ರೆಡ್ಮಿ ಕೆ20(Redmi K20) ಮತ್ತು ರೆಡ್ಮಿ ಕೆ20 ಪ್ರೊ ಸ್ಮಾರ್ಟ್ಫೋನ್ ಭಾರತದಲ್ಲಿ ಹೆಚ್ಚು ನಿರೀಕ್ಷಿಸಲಾದ ಸ್ಮಾಟ್ಫೋನ್ಗಳುಲಲ. ಈ ಸ್ಮಾಟ್ಫೋನ್ಗಳು ಈಗ ಭಾರತದಲ್ಲಿ ಲಾಂಚ್ ಆಗುತ್ತಿವೆ. ಶಿಯೋಮಿ ಕಂಪನಿಯು ಈ ಸ್ಮಾಟ್ಫೋನ್ ಅನ್ನು ಜುಲೈ 17 ರಂದು ಬಿಡುಗಡೆಗೊಳಿಸಲಿದೆ.
ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ ಎರಡು ಡಿವೈಸ್ಗಳು ಈ ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ದೊರೆಯಲಿವೆ. ಆ ಡಿವೈಸ್ಗಳ ಫೀಚರ್ಗಳನ್ನು ಫ್ಲಿಪ್ಕಾರ್ಟ್ ಹೈಲೈಟ್ ಮಾಡಿದ್ದು, ಆ ಮಾಹಿತಿ ಈ ಕೆಳಗಿನಂತಿವೆ.
– ವಿನ್ಯಾಸ ವಿಷಯದಲ್ಲಿ ಎರಡು ಡಿವೈಸ್ಗಳು ಸಹ ನ್ಯಾನೊ ಹೊಲೊಗ್ರಾಫಿಕ್ ಟೆಕ್ನಾಲಜಿಯಿಂದ ಡಿಸೈನ್ ಆಗಿದ್ದು, ಅನನ್ಯ ರೀತಿಯ ವಿನ್ಯಾಸವಾಗಿದೆ.
– ಎರಡಿ ಡಿವೈಸ್ಗಳು ಸಹ 6.39 ಇಂಚಿನ FHD+ಅಮೋಲ್ಡ್ ಡಿಸ್ಪ್ಲೇ ಅನ್ನು 19.9:9 ಅನುಪಾತ ಆಕಾರಗಳೊಂದಿಗೆ ಹೊಂದಿವೆ.
– ರೆಡ್ಮಿ ಕೆ20 ಪ್ರೊ ಫ್ಲಾಗ್ಶಿಪ್ ರೆಡ್ಮಿ ಪೋನ್ ಆಗಿದ್ದು ಸ್ನಾಪ್ಡ್ರಾಗನ್ 855 ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸುತ್ತದೆ. ರೆಡ್ಮಿ ಕೆ20 ಸ್ಮಾಟ್ಫೋನ್ ಸ್ನಾಪ್ಡ್ರಾಗನ್ 730 ಚಿಪ್ಸೆಟ್ ಜೊತೆಗೆ 8GB RAM ಹಾಗೂ 256GB ಆಂತರಿಕ ಸ್ಟೋರೇಜ್ ಹೊಂದಿದೆ ಎನ್ನಲಾಗಿದೆ.
ರೆಡ್ಮಿ ಕೆ20 ಪ್ರೊ ಎಐ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, 48MP ಸೋನಿ IMX586 ಪ್ರೈಮರಿ ಸೆನ್ಸಾರ್, 13MP ವೈಟ್ ಆಂಗಲ್ ಕ್ಯಾಮೆರಾ, 8MP ದೂರದ ಸೆನ್ಸಾರ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾ 20MP ಸೆನ್ಸಾರ್ ಫೀಚರ್ ಹೊಂದಿದೆ. ರೆಡ್ಮಿ ಕೆ20 ಡಿವೈಸ್ ಸಹ ರೆಡ್ಮಿ ಕೆ20 ಪ್ರೊದ ಫೀಚರ್ ಗಳನ್ನೇ ಒಳಗೊಂಡಿದೆ. ಆದರೆ 48MP ಪ್ರೈಮರಿ ಕ್ಯಾಮೆರಾದ IMX586 ಬದಲಾಗಿ IMX582 ಸೆನ್ಸಾರ್ ಹೊಂದಿದೆ.
ಎರಡು ಡಿವೈಸ್ಗಳು ಸಹ 27ವ್ಯಾಟ್ ವೇಗದ ಚಾರ್ಜ್ ನ 4000mAh ಬ್ಯಾಟರಿ ಫೀಚರ್ ಹೊಂದಿದೆ. ಕೆ20 ಪ್ರೊ ಹಾರ್ಡ್ವೇರ್ ಡಿಸಿ ಡೈಮಿಂಗ್ ಸಪೋರ್ಟ್ ಮಾಡುತ್ತದೆ. 960fps ನಿಧಾನವಾಗಿ ರೆಕಾರ್ಡ್ ಮಾಡುವ ಮತ್ತು ಪಿ2ಐ ಸ್ಪ್ಲಾಶ್ ಫ್ರೂಫ್ ಕೋಟಿಂಗ್ ಫಿಚರ್ಗಳನ್ನು ಹೊಂದಿದೆ.
ರೆಡ್ಮಿ ಸರಣಿಯ ಈ ಎರಡು ಫೋನ್ಗಳ ಲಾಂಚ್ ಆಗುವ 2 ದಿನಗಳ ಮುನ್ನವೇ ರಿಯಲ್ಮಿ ಎಕ್ಸ್ ಡಿವೈಸ್ ಭಾರತದಲ್ಲಿ ಬಿಡುಗಡೆ ಆಗುವ ಸಂಭವವಿದೆ. ರಿಯಲ್ ಮಿ ಎಕ್ಸ್ ಅಮೋಲ್ಡ್ ಡಿಸ್ಪ್ಲೇ, ಪಾಪ್-ಅಪ್ ಸೆಲ್ಫಿ ಕ್ಯಾಮೆರಾ, 48MP ಡ್ಯುಯಲ್ ಕ್ಯಾಮೆರಾ, ಸ್ನಾಪ್ಡ್ರಾಗನ್ 710 ಚಿಪ್ಸೆಟ್ ಫೀಚರ್ ಹೊಂದಿದೆ. ರಿಯಲ್ಮಿ ಎಕ್ಸ್ ಬೆಲೆ ರೂ.18,000 ಎನ್ನಲಾಗುತ್ತಿದ್ದು, ರೆಡ್ಮಿ ಕೆ20 ರೂ.18,000 ರಿಂದ ರೂ.20000 ಸಹ ಮಾರಾಟವಾಗಲಿದೆ ಎನ್ನಲಾಗುತ್ತಿದೆ. ರೆಡ್ಮಿ ಕೆ20 ಪ್ರೊ ಭಾರತದಲ್ಲಿ ಸುಮಾರು ರೂ.30000 ಕ್ಕೆ ಮಾರಾಟವಾಗುವ ಸಂಭವವಿದೆ.