Home » SHIMUL Recruitment 2023: ಶಿಮುಲ್ ನೇಮಕಾತಿ 2023., ವಿವಿಧ 194 ಹುದ್ದೆಗಳಿಗೆ ಅರ್ಜಿ ಆಹ್ವಾನ.

SHIMUL Recruitment 2023: ಶಿಮುಲ್ ನೇಮಕಾತಿ 2023., ವಿವಿಧ 194 ಹುದ್ದೆಗಳಿಗೆ ಅರ್ಜಿ ಆಹ್ವಾನ.

by manager manager

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಸಹಾಯಕ ವ್ಯವಸ್ಥಾಪಕ, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ, ಕೆಮಿಸ್ಟ್‌, ಶೀಘ್ರಲಿಪಿಗಾರರು ಕಿರಿಯ ಸಿಸ್ಟಂ ಆಪರೇಟರ್, ಆಡಳಿತ ಸಹಾಯಕ, ವಿಸ್ತರಣಾ ಅಧಿಕಾರಿ ಸೇರಿದಂತೆ ವಿವಿಧ ಒಟ್ಟು 194 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಭರ್ತಿ ಮಾಡುವ ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು (ಎಫ್‌ ಅಂಡ್ ಎಫ್‌) : 03
ಸಹಾಯಕ ವ್ಯವಸ್ಥಾಪಕರು (ಎಹೆಚ್‌/ಎಐ: 17
ಸಹಾಯಕ ವ್ಯವಸ್ಥಾಪಕರು (ಆಡಳಿತ) : 01
ಎಂಐಎಸ್ / ಸಿಸ್ಟಂ ಆಫೀಸರ್ : 01
ಮಾರುಕಟ್ಟೆ ಅಧಿಕಾರಿ: 02
ತಾಂತ್ರಿಕ ಅಧಿಕಾರಿ (ಡಿಟಿ) : 14
ಕೆಮಿಸ್ಟ್‌ ದರ್ಜೆ-1: 04
ಕೆಮಿಸ್ಟ್‌ ದರ್ಜೆ -2: 28
ತಾಂತ್ರಿಕ ಅಧಿಕಾರಿ (ಅಭಿಯಂತರ) : 02
ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : 02
ಕಿರಿಯ ಸಿಸ್ಟಂ ಆಪರೇಟರ್ : 13
ಶೀಘ್ರಲಿಪಿಗಾರರು ದರ್ಜೆ-2 : 01
ಕಿರಿಯ ತಾಂತ್ರಿಕರು: 50
ವಿಸ್ತರಣಾಧಿಕಾರಿ ದರ್ಜೆ-3 : 17
ಆಡಳಿತ ಸಹಾಯಕ ದರ್ಜೆ-2: 17
ಲೆಕ್ಕ ಸಹಾಯಕ ದರ್ಜೆ-2: 12
ಮಾರುಕಟ್ಟೆ ಸಹಾಯಕ ದರ್ಜೆ-2 : 10

ಯಾವ ಹುದ್ದೆಗೆ ಎಷ್ಟು ಸಂಬಳ?
ಸಹಾಯಕ ವ್ಯವಸ್ಥಾಪಕರು (ಎಫ್‌ ಅಂಡ್ ಎಫ್‌) : Rs.52650-97100.
ಸಹಾಯಕ ವ್ಯವಸ್ಥಾಪಕರು (ಎಹೆಚ್‌/ಎಐ: Rs.52650-97100.
ಸಹಾಯಕ ವ್ಯವಸ್ಥಾಪಕರು (ಆಡಳಿತ) : Rs.52650-97100.
ಕೆಮಿಸ್ಟ್‌ ದರ್ಜೆ-1: Rs.33450-62600.
ವಿಸ್ತರಣಾಧಿಕಾರಿ ದರ್ಜೆ-3 : Rs.33450-62600.
ಆಡಳಿತ ಸಹಾಯಕ ದರ್ಜೆ-2: Rs.27650-52650.
ಲೆಕ್ಕ ಸಹಾಯಕ ದರ್ಜೆ-2: Rs.27650-52650.
ಎಂಐಎಸ್ / ಸಿಸ್ಟಂ ಆಫೀಸರ್ : Rs.43100-83900.
ಮಾರುಕಟ್ಟೆ ಅಧಿಕಾರಿ: Rs.43100-83900.
ಶೀಘ್ರಲಿಪಿಗಾರರು ದರ್ಜೆ-2 : Rs.27650-52650.
ಕಿರಿಯ ತಾಂತ್ರಿಕರು: Rs.21400-42000
ತಾಂತ್ರಿಕ ಅಧಿಕಾರಿ (ಅಭಿಯಂತರ) : Rs.43100-83900.
ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : Rs.43100-83900.
ತಾಂತ್ರಿಕ ಅಧಿಕಾರಿ (ಡಿಟಿ) : Rs.43100-83900.
ಮಾರುಕಟ್ಟೆ ಸಹಾಯಕ ದರ್ಜೆ-2 : Rs.27650-52650.
ಕೆಮಿಸ್ಟ್‌ ದರ್ಜೆ -2: Rs.27650-52650.
ಕಿರಿಯ ಸಿಸ್ಟಂ ಆಪರೇಟರ್ : Rs.27650-52650.

ಆನ್‌ಲೈನ್‌ ಅರ್ಜಿ ಹಾಕಲು ಆರಂಭ ದಿನಾಂಕ: 01-02-2023
ಆನ್‌ಲೈನ್‌ ಅರ್ಜಿ ಹಾಕಲು ಕೊನೆ ದಿನಾಂಕ: 03-03-2023

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್) ವೆಬ್‌ಸೈಟ್‌ ವಿಳಾಸ: www.shimul.coop

ಅರ್ಜಿ ಹಾಕಲು ನಿಗಧಿತ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು.

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ / ಪಿಯುಸಿ / ಪದವಿ / ಡಿಪ್ಲೊಮ / ಸ್ನಾತಕೋತ್ತರ ಪದವಿ ಪಡೆದಿರಬೇಕು.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ.

Notification

Apply Online