RPC Group A Group B technical posts recruitment 2018 notification.
ಕರ್ನಾಟಕ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಹಾಗೂ ಆಯ್ಕೆ ವಿಧಾನದ ಮೂಲಕ ಭರ್ತಿ ಮಾಡಲು ವಿವಿಧ ಇಲಾಖೆಗಳ ಉಳಿಕೆ ಮೂಲ ವೃಂದದ(RPC) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಪ್ರಕಟಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ನಿಯಮಗಳು 2006 ಮತ್ತು 2015ರ ತಿದ್ದುಪಡಿ ನಿಯಮಗಳನ್ವಯ ಉಳಿಕೆ ಮೂಲ ವೃಂದದ ಗ್ರೂಪ್ A ಮತ್ತು ಗ್ರೂಪ್ B ವೃಂದದ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಹೊರಡಿಸಿರುವ ಅಧಿಸೂಚನೆ ಇದಾಗಿದೆ.
ಗ್ರೂಪ್ A ಹುದ್ದೆಗಳು
ಹುದ್ದೆಯ ಹೆಸರು : ತೋಟಗಾರಿಕೆ ಇಲಾಖೆಯಲ್ಲಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
ಒಟ್ಟು ಹುದ್ದೆಗಳ ಸಂಖ್ಯೆ : 08
ವೇತನ ಶ್ರೇಣಿ: ರೂ.52650-97100
ಹುದ್ದೆಯ ಹೆಸರು : ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ವಿಮಾ ವೈದ್ಯಾಧಿಕಾರಿ
ಒಟ್ಟು ಹುದ್ದೆಗಳ ಸಂಖ್ಯೆ : 143
ವೇತನ ಶ್ರೇಣಿ: ರೂ.52650-97100
ಗ್ರೂಪ್ B ಹುದ್ದೆಗಳು
ಹುದ್ದೆಯ ಹೆಸರು : ತೋಟಗಾರಿಕೆ ಇಲಾಖೆಯಲ್ಲಿನ ಸಹಾಯಕ ತೋಟಗಾರಿಕೆ ಅಧಿಕಾರಿ
ಒಟ್ಟು ಹುದ್ದೆಗಳ ಸಂಖ್ಯೆ : 221
ವೇತನ ಶ್ರೇಣಿ: ರೂ.40900-78200
ಹುದ್ದೆಯ ಹೆಸರು : ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರು/ಸಹಾಯಕ ನಿರ್ಧೇಶಕರು
ಒಟ್ಟು ಹುದ್ದೆಗಳ ಸಂಖ್ಯೆ : 09
ವೇತನ ಶ್ರೇಣಿ : ರೂ.43100-83900
ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 17-12-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-01-2019
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 17-01-2019
ಸೂಚನೆ: ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಪ್ರತ್ಯೇಕ ಹುದ್ದೆಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕು.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 600
ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.300
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ಶುಲ್ಕ ವಿನಾಯಿತಿ ನೀಡಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
ಸಾಮಾನ್ಯ ಪತ್ರಿಕೆ(200 ಅಂಕಗಳು) ಮತ್ತು ನಿರ್ದಿಷ್ಟ ಪತ್ರಿಕೆ(200 ಅಂಕಗಳು) ಒಟ್ಟಾರೆ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ.
– ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ(Syllabus) ವಿಷಯಗಳನ್ನು ನೋಡಲು ಕ್ಲಿಕ್ ಮಾಡಿ
ಶೈಕ್ಷಣಿಕ ವಿದ್ಯಾರ್ಹತೆ:
ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಪ್ರಕಟಣೆಯನ್ನು ಓದಿ ತಿಳಿಯಲು ಕ್ಲಿಕ್ ಮಾಡಿ
ವಯೋಮಿತಿ :
ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಗರಿಷ್ಠ 35 ವರ್ಷ ಪೂರೈಸಿರಬೇಕು.
ಸಾಮಾನ್ಯ ವರ್ಗ ಗರಿಷ್ಠ : : 35 ವರ್ಷ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 40 ವರ್ಷ
ಪ್ರವರ್ಗ 2ಎ/ಬಿ/3ಎ/3ಬಿ : : 38 ವರ್ಷ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಗಳನ್ನು ಆನ್ಲೈನ್ ಮೂಲಕವೇ ಭರ್ತಿ ಮಾಡಿಬೇಕು. ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ
– ಭಾವಚಿತ್ರ ಮತ್ತು ಸಹಿ
– ವಯೋಮಿತಿಗೆ ಆಧಾರವಾಗಿ ಎಸ್ಎಸ್ಎಲ್ಸಿ ಅಂಕಪಟ್ಟಿ
– ವಿದ್ಯಾರ್ಹತೆ ದಾಖಲೆ
– ಮೀಸಲಾತಿಗೆ ಕೋರಿದ್ದರೆ ಸಂಬಂಧಿಸಿದ ದಾಖಲೆಗಳು
RPC ನೇಮಕಾತಿ ಪ್ರಕಟಣೆಗಾಗಿ ಮತ್ತು ಇತರೆ ಮಾಹಿತಿಗಾಗಿ ಕ್ಲಿಕ್ ಮಾಡಿ
Karnataka Public Service Commission has invited application for the recruitment of Group A and Group B Technical posts R.P.C. Read more here..