ಭಾರತೀಯ ರಿಸರ್ವ್ ಬ್ಯಾಂಕ್(RBI) ಖಾಲಿ ಇರುವ ಸೆಕ್ಯೂರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು ಹುದ್ದೆಗಳು : 270
ಬೆಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ : 7
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-11-2018
RBI ಸೆಕ್ಯೂರಿಟಿ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ
– ಎಸ್ಎಸ್ಎಲ್ಸಿ ತೇರ್ಗಡೆಹೊಂದಿರಬೇಕು
– ಸೇನೆಯಲ್ಲಿ ಸೇವೆ ಸಲ್ಲಿಸಿರಬೇಕು(ಸೇನೆಯಲ್ಲಿ ಯುದ್ಧಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರ ನಿರ್ವಹಣೆಗೆ ಸಂಬಂಧಪಟ್ಟಂತೆ ಕೆಲಸ ನಿರ್ವಹಿಸಿರಬೇಕು)
– ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 28 ವರ್ಷ. ಎಸ್ಟಿ/ಎಸ್ಸಿ ಅಭ್ಯರ್ಥಿಗಳಿಗೆ 30 ವರ್ಷ.
-ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಂಟಿಮೇಷನ್ ಶುಲ್ಕವಾಗಿ ರೂ.50 ಮಾತ್ರ ಸಲ್ಲಿಸಬೇಕು.
ನೇಮಕಾತಿ ವಿಧಾನ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಜೆನೆರಲ್ ಇಂಗ್ಲೀಷ್, ಮೆಂಟಲ್ ಎಬಿಲಿಟಿ, ಗಣಿತಕ್ಕೆ ಸಂಬಂಧಿಸಿದಂತೆ ಒಟ್ಟಾರೆ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
– ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದು ಆಯ್ಕೆ ಆದವರಿಗೆ ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ನೇಮಕ ಮಾಡಿಕೊಳ್ಳಲಾಗುತ್ತದೆ.
ಪರೀಕ್ಷೆಗೆ ಪೂರ್ವ ತರಬೇತಿ ಉಚಿತ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಪೂರ್ವ ತಯಾರಿ ತರಬೇತಿಯನ್ನು ಆರ್ಬಿಐ ವತಿಯಿಂದಲೇ ನೀಡಲಿದ್ದು, ಆಯಾ ಪ್ರಾದೇಶಿಕ ಕಚೇರಿಗೆ ಪತ್ರ ಬರೆದು ಪಡೆಯಬಹುದು.
– ಕರ್ನಾಟಕ ರಾಜ್ಯದ ಆರ್ಬಿಐ ವಿಳಾಸ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 10/3/08 ನೃಪತುಂಗ ರಸ್ತೆ, ಬೆಂಗಳೂರು -560001
ಪರೀಕ್ಷೆ ಯಾವಾಗ ನಡೆಯಲಿದೆ?
ಡಿಸೆಂಬರ್ ಅಥವಾ 2019 ರ ಜನವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.
Reserve bank of India invited application for the post of Security Guard in various branches of all over India from eligible candidates.