Subhash Chandra Bose Quotes; ಲಕ್ಷಾಂತರ ದೇಶ ಭಕ್ತರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ಯೋಧ. ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು ನಮ್ಮ ಸುಭಾಷ್ಚಂದ್ರಬೋಸ್ ಅವರು. ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಅವರ ಮಾತು. ಭಾರತದ ಇತಿಹಾಸದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಹೆಸರು ಅಜರಾಮರ. ಬ್ರಿಟಿಷರ ವಿರುದ್ಧ ವೀರಾವೇಶದಿಂದ ಕಾದಾಡಿದ ಸೇನಾನಿ.
ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು.
ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು. ಭಾರತವು ಸ್ವಾತಂತ್ರ್ಯ ಪಡೆಯಲು ಭಾರತಕ್ಕೆ ಸಹಾಯ ಮಾಡಿದ ಜರ್ಮನಿ, ಜಪಾನ್, ರಷ್ಯಾಗಳಂತ ದೇಶಗಳು ಬ್ರಿಟಿಷರ ವಿರುದ್ಧ ಹೋರಾಡಲು ಮತ್ತು ಸ್ವಾತಂತ್ರ್ಯ ಪಡೆಯಲು ಬೋಸರಿಗೆ ಸಹಾಯ ಮಾಡಲು ಸಿದ್ಧವಾಗಿದ್ದವು ಎಂದು ಭಾವಿಸಲಾಗಿವೆ. ಗಾಂಧಿಯವರು ಸ್ವಾತಂತ್ರ್ಯ ಪಡೆಯುವ ಬಗೆಗೆ ಒಂದೇ ಮಾರ್ಗದಲ್ಲಿದ್ದರು. ಆದರೆ ಬೋಸ್ ಸ್ವಾತಂತ್ರ್ಯಕ್ಕೆ ಸಶಸ್ತ್ರ ಹೋರಾಟವನ್ನೂ ಒಪ್ಪಿದ್ದರು. ಅವರ ಹೋರಾಟವು ವಿಫಲವಾದರೂ, ಭಾರತ ಸ್ವಾತಂತ್ರ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತನ್ನದೇ ಆದ ಕೊಡಿಗೆ ನೀಡಿದೆ ಎಂದು ಭಾವಿಸಲಾಗಿದೆ. ಹಾಗಾಗೀ ಇವರ ಮಾತುಗಳು ಹಾಗೂ ನಡೆನುಡಿಗಳ ಬಗ್ಗೆ ಒಂದು ಸಣ್ಣ ಮಾಹಿತಿ.
ಸುಭಾಷ್ ಚಂದ್ರ ಬೋಸ್ ಅವರ ಮಾತಿನ ಮೂಲಕ ಬಂದ ಸಂದೇಶಗಳು
– ರಕ್ತ ಮತ್ತು ಸ್ವಾತಂತ್ರ್ಯ :- ನಿಮ್ಮ ರಕ್ತವನ್ನು ನನಗೆ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ತಂದು ಕೊಡುತ್ತೇನೆ.ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.
– ಸ್ವಾತಂತ್ರ್ಯ ಸಿಗುವುದು ಹೇಗೆ? :- ಸ್ವಾತಂತ್ರ್ಯ ಎಂಬುದು ಯಾರೋ ಕೊಡುವುದಲ್ಲ, ನಾವೇ ಪಡೆಯುವುದು
– ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.
– ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ.
– ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ.
– ಸಿದ್ಧಾಂತಕ್ಕೆ ಸಾವಿಲ್ಲ :- ಒಂದು ಸಿದ್ಧಾಂತದ ಕಾರಣ ಓರ್ವ ಸಾಯಬಹುದು. ಆದರೆ ಮುಂದೆ ಆತನ ಸಿದ್ಧಾಂತ ಸಾವಿರಾರು ಮಂದಿಯಲ್ಲಿ ಅವತರಿಸುತ್ತದೆ.
– ರಕ್ತ ಹರಿಸುವುದು ನಮ್ಮ ಕರ್ತವ್ಯ :- ಸ್ವಾತಂತ್ರ್ಯಕ್ಕಾಗಿ ನಮ್ಮ ರಕ್ತ ಹರಿಸುವುದು ನಮ್ಮ ಕರ್ತವ್ಯ. ನಮ್ಮ ತ್ಯಾಗ ಮತ್ತು ಪರಿಶ್ರಮದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯ. ಸ್ವಂತ ಶಕ್ತಿಯನ್ನು ಪ್ರತಿಷ್ಠಾಪಿಸಲು ಸಾಧ್ಯ.
– ಶೋಷಣೆಗಳ ವಿರುದ್ಧ ಹೋರಾಡಿ :- ಶೋಷಣೆಗಳ ವಿರುದ್ಧ ಧೈರ್ಯದಿಂದ ಹೋರಾಡುವ ಇಚ್ಛಾಶಕ್ತಿ ನಮಗಿರಬೇಕು. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು.
– ರಾಜಕೀಯ ಲೆಕ್ಕಾಚಾರ :- ನಾವು ಅಂದುಕೊಂಡಿರುವುದಕ್ಕಿಂತ ಶಕ್ತಿಶಾಲಿಯಾಗಿರುತ್ತದೆ ರಾಜಕೀಯ ಲೆಕ್ಕಾಚಾರಗಳು.
– ಚಲೋ ದಿಲ್ಲಿ! :- ಭಾರತ ಕರೆಯುತ್ತಿದೆ. ರಕ್ತವು ರಕ್ತಕ್ಕಾಗಿ ಕರೆಯುತ್ತಿದೆ. ಎದ್ದೇಳಿ, ಕಳೆದುಕೊಳ್ಳಲು ನಮಗೆ ಸಮಯವಿಲ್ಲ. ನಿಮ್ಮ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಿ. ದಿಲ್ಲಿಯ ಪ್ರಯಾಣ ಸ್ವಾತಂತ್ರ್ಯದ ಪ್ರಯಾಣ. ಚಲೋ ದಿಲ್ಲಿ!
– ಜೀವನದಲ್ಲಿ ಸಂಘರ್ಷ :- ಜೀವನದಲ್ಲಿ ಸಂಘರ್ಷವಿಲ್ಲದಿದ್ದರೆ ಬದುಕಿನ ಅರ್ಧಕ್ಕರ್ಧ ಆಸಕ್ತಿಯನ್ನೇ ಕಳೆದುಕೊಳ್ಳುತ್ತೇವೆ.
ಅಕ್ರಮಸಕ್ರಮ ಅರ್ಜಿ ಬಗ್ಗೆ ನಿಮಗೆಷ್ಟುಗೊತ್ತು? ಫಾರಂ ನಂ.57ರಲ್ಲಿ ಏನೇನಿದೆ?