ಟ್ 12, 2018 ರಿಂದ ಸೆಪ್ಟೆಂಬರ್ 16, 2018 ರವರೆಗೆ ಐದು ಶೆಡ್ಯೂಲ್ ಗಳಲ್ಲಿ ನಡೆಯಲಿದೆ. ಈ ಪರೀಕ್ಷೆಯನ್ನು ಆರ್‌ಆರ್‌ಬಿ ಅಭ್ಯರ್ಥಿಗಳ ಇಂಗ್ಲೀಷ್ ವರ್ಣಮಾಲೆಯ (alphabetical) ಪ್ರಕಾರ ನಡೆಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಂದಹಾಗೆ ಆರ್‌ಆರ್‌ಬಿಯ 90,000 ಗ್ರೂಪ್ ‘ಡಿ’ ಮತ್ತು ಅಸಿಸ್ಟಂಟ್ ಲೋಕೋಪೈಲಟ್ ಎರಡು ಹುದ್ದೆಗಳಿಗೆ ಒಟ್ಟಾರೆ 2 ಕೋಟಿಗೂ ಅಧಿಕ ಅರ್ಜಿಗಳು ಸ್ವೀಕೃತವಾಗಿವೆ. ಗ್ರೂಪ್ ‘ಡಿ’ ಕಂಪ್ಯೂಟರ್ ಆಧಾರಿತ ಪರೀಕ್ಷೆ ಅಭರ್ಥಿಗಳ ಇಂಗ್ಲೀಷ್ ವರ್ಣಮಾಲೆಯ ಆಧಾರಿತವಾಗಿ ಈ ಕೆಳಗಿನ ಟೈಮ್‌ಟೇಬಲ್ ಪ್ರಕಾರ ನಡೆಯಲಿದೆ.
ಆರ್‌ಆರ್‌ಬಿ ಗ್ರೂಪ್ ‘ಡಿ’ ಪರೀಕ್ಷೆ ವೇಳಾಪಟ್ಟಿ 2018
ಪರೀಕ್ಷೆ ದಿನಾಂಕ : 12/08/2018
ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : A,B,T,Q,O,L,F,E
ಪರೀಕ್ಷೆ ದಿನಾಂಕ : 18/08/2018
ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : R,Y,H,N
ಪರೀಕ್ಷೆ ದಿನಾಂಕ : 26/08/2018
ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : K,M,V
ಪರೀಕ್ಷೆ ದಿನಾಂಕ : 09/09/20108
ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : C,I,S
ಪರೀಕ್ಷೆ ದಿನಾಂಕ : 16/09/2018
ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : U,W,X,Y,Z,G,P,J,D
ಆರ್‌ಆರ್‌ಬಿ ಸಿಬಿಟಿ ಪರೀಕ್ಷೆ ಆರಂಭ ಆಗುವ ದಿನಾಂಕ : 12/08/2018
ಆರ್‌ಆರ್‌ಬಿ ಸಿಬಿಟಿ ಪರೀಕ್ಷೆ ಕೊನೆ ಆಗುವ ದಿನಾಂಕ : 16/09/2018
ಆರ್‌ಆರ್‌ಬಿ ಸಿಬಿಟಿ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ ದಿನಾಂಕ : ಸಿಬಿಟಿ(ಕಂಪ್ಯೂಟರ್ ಆಧಾರಿತ ಪರೀಕ್ಷೆ) ನಡೆಯುವ 10 ದಿನಗಳ ಮುಂಚಿತವಾಗಿ
ಆರ್‌ಆರ್‌ಬಿ ಕುರಿತ ಇತರೆ ಹೈಲೈಟ್ಸ್
– ಆರ್‌ಆರ್‌ಬಿ ಸಿಬಿಟಿ ಪರೀಕ್ಷೆ ದೇಶದ 500 ಕೇಂದ್ರಗಳಲ್ಲಿ ನಡೆಯಲಿದೆ.
– ಶೀಘ್ರದಲ್ಲೇ ಆರ್‌ಆರ್‌ಬಿ ಪರೀಕ್ಷೆ ದಿನವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ.
– ಫೈನಲ್ ಮೆರಿಟ್ ಲಿಸ್ಟ್ ನಲ್ಲಿ ಸೆಲೆಕ್ಟ್ ಆಗುವವರು ಮುಂದಿನ ವರ್ಷದಿಂದ ಹುದ್ದೆಗೆ ಸೇರಬಹುದು.
– ಈ ಹುದ್ದೆಗೆ ಪರೀಕ್ಷೆ ಹೊರತುಪಡಿಸಿ ಇನ್ಯಾವುದೇ ಸಂದರ್ಶನ ಇರುವುದಿಲ್ಲ.
– ಗ್ರೂಪ್ ಡಿ ಹುದ್ದೆಗೆ ಅಭ್ಯರ್ಥಿಗಳನ್ನು ಸಿಬಿಟಿ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.
Indian Railways RRB exam dates for group D 2018 was out. Here is complete time table of RRB Group D exam date.
1 comment
Yes sir
Comments are closed.