ಭಾರತೀಯ ರೈಲ್ವೆ ಖಾಲಿ ಇರುವ ಕಾನ್ಸ್ಟೇಬಲ್, ಟೈಲರ್ ಮತ್ತು ಕಾಬ್ಲರ್ (Recruitment for Constable, Tailor and Cobbler in RPF &RPSF) ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ.
ಆರ್ಪಿಎಫ್ ಮತ್ತು ಆರ್ಪಿಎಸ್ಎಫ್ ಗಳಲ್ಲಿನ ಖಾಲಿ ಇರುವ ಮೇಲೆ ತಿಳಿಸಲಾದ ಹುದ್ದೆಗಳಿಗೆ ಆನ್ಲೈನ್ ಅರ್ಜಿಯನ್ನು ಜನವರಿ 1, 2019 ರಿಂದ ಸಲ್ಲಿಸಬಹುದು ಎನ್ನಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2019 ಜನವರಿ 1 ರಂದು ಭಾರತೀಯ ರೈಲ್ವೆ ಅಥವಾ ಆರ್ಪಿಎಫ್ ನ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 798
ಆಯ್ಕೆ ಹೇಗೆ?
ಈ ಮೇಲಿನ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT), PMT, PFT, Trade Test ಮತ್ತು DV ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನಂತರ ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ ಯಾವುದಾದರೂ ಆರ್ಪಿಎಫ್ ಅಥವಾ ಆರ್ಪಿಎಸ್ಎಫ್ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ.
ಹುದ್ದೆಗಳ ಹೆಸರು : ಆರ್ಪಿಎಫ್ ಕಾನ್ಸ್ಟೇಬಲ್, ಕಾಬ್ಲರ್, ಟೈಲರ್
ಒಟ್ಟು ಹುದ್ದೆಗಳ ಸಂಖ್ಯೆ : 798
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-01-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-01-2019
ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ ಮಾಹಿತಿ, ಮೀಸಲಾತಿ ಕುರಿತ ಇತರೆ ಎಲ್ಲಾ ಮಾಹಿತಿಗಳಿಗೆ ಭಾರತೀಯ ರೈಲ್ವೆ ಅಥವಾ ಆರ್ಪಿಎಫ್ ಅಧಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿರಿ.
Indian Railway released the notification for the post of Constable, Tailor, Cobbler in RPF and RPSF. Read more here..