ಸ್ಯಾಮ್ಸಂಗ್ ಕಂಪನಿ ತನ್ನ ಲೇಟೆಸ್ಟ್ ಡಿವೈಸ್ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10+ (Samsung Galaxy Note 10, Samsung Galaxy Note 10+)ಡಿವೈಸ್ಗಳನ್ನು ಬಿಡುಗಡೆ ಮಾಡಲು ಅಂತಿಮವಾಗಿ ದಿನಾಂಕ ಫಿಕ್ಸ್ ಮಾಡಿದೆ.
ಅಂದಹಾಗೆ ಬಹುಸಂಖ್ಯಾತ ಟೆಕ್ ಗೀಕ್ಗಳು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10 ಸ್ಮಾಟ್ಫೋನ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅದಕ್ಕೆ ಕಾರಣ ಈ ಡಿವೈಸ್ 5G ಫೀಚರ್ ಹೊಂದಿರುವುದು. ಈ ಡಿವೈಸ್ಗಳ ಜೊತೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಆಕ್ಟೀವ್ 2 ಸ್ಮಾಟ್ವಾಚ್ಅನ್ನು ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ.
ಇತ್ತೀಚೆಗಷ್ಟೆ ಸ್ಯಾಮ್ಸಂಗ್, ಗ್ಯಾಲಕ್ಸಿ ಟ್ಯಾಬ್ ಎಸ್6 ಡಿವೈಸ್, ಎಸ್-ಪೆನ್ ರಿಮೋಟ್, ಸ್ನಾಪ್ಡ್ರಾಗನ್ 855 ಮತ್ತು 8GB RAM ಹೊಂದುವ ಬಗ್ಗೆ ಮಾಹಿತಿ ಹರಿಬಿಟ್ಟಿತ್ತು. ಜೊತೆಗೆ ಗ್ಯಾಲಕ್ಸಿ ನೋಟ್ 10+ 5G ಹೊಂದಲಿದೆ ಎಂದು ಆಂಡ್ರಾಯ್ಡ್ ಹೆಡ್ಲೈನ್ ನೀಡಿತ್ತು. ಆದರೆ ಇದು ವೆರಿಜಾನ್ ವಿಭಿನ್ನತೆಯಾಗಿದ್ದು, 5G UWB+ ಗೆ ಸಂಪರ್ಕ ಹೊಂದುತತ್ತದೆ. ಅಧಿಕೃತವಾಗಿ ಈ ಸ್ಮಾಟ್ಫೋನ್ ಈಗ ಆಗಸ್ಟ್ 23 ರಂದು ಬಿಡುಗಡೆ ಆಗಲಿದೆ. ಇದೆ ದಿನದಿಂದ ದಕ್ಷಿಣ ಕೊರಿಯಾದಲ್ಲಿ ನೋಟ್ 10ಪ್ಲಸ್ ಮಾರಾಟವಾಗಲಿದೆ.
ನೋಟ್ 10 4G, 5G ಎರಡು ವಿಭಿನ್ನತೆಯಲ್ಲೂ ಲಭ್ಯವಾಗಲಿದೆ ಎನ್ನಲಾಗಿದೆ. ನೋಟ್ 10+ ಸ್ನಾಪ್ಡ್ರಾಗನ್ 855 ಅಥವಾ ಎಕ್ಸಿನಾಸ್ 9820 ಪ್ರೊಸೆಸರ್ ಹೊಂದಲಿದ್ದು, ಪ್ರದಶಕ್ಕೆ ಅನುಗುಣವಾಗಿ ಈ ಫೀಚರ್ ಅಳವಡಿಸಿ ನೀಡಲಾಗುತ್ತದೆಯಂತೆ. 12GB RAM ಮತ್ತು 512GB UFS 3.0 ಆಂತರಿಕ ಮೆಮೊರಿ, 45ವ್ಯಾಟ್ನ ವೇಗದ ಚಾರ್ಜಿಂಗ್ ಗುಣ ಮತ್ತು 20ವ್ಯಾಟ್ ವೈರ್ಲೆಸ್ ಚಾರ್ಜಿಂಗ್ ಹೊಂದಿರುವ 4,300mAh ಬ್ಯಾಟರಿ ಫೀಚರ್ ಈ ಡಿವೈಸ್ ಮುಖ್ಯ ಗುಣಗಳು.
ಮೂರು ಕ್ಯಾಮೆರ ವ್ಯವಸ್ಥೆ ಮತ್ತು ಉಚಿತವಾಗಿ ToF ಕ್ಯಾಮೆರವನ್ನು ವಿಶೇಷವಾಗಿ ನೋಟ್ 10+ 5G ಮಾದರಿ ಡಿವೈಸ್ ಹೊಂದಿದೆ. 10MP ಸೆಲ್ಪಿ ಕ್ಯಾಮೆರಾ, f/2.1 ಲೆನ್ಸ್ನ 12MP ಯ ಟೆಲಿಫೋಟೋ ಕ್ಯಾಮೆರ ಮತ್ತು f/2.2 ಲೆನ್ಸ್ನ ಅಲ್ಟ್ರಾವೈಡ್ 16MP ಕ್ಯಾಮೆರ ಫೀಚರ್ಗಳು ಹಿಂಭಾಗದ ಕ್ಯಾಮೆರಗಳಾಗಿವೆ.
ಆಗಸ್ಟ್ 23 ರಂದು ಬಿಡುಗಡೆ ಆಗಲಿರುವ ಈ ಡಿವೈಸ್ಗಳು ಅಂದಿನಿಂದ ದಕ್ಷಿಣ ಕೊರಿಯಾದಲ್ಲಿ ಮಾರಾಟಗೊಳ್ಳಲಿವೆ. ಆದರೆ ಭಾರತದಲ್ಲಿ ಅವುಗಳ ಅಧಿಕೃತ ಮಾರಾಟ ಯಾವಾಗ, ಬೆಲೆ ಎಷ್ಟು ಎಂಬುದು ಇನ್ನೂ ಖಚಿತವಾಗಿಲ್ಲ.