ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಕಚೇರಿಗಳು ಮತ್ತು ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಮಲ್ಟಿಟಾಸ್ಕಿಂಗ್ ಸಿಬ್ಬಂದಿಗಳ ನೇಮಕಾತಿಗೆ ಎಸ್‌ಎಸ್‌ಸಿ ಅಧಿಸೂಚನೆ ಪ್ರಕಟಿಸಿದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿನ ಮಲ್ಟಿಟಾಸ್ಕಿಂಗ್ ಸಿಬ್ಬಂದಿಗಳ ಪೈಕಿ ರೂ.5200-ರೂ.20200 ವೇತನ ಶ್ರೇಣಿ ರೂ.1800(ಏಳನೇ ಕೇಂದ್ರೀಯ ವೇತನ ಅಯೋಗದ ಲೆವೆಲ್ 1ಪೇ ಮ್ಯಾಟ್ರಿಕ್ಸ್) ವೇತನ ಶ್ರೇಣಿಯ ಸಾಮಾನ್ಯ ಕೇಂದ್ರೀಯ ಸೇವಾ ಗುಂಪಿನ ‘ಸಿ’ ನಾನ್ ಗೆಜೆಟೆಡ್, ನಾನ್ ಟೆಕ್ನಿಕಲ್ ಹುದ್ದೆಗಳ ಭರ್ತಿಗಾಗಿ ಎಸ್‌ಎಸ್‌ಸಿ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 22-04-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-05-2019
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31-05-2019
ಅರ್ಜಿ ಶುಲ್ಕವನ್ನು ಬ್ಯಾಂಕ್ ಚಲನ್ ಮೂಲಕ ಪಾವತಿಸಲು ಕೊನೆಯ ದಿನ : 01-06-2019
ಕಂಪ್ಯೂಟರ್ ಆಧಾರಿತ ಪರೀಕ್ಷೆ(Tier-I) ದಿನ: 02-08-2019 ರಿಂದ 06-09-2019
ಡಿಸ್ಕ್ರಿಪ್ಟಿವ್ ಪೇಪರ್ ಪರೀಕ್ಷೆ(Tier-II) ದಿನಾಂಕ: 17-11-2019
ಅರ್ಜಿ ಸಲ್ಲಿಸಲು ವೆಬ್ ವಿಳಾಸ: https://ssc.nic.in/
ಹುದ್ದೆಗಳ ಸಂಖ್ಯೆ ಎಷ್ಟು?
– ಎಸ್‌ಎಸ್‌ಸಿಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲಿರುವ ಹುದ್ದೆಗಳ ಸಂಖ್ಯೆಯನ್ನು ಶೀಘ್ರದಲ್ಲೇ ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ https://ssc.nic.in ಗೆ ಭೇಟಿ ನೀಡಿ >Candidate’s Corner >>Tentative Vacancy ಆಯ್ಕೆಗಳಲ್ಲಿ ಹುದ್ದೆಗಳ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಮೀಸಲಾತಿ: ಕೇಂದ್ರಿಯ ನಿಯಮಾನುಸಾರ ಎಸ್‌ಸಿ, ಎಸ್‌ಟಿ, ಒಬಿಸಿ, ನಿವೃತ್ತ ಯೋಧರು, ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಸೌಲಭ್ಯ ನೀಡಲಾಗುತ್ತದೆ.
ವಿದ್ಯಾರ್ಹತೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಆಗಸ್ಟ್ 1 ರೊಳಗೆ ಫಲಿತಾಂಶ ಬರುಂವತಿದ್ದರೂ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ
– ಕನಿಷ್ಠ ವಯೋಮಿತಿ 18 ವರ್ಷಗಳು
– ಗರಿಷ್ಠ ವಯೋಮಿತಿ 25 ವರ್ಷ
– ಆದರೆ ಕೆಲ ವಿಭಾಗಗಳಲ್ಲಿ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
– ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ
– ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ
– ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ.
ನೇಮಕಾತಿ ವಿಧಾನ
– ಆನ್‌ಲೈನ್ ಮೂಲಕ ಲಿಖಿತ ಪರೀಕ್ಷೆ ನಡೆಸಿ, ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಜೇಷ್ಠತಾ ಪಟ್ಟಿ ತಯಾರಿಸಲಾಗುವುದು. ಅವರನ್ನು ನೇರ ಸಂದರ್ಶನ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೊದಲು ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಕ್ರಿಯೇಟ್ ಮಾಡಿಕೊಂಡು ನಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ ಎಷ್ಟು?
– ರೂ.100 ನಿಗದಿಪಡಿಸಲಾಗಿದೆ.
– ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ವೀಸಾ, ಮಾಸ್ಟರ್ ಕಾರ್ಡ್, ಮ್ಯಾಸ್ಟೋ, ರುಪೇ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್, ಭೀಮ್ UPI, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
– ಅಥವಾ ಅರ್ಜಿ ಸಲ್ಲಿಸಿದ ನಂತರ ಚಲನ್ ಡೌನ್‌ಲೋಡ್ ಮಾಡಿಕೊಂಡು SBI ನ ಯಾವುದೇ ಶಾಖೆಯಲ್ಲಿ ಪಾವತಿಸಬಹುದು.
– ಮಹಿಳೆಯರು, ಅಂಗವಿಕಲರು, SC/ST ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಕರ್ನಾಟಕದಲ್ಲಿ SSC ಪರೀಕ್ಷಾ ಕೇಂದ್ರಗಳು
– ಬೆಳಗಾವಿ
– ಬೆಂಗಳೂರು
– ಹುಬ್ಬಳ್ಳಿ
– ಕಲಬುರಗಿ
– ಮಂಗಳೂರು
– ಮೈಸೂರು
– ಶಿವಮೊಗ್ಗ
– ಉಡುಪಿ
ಕರ್ನಾಟಕದಲ್ಲಿ ಸಂಪರ್ಕಿಸಲು ವಿಳಾಸ: ಪ್ರಾದೇಶಿಕ ನಿರ್ದೇಶಕರ ಕಚೇರಿ(ಕೆಕೆಆರ್), ಸ್ಟಾಪ್ ಸೆಲೆಕ್ಷನ್ ಕಮಿಷನ್, ಫಸ್ಟ್ ಪ್ಲೋರ್, ‘ಇ’ ವಿಂಗ್, ಕೇಂದ್ರೀಯ ಸದನ್, ಕೋರಮಂಗಲ, ಬೆಂಗಳೂರು-560034
ವೆಬ್ ವಿಳಾಸ: www.ssckkr.kar.nic.in