ಪತ್ರಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆದಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(A), 3(A) ಹಾಗೂ 3(B) ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಪ್ರೋತ್ಸಾಧನ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಪ್ರೋತ್ಸಾಧನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
2018-19-ನೇ ಸಾಲಿಗೆ IIM, IIT, IISc, NITs, IISERs, AIIMS, NLU, ISM, IIP, ISI, JIPMER, SPA ಕೋರ್ಸ್ಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಈ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಈ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿ ಅರ್ಹರಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.2 ಲಕ್ಷ ಪ್ರೋತ್ಸಾಹ ಧನ ದೊರೆಯಲಿದೆ. ಪ್ರೋತ್ಸಾಹ ಧನವನ್ನು ಒಂದು ವರ್ಷದಲ್ಲಿ ಒಂದೇ ಕಂತಿನಲ್ಲಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
– ಎಸ್.ಎಸ್.ಎಲ್.ಸಿ ಅಂಕ ಪಟ್ಟಿ
– ಇತ್ತೀಚಿನ ಭಾವಚಿತ್ರ ಮತ್ತು ಸಹಿ
– ಆಧಾರ್ ಕಾರ್ಡ್
– ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಎಸ್.ಸಿ ಕೋಡ್, (ಬ್ಯಾಂಕ್ ಪಾಸ್ ಬುಕ್ ಮೊದಲನೆಯ ಪುಟ) ಒಳಗೊಂಡ ಬ್ಯಾಂಕ್ ಖಾತೆ ವಿವರ
– ಜಾತಿ ಮತ್ತು ಆದಾಯ ಪ್ರಮಾಣ ಪತ್ರ
– ಕೋರ್ಸ್ ಪ್ರವೇಶಕ್ಕೆ ನಿಗದಿ ಪಡಿಸಿದ ಪ್ರವೇಶ ಪರೀಕ್ಷೆಯ ಅಂಕಪಟ್ಟಿ ಮತ್ತು ಕೋರ್ಸ್ ಪ್ರವೇಶ ಬಗ್ಗೆ ದಾಖಲೆ
– ಘಟಿಕೋತ್ಸವ ಪ್ರಮಾಣ ಪತ್ರ/ ಪದವಿ ಪ್ರಮಾಣ ಪತ್ರ
ಪ್ರೋತ್ಸಾಹ ಧನ ನೀಡಲು ಆಯ್ಕೆ ವಿಧಾನ ಮತ್ತು ವಿದ್ಯಾರ್ಥಿಗಳಿಗೆ ಇತರೆ ಸೂಚನೆಗಳು ಏನು ಎಂದು ತಿಳಿಯಲು ಕ್ಲಿಕ್ ಮಾಡಿ
Instruction For the Candidates
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-12-2018
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ ವಿಳಾಸ : bcwd.training@karnataka.gov.in
ಸಹಾಯವಾಣಿ ಸಂಖ್ಯೆ : 8050770004
ಪ್ರಕಟಣೆ ಪಿಡಿಎಫ್ನಲ್ಲಿ ನೋಡಲು ಕ್ಲಿಕ್ ಮಾಡಿ
Instruction For the Candidates click here
Applications are invited from the backward classes students to availe Rs 2 lakh incentives from Backward classes welfare department. Complete information is here.