ಪಂಚೇಂದ್ರಿಯಗಳಲ್ಲಿ ಮನುಷ್ಯನ ಬಹು ಮುಖ್ಯವಾದ ಅಂಗ ಮತ್ತು ಇಡೀ ಜಗತ್ತಿನ ಸೌಂದರ್ಯವನ್ನು ನೋಡಲು ಉಪಯುಕ್ತವಾದ ಮನುಷ್ಯನ ದೇಹದ ಭಾಗ ಅಂದ್ರೆ ಕಣ್ಣು. ಈ ಕಣ್ಣಿನ ಪ್ರಾಮುಖ್ಯತೆ ಬಗ್ಗೆ ತಿಳಿಯಬೇಕಂದ್ರೆ ಜಸ್ಟ್ ಕಣ್ಣಿರುವವರೇ ಕಣ್ಣು ಮುಚ್ಚಿ ಒಂದು ನಿಮಿಷ ಮುಂದೆ ಸಾಗಿದರೆ ಗೊತ್ತಾಗುತ್ತೆ.
ಅಂದಹಾಗೆ ಇಂದಿನ ಲೇಖನದಲ್ಲಿ ಕಣ್ಣಿನ ಬಗ್ಗೆ ಈ ಪೀಠಿಕೆ ಏಕೆ ಅಂದ್ರೆ, ಅದರ ವಿಶೇಷತೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
– ಮನುಷ್ಯನ ಕಣ್ಣುಗಳು 576 ಮೆಗಾಪಿಕ್ಸೆಲ್ ರೆಸಲ್ಯೂಶನ್ ಇವೆ.
– ಒಬ್ಬ ಮನುಷ್ಯ ತನ್ನ ಕಣ್ಣುಗಳನ್ನು ನಿಮಿಷವೊಂದಕ್ಕೆ 12 ಸಲ ಮಿಟುಕಿಸುತ್ತಾನೆ
– ಕಣ್ಣುಗಳನ್ನು ತೆರೆದು ಸೀನಲು ಆಗುವುದಿಲ್ಲ
– ದಿನ ಒಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ಬಾರಿ ಮನುಷ್ಯ ಕಣ್ಣುಗಳನ್ನು ಮಿಟುಕಿಸುತ್ತಾನೆ.
– ಕೆಲವೊಬ್ಬರಲ್ಲಿ ಎರಡು ಕಣ್ಣುಗಳ ಬಣ್ಣ ಬೇರೆ ಬೇರೆ ಆಗಿರುತ್ತವೆ. ಇದಕ್ಕೆ ಹೀಟೆರೋಕ್ರೋಮಿಯಾ ಇರಿಡಿಯಂ ಎನ್ನುವರು
– ಕಣ್ಣಿನ ದಾನ ಎಂದು ಕರೆದರು ಸಹ, ಕಣ್ಣಿನ ‘ಕಾರ್ನಿಯಾ’ ಎಂಬ ಭಾಗವನ್ನು ಮಾತ್ರ ದಾನ ಮಾಡಲಾಗುತ್ತದೆ ಎಂಬುದು ಬಹುಸಂಖ್ಯಾತರಿಗೆ ತಿಳಿಯದ ಮಾಹಿತಿ
– ಕಣ್ಣುಗಳು ಸುಮಾರು 28ಗ್ರಾಂ ನಷ್ಟು ತೂಕ ಇವೆ.
– ಕಣ್ಣುಗಳು ಸುಮಾರು 10 ದಶಲಕ್ಷದಷ್ಟು ವಿವಿಧ ಬಣ್ಣಗಳ ವ್ಯತ್ಯಾಸ ಗುರುತಿಸಬಲ್ಲವು
– ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನವಾಗಿ ಆಚರಿಸಲಾಗುತ್ತದೆ.
human eyes are one of the most fascinating and complex parts of the body. Almost every animal in the animal kingdom relies on them everyday, but how much do we really know about eyes ?. In this story we can know som real facts about human eyes.