ಭಾರತ ದೇಶದಲ್ಲಿ ಅತಿ ಹೆಚ್ಚು ಖಾತೆದಾರರನ್ನು ಹೊಂದಿರುವ State Bank of India(SBI) ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಅದೇನಪ್ಪ ಅಂದ್ರೆ ಎಸ್ಬಿಐ ಬ್ಯಾಂಕ್ ಖಾತೆದಾರರು ಇನ್ನು ಮುಂದೆ ದಿನ ಒಂದಕ್ಕೆ ATM ನಲ್ಲಿ ಕೇವಲ ರೂ.20,000 ಮಾತ್ರ ಬಿಡಿಸುವ ಹೊಸ ನಿಯಮಾವಳಿಯನ್ನು ಹೊರತಂದಿದೆ.
ಹೌದು, ಈ ಬಗ್ಗೆ ಬಲ್ಲ ಮೂಲಗಳಿಂದ ತಿಳಿದಿರುವ ಎಕನಾಮಿಕ್ ಟೈಮ್ಸ್ ಆನ್ಲೈನ್ ಸುದ್ದಿ ತಾಣ ವರದಿ ಮಾಡಿದೆ. ಈ ಹಿಂದೆ ಎಸ್ಬಿಐ ಗ್ರಾಹಕರು ಡೆಬಿಟ್ ಕಾರ್ಡ್ ಬಳಸಿ ದಿನದಲ್ಲಿ ರೂ.40,000 ವರೆಗೆ ಹಣ ಬಿಡಿಸಬಹುದಿತ್ತು. ಆದರೆ ಈಗ ರೂ.40,000 ದಿಂದ ಏಕ ಏಕೀ ರೂ.20,000 ಮಾತ್ರ ಬಿಡಿಸುವ ಹೊಸ ನಿಯಮಾವಳಿಯನ್ನು ಜಾರಿಗೊಳಿಸಿದೆ. ಆದರೆ ಈ ನಿಯಮಾವಳಿ ಅಕ್ಟೋಬರ್ 31ನೇ ತಾರೀಖಿನಿಂದ ಜಾರಿಗೆ ಬರಲಿದೆ. ಅಂದರೆ ಅಲ್ಲಿಯ ವರೆಗೆ ಎಂದಿನಂತೆ ಎಸ್ಬಿಐ ಗ್ರಾಹಕರು ದಿನದಲ್ಲಿ ರೂ.40,000 ವರೆಗೆ ಬಿಡಿಸಬಹುದಾಗಿದೆ.
“ATM ಕೇಂದ್ರಗಳಲ್ಲಿ ಹೆಚ್ಚು ಮೋಸದ ವ್ಯವಹಾರಗಳು(ಮೋಸದಿಂದ ಹಣಬಿಡಿಸುವ) ನಡೆಯುತ್ತಿರುವ ಬಗ್ಗೆ ಎಸ್ಬಿಐ ಹೆಚ್ಚು ದೂರುಗಳನ್ನು ಸ್ವೀಕರಿಸಿದ್ದು, ಹಾಗೂ ಡಿಜಿಟಲ್ ವಹಿವಾಟು ಮತ್ತು ಕ್ಯಾಶ್ಲೆಸ್ ವರ್ಗಾವಣೆಗೆ ಉತ್ತೇಜನ ನೀಡಲು ಈ ನಿಯಮಾವಳಿಯನ್ನು ಜಾರಿಗೆ ತರಲು ನಿರ್ಧರಿಸಿದೆಯಂತೆ. ಅಲ್ಲದೇ ಡೆಬಿಟ್ ಕಾರ್ಡ್ ಬಳಸಿ ಹಣ ಬಿಡಿಸುವುದನ್ನು ಕಡಿಮೆಗೊಳಿಸಬೇಕು ಎಂಬುದು ಇದರ ಇನ್ನೊಂದು ಉದ್ದೇಶವಂತೆ”.
ಸ್ಕ್ಯಾಮರ್ಗಳು ATM ಕೇಂದ್ರಗಳಲ್ಲಿ ಗ್ರಾಹಕರಿಗೆ ತಿಳಿಯದ ಹಾಗೆ ಗುಪ್ತ ಕ್ಯಾಮರಾಗಳು ಮತ್ತು ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಬಳಸಿ ಅವರ ಡೆಬಿಡ್ ಕಾರ್ಡ್ ಪಿನ್ಗಳನ್ನು ಕದಿಯುವ ಬಗ್ಗೆ ದಶಕದಿಂದಲೂ ಹಲವು ಪ್ರಕರಣಗಳು ವರದಿಯಾಗಿದೆ. ಕ್ಲಾಸಿಕ್ ಕಾರ್ಡ್ಗಳು ಎಸ್ಬಿಐ ಕಾರ್ಡ್ ಗಳ ಪೋರ್ಟ್ಫೋಲಿಯೋ ಮಾಹಿತಿಯನ್ನು ಸುಲಭವಾಗಿ ಹೊಂದುವ(ಸೀಜ್ ಮಾಡಿಕೊಳ್ಳುವ) ಲಕ್ಷಣ ಹೊಂದಿವೆ. ಈ ಹಿನ್ನೆಲೆಯಲ್ಲಿಯೂ ಹಬ್ಬಗಳ ಮಾಸ ಇನ್ನು ಒಂದು ವಾರ ಇರುವಂತೆಯೇ ಕ್ಯಾಶ್ ವಿತ್ಡ್ರಾವಲ್ಸ್ ಮೇಲೆ ಮೋಸದ ವಹಿವಾಟುಗಳನ್ನು ತಡೆಯುವ ಹಿತದೃಷ್ಟಿಯಿಂದ ನಿರ್ಬಂಧ ಹೇರಲಾಗುವುದಂತೆ.
India’s largest lender, State Bank of India(SBI) has lowered the cash withdrawal limti to Rs 20,000 a day in ATM from Rs 40,000. The lowe limit will be effective from October 31.