Home » ಒತ್ತಡ ರಹಿತ ಜೀವನಕ್ಕಾಗಿ ಈ 7 ಸಲಹೆಗಳನ್ನು ಪಾಲಿಸಲೇಬೇಕು..

ಒತ್ತಡ ರಹಿತ ಜೀವನಕ್ಕಾಗಿ ಈ 7 ಸಲಹೆಗಳನ್ನು ಪಾಲಿಸಲೇಬೇಕು..

by manager manager

ಬಹುತೇಕ ಕಾಯಿಲೆಗಳ ಮೂಲ ಒತ್ತಡ. ಪ್ರತಿನಿತ್ಯದ ಬದುಕಿನಲ್ಲಿ ನಾವೆಲ್ಲರೂ ಒತ್ತಡವನ್ನು ಅನುಭವಿಸುತ್ತೇವೆ. ಆದ್ದರಿಂದ ಮೊದಲು ನಿಮ್ಮೊಳಗಿನ ಒತ್ತಡ ಕಡಿಮೆ ಮಾಡಿಕೊಳ್ಳಿ. ಕೆಲವು ಸಂದರ್ಭದಲ್ಲಿ ಒತ್ತಡವು ಅಲ್ಪಾವಧಿಗೆ ಸೀಮಿತವಾಗಿದ್ದರೆ ಇನ್ನು ಕೆಲವೊಮ್ಮೆ ಬಹಳ ಕಾಲದವರೆಗೆ ಉಳಿಯುತ್ತದೆ. ಕೆಲವೊಮ್ಮೆ ನಾವು ತೀವ್ರವಾದ ಒತ್ತಡವನ್ನು ಅನುಭವಿಸಿದರೆ ಉಳಿದ ಕೆಲವು ಸಂದರ್ಭಗಳಲ್ಲಿ ಒತ್ತಡವೇ ಅನುಭವಕ್ಕೆ ಬರುವುದಿಲ್ಲ.

ಒತ್ತಡ ರಹಿತ ಬದುಕಿನಲ್ಲಿ ಮನುಷ್ಯ ಸಾಧಿಸುವುದು ಏನು ಇಲ್ಲ. ಯಾವುದೇ ಕೆಲಸವಾದರೂ ಶಾಂತಯುತವಾಗಿ ನಿರ್ವಹಿಸಬೇಕು. ಬಹುತೇಕ ಕಾಯಿಲೆಗಳ ಮೂಲವಾಗಿರುವ ಒತ್ತಡ ನಿವಾರಣೆಗೆ ಇಂದು ಕನ್ನಡ ಅಡ್ವೈಜರ್ ಸೂಕ್ತ ಸಲಹೆ ನೀಡಿದೆ. ಆ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

ಒತ್ತಡಕ್ಕೆ ಕಾರಣಗಳು:(Reason for Stress and tension)

ಅನಿರೀಕ್ಷಿತ ಘಟನೆಗಳಾದ ಅಪಘಾತಗಳು, ಪ್ರೀತಿ-ಪಾತ್ರರ ಹಠಾತ್ ಸಾವು, ನೋವು, ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದಿರುವುದು, ಜಿಡ್ಡಿನ ಪದಾರ್ಥ ಸೇವನೆ, ಸರಿಯಾಗಿ ನಿದ್ದೆ ಮಾಡದಿರುವುದು, ಇತರ ಚಟುವಟಿಕೆಗಳಾದ ಟಿವಿ ವೀಕ್ಷಣೆ, ಸ್ಮಾರ್ಟ್ ಫೋನ್ನಲ್ಲಿ ಆಟ ಮೊದಲಾದವನ್ನು ನಡೆಸುವುದು ಬಹುತೇಕ ಒತ್ತಡಕ್ಕೆ ಕಾರಣವಾದ ಚಟುವಟಿಕೆಗಳಾಗಿವೆ.

ಒತ್ತಡ ರಹಿತ ಜೀವನಕ್ಕೆ ಪರಿಹಾರಗಳು(Tips for reduce stress and tension)

ನೀರು ಸೇವನೆ:
ನೀರು ಸೇವನೆಯಿಂದ ಒತ್ತಡ ನಿವಾರಿಸಬಹುದು. ದಿನಕ್ಕೆ 8 ಲೋಟವಾದರೂ ನೀರು ಕುಡಿಯಬೇಕು. ನೀರು ನಿಮ್ಮ ದೇಹದ ಒಳಾಂಗಣ ವ್ಯವಸ್ಥೆಯನ್ನು ಸ್ವಚ ಮಾಡಲಿದ್ದು ದೇಹದ ವಿಷಕಾರಿ ಅಂಶಗಳನ್ನು ತೊಳೆದುಹಾಕುತ್ತದೆ. ಹೀಗಾಗಿ ನೀರು ಕುಡಿಯುವುದನ್ನು ಮರೆಯಬೇಡಿ.
ಪ್ರೀತಿಪಾತ್ರರ ಜತೆ ಸಮಯ ಕಳೆಯಿರಿ:
ವಿಪರೀತ ಒತ್ತಡ ಉಂಟಾದಾಗ ನಿಮ್ಮ ಪ್ರೀತಿ ಪಾತ್ರರ ಜತೆ ಹೆಚ್ಚು ಸಮಯ ಕಳೆಯಿರಿ. ಸಂಗಾತಿಯನ್ನು ತಬ್ಬಿಕೊಳ್ಳುವುದು ಹಾಗೂ ಮುತ್ತಿಡುವುದು ಕೂಡ ಒಳ್ಳೆಯದು.
ನಗುತಲಿರಿ:
ನಗು ನಿಮ್ಮ ದೇಹಕ್ಕೆ ಅಗತ್ಯವಿರುವ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯ, ಶ್ವಾಸಕೋಶಗಳು ಮತ್ತು ಸ್ನಾಯುಗಳನ್ನು ಪ್ರಚೋದಿಸುತ್ತದೆ.
ಸಂಗೀತ ಕೇಳಿ:
ಸಂಗೀತದಿಂದ ಮಾನಸಿಕ ಒತ್ತಡ ಹಾಗೂ ರಕ್ತದ ಒತ್ತಡವನ್ನು ತಡೆಯಬಹುದು ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದ್ದು. ಸಂಗೀತವು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ನೆಚ್ಚಿನ ಯಾವುದೇ ಬಗೆಯ ಸಂಗೀತ ಕೇಳಿ.. ಒತ್ತಡ ನಿವಾರಣೆ ಆಗುತ್ತದೆ. ಮಿದುಳು ಸಂಬಂಧಿ ಸಮಸ್ಯೆ, ಹೃದಯದ ಆರೋಗ್ಯ, ರಕ್ತದೊತ್ತಡವನ್ನು ತಗ್ಗಿಸಲು ಸಂಗೀತ ಸಹಕಾರಿ.
ವಿಟಮಿನ್:
ಮುಂಜಾನೆ ಸೂರ್ಯನಿಂದ ಹೊರಬರುವ ವಿಟಮಿನ್ ಡಿ ಸಹಾಯಕವಾಗಿದೆ. ಕ್ಯಾಲ್ಶಿಯಂ ಮತ್ತು ಫಾಸ್ಪರಸ್ ಮರುಹೀರಿಕೆಗೆ ಇದು ಉಪಯುಕ್ತ ಎಂದೆನಿಸಿದ್ದು ಈ ಎರಡೂ ಮುಖ್ಯ ನ್ಯೂಟ್ರಿನ್‌ಗಳು ಮೂಳೆ ಮತ್ತು ಹಲ್ಲಿನ ಸಾಂದ್ರತೆಯನ್ನು ಸುಧಾರಿಸಲು ಸಹಾಯಕವಾಗಿದೆ.
ಜಂಕ್ ಫುಡ್, ಸಂಸ್ಕರಿಸಲ್ಪಟ್ಟ ಆಹಾರ ಸೇವಿಸುವುದು ಬೇಡ:
ಹೊರಗಡೆ ದೊರೆಯುವ ಹೆಚ್ಚಿನ ಆಹಾರ ಪದಾರ್ಥಗಳು ಸಂಸ್ಕರಿಸಲ್ಪಟ್ಟಿರುತ್ತವೆ. ಇದು ದೇಹಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಹೊರಗಡೆ ಅತಿಯಾಗಿ ತಿನ್ನುವುದು, ಜಂಕ್ ಫುಡ್ ಸೇವನೆಯನ್ನು ಬಿಡುವುದು ಆರೋಗ್ಯಕ್ಕೆ ಒಳ್ಳೆಯದು. ಆದಷ್ಟು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ.
ಪರ್ಯಾಯ ವ್ಯಾಯಾಮಗಳು:
ಜಾಗಿಂಗ್, ವಾಕಿಂಗ್, ಟ್ರಕ್ಕಿಂಗ್, ಸ್ವಿಮ್ಮಿಂಗ್, ಸೈಕ್ಲಿಂಗ್ನಲ್ಲಿ ತೊಡಗಿಕೊಳ್ಳಿ. ಈ ಮೂಲಕ ಹೆಚ್ಚುವರಿ ಕ್ಯಾಲೋರಿಯನ್ನು ದೇಹದಿಂದ ತೆಗೆದುಹಾಕಿ.

Stress is human life’s basic diseases. We all experience stress in daily life. For healthy life first of all we have to reduce our stress. Kannadaadvisor in this article giving some simple tips to reduce stress.

 

You may also like