ಕರ್ನಾಟಕ ಮೂಲದ ಪ್ರಮುಖ ಸಾರ್ವಜನಿಕ ಬ್ಯಾಂಕ್ ಸಿಂಡಿಕೆಟ್ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: 29-03-2019
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 18-04-2019
ಹುದ್ದೆಗಳ ಹೆಸರು ಮತ್ತು ಸಂಖ್ಯೆ
ಸೀನಿಯರ್ ಮ್ಯಾನೇಜರ್(ರಿಸ್ಕ್ ಮ್ಯಾನೇಜ್‌ಮೆಂಟ್) – 5
ಮ್ಯಾನೇಜರ್(ರಿಸ್ಕ್ ಮ್ಯಾನೇಜ್‌ಮೆಂಟ್) – 50
ಮ್ಯಾನೇಜರ್ (ಕಾನೂನು) – 41
ಮ್ಯಾನೇಜರ್ (ಐಎಸ್ ಆಡಿಟ್) – 3
ಸೆಕ್ಯುರಿಟಿ ಆಫೀಸರ್ – 30
ವಿದ್ಯಾರ್ಹತೆ
– MBA ಫೈನಾನ್ಸ್, ಮಾರ್ಕೆಟಿಂಗ್, ಗಣಿತ, ಸಂಖ್ಯಾಶಾಸ್ತ್ರ ಸ್ನಾತಕೋತ್ತರ ಪದವಿ ಉತ್ತೀರ್ಣ
– CA, ICEWE ಮತ್ತು ಕಾನೂನು ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.
– ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು.
– ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಅಂಕಗಳಲ್ಲಿ ಶೇ.5 ವಿನಾಯಿತಿ ನೀಡಲಾಗುತ್ತದೆ.
ವಯೋಮಿತಿ
– ಸೆಕ್ಯುರಿಟಿ ಆಫೀಸರ್ ಹುದ್ದೆಗೆ ಕನಿಷ್ಠ ವಯೋಮಿತಿ 25 ವರ್ಷ, ಗರಿಷ್ಠ ವಯೋಮಿತಿ 45 ವರ್ಷ
– ಇತರೆ ಉಳಿದ ಎಲ್ಲಾ ಹುದ್ದೆಗಳಿಗೆ 35 ವರ್ಷ
– SC, ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋ ಸಡಿಲಿಕೆ ಕಲ್ಪಿಸಲಾಗಿದೆ.
ಅನುಭವ
– ಮ್ಯಾನೇಜರ್ ( ರಿಸ್ಕ್ ಮ್ಯಾನೇಜ್‌ಮೆಂಟ್) ಹುದ್ದೆಗೆ 1 ವರ್ಷ ಅನುಭವ
– ಸೆಕ್ಯುರಿಟಿ ಆಫೀಸರ್‌ಗೆ 5 ವರ್ಷ ಅನುಭವ
– ಮ್ಯಾನೇಜರ್ (IS ಆಡಿಟ್) ಹುದ್ದೆಗೆ 4 ವರ್ಷ ಅನುಭವ
– ಉಳಿದ ಹುದ್ದೆಗಳಿಗೆ ಕನಿಷ್ಠ 3 ವರ್ಷ ಅನುಭವ ಕಡ್ಡಾಯವಾಗಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
– ಆಸಕ್ತ ಅಭ್ಯರ್ಥಿಗಳು ಸಂಡಿಕೇಟ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ನಲ್ಲಿ ಕರಿಯರ್ ಆಯ್ಕೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ರೂ.600
SC/ST/ಅಂಗವಿಕಲ ಅಭ್ಯರ್ಥಿಗಳಿಗೆ – ರೂ.300
– ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದೆ.
ನೇಮಕಾತಿ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಟೆಸ್ಟ್, ಗುಂಪು ಚರ್ಚೆ, ನೇರ ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಿಂಡಿಕೇಟ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ ಗಾಗಿ – www.syndicatebank.in/English/Career.aspx