ಭಾರತ. ಇದರ ಮೂಲ ಮಂತ್ರ ವಸುಧೈವ ಕುಟುಂಬಕಂ. ಅಂದರೆ ಇಡೀ ಪ್ರಪಂಚವೇ ಒಂದು ಕುಟುಂಬ ಎಂಬುದಾಗಿದೆ. ಒಂದು ಕುಟುಂಬ ಎಂದರೆ ಒಬ್ಬರು ಇನ್ನೊಬ್ಬರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗೋ ಅವಲಂಬನೆ ಆಗಿಯೇ ಇರುತ್ತಾರೆ. ಒಂದು ಮನೆ ಎಂದ ಮೇಲೆ ಅದು ಹೆಚ್ಚಿನದಾಗಿ ಆಲ್ಲಿಯ ಯಜಮಾನನ ಮೇಲುಸ್ತುವಾರಿಯಲ್ಲಿ ನಡೆಯುತ್ತದೆ ಅಲ್ಲವೇ. ಆ ಯಜಮಾನ ಅಥವಾ ಕುಟುಂಬದ ಇತರ ಸದಸ್ಯರ ಆಯಸ್ಸು ಯಾರು ಬಲ್ಲರು. ಇದ್ದಷ್ಟು ದಿನ ನೆಮ್ಮದಿಯಿಂದ ಬದುಕಿ, ಮರಣದ ನಂತರ ನಮ್ಮವರು ಒಂದಿಷ್ಟು ಆರ್ಥಿಕವಾಗಿ ನೆಮ್ಮದಿ ಕಾಣಲಿ ಎಂಬ ಇಚ್ಛೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತಮ ಮಾರ್ಗ ವಿಮೆ ಮಾತ್ರ.
ನಾವು ಸದ್ಯ ಓಡುತ್ತಿರುವ ಪ್ರಪಂಚದ ಜೊತೆ ಪ್ರಯಾಣಿಸುತ್ತಿದ್ದೇವೆ. ನಮ್ಮ ಅವಸರದ ಬದುಕಿನಲ್ಲಿ ಅಪಘಾತಗಳು ಸಂಭವಿಸುವ ಸನ್ನಿವೇಶಗಳು ಹೆಚ್ಚು. ಸಾವು ನೋವುಗಳು ಹೆಚ್ಚು. ಹೇಳಬೇಕೆಂದರೆ ನಮ್ಮನ್ನು ನಮ್ಮ ಕುಟುಂಬದವರನ್ನು ಎತ್ತೇಚ್ಚವಾಗಿ ಭಾಧಿಸೋದು ಅನಿರೀಕ್ಷಿತ ಸಾವು ನೋವುಗಳು ಅದರಲ್ಲೂ ರಸ್ತೆ ಅಪಘಾತ. ನಾವು ಎಷ್ಟು ನಿಗವಹಿಸಿ ವಾಹನ ಚಾಲನೆ ಮಾಡುತ್ತಿದ್ದರು ಆಕಸ್ಮಿಕ ಅಸಂಭವನಿಯ ಘಟನೆಗಳು ನಡೆದೇ ಹೋಗುತ್ತವೆ. ಇವು ನಮಗೆ ಸಾವನ್ನೋ, ಅಂಗ ವೈಕಲ್ಯತೆಯನ್ನೋ, ಆರ್ಥಿಕ ನಷ್ಟವನ್ನೋ ತಂದೊಡ್ಡುವ ಸಾಧ್ಯತೆ ಹೆಚ್ಚು. ಈ ರೀತಿಯ ಅಪಾಯಗಳು ಬದುಕಿನಲ್ಲಿ ನಮಗೆ ಎದುರಾಗಬಹುದು. ಸಮಸ್ಯೆಗಳು ಬಂದಾಗ ನಾವು ನರಳಿ ನಮ್ಮವರನ್ನು ನರಳಿಸುವುದಕ್ಕಿಂತ ನಮ್ಮವರಿಗಾಗಿ ಒಂದಿಷ್ಟು ಬಿಗಿ ಆರ್ಥಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಅದಕ್ಕೆ ತಕ್ಕ ವೇದಿಕೆ ಈ ವೈಯಕ್ತಿಕ ಅಪಘಾತ ವಿಮೆ.
ಪತ್ರಗಳ ವಿತರಣೆ ಜತೆ ಇತ್ತೀಚಿಗೆ ಬ್ಯಾಂಕ್ ಸೇವೆಗಳನ್ನು ಅಂದರೇ ಸಣ್ಣ ಉಳಿತಾಯ ಖಾತೆ, RD ಮತ್ತಿತ್ತರ ವೈಯಕ್ತಿಕ ಹಣಕಾಸು ಸೇವೆಗಳ ಮೂಲಕ ಗ್ರಾಹಕರನ್ನು ತನ್ನತ್ತ ಬರಮಾಡಿಕೊಳ್ಳತ್ತಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸದ್ಯ ವಾರ್ಷಿಕ 399 ಮತ್ತು 299 ರೂ ಗಳ ವೈಯಕ್ತಿಕ ಅಪಘಾತ ವಿಮೆ ಯೋಜನೆ ಯನ್ನು ಪ್ರಕಟಿಸಿದ್ದು , 10 ಲಕ್ಷ ರೂ ಕವರೇಜ್ ಈ ವಿಮೆ ಯೋಜನೆಯಡಿ ದೊರೆಯಲಿದೆ. ಹಾಗೇ ಈ ಯೋಜನೆಗೆ 18 ರಿಂದ 65 ವರ್ಷ ವಯೋಮಾನದ ಯಾವುದೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆದಾರ ಈ ವೈಯಕ್ತಿಕ ಅಪಘಾತ ವಿಮೆ ಮಾಡಿಸಿಕೊಳ್ಳಲು ಅರ್ಹರಾಗಿರುತ್ತಾನೆ. ವಾರ್ಷಿಕ 399/299 ಈ ಎರಡರಲ್ಲಿ ಯಾವುದೇ ಒಂದನ್ನು ಮಾಡಿಸಿದರು ಇವುಗಳ ಒಟ್ಟು ಕವರೇಜ್ 10 ಲಕ್ಷವೇ ಇರುತ್ತದೆ ಅದರಲ್ಲಿ ಬದಲಾವಣೆ ಇರುವುದಿಲ್ಲ.
399 ರೂ ಪ್ರೀಮಿಯಂ ವಿಮೆಯ ಲಾಭಗಳು
- ಇದು ವಾರ್ಷಿಕ ವಿಮಾ ಯೋಜನೆಯಾಗಿದ್ದು, ಈ ವಿಮೆಯನ್ನು ಮಾಡಿಸಿದ ದಿನಾಂಕದಿಂದ 365 ದಿನಗಳವರೆಗೆ ಮಾತ್ರ ಚಾಲ್ತಿಯಲ್ಲಿ ಇರುತ್ತದೆ. ತದನಂತರ 1 ವರ್ಷದ ಅವಧಿ ಮುಗಿದ ಮೇಲೆ ಪುನಃ ನವೀಕರಿಸಬೇಕು. ಅಂದರೆ ಪ್ರತಿ ವರ್ಷ 399 ರೂಗಳನ್ನು ಪಾವತಿಸುತ್ತಾ ಹೋಗಬೇಕು.
- ಅಪಘಾತದಲ್ಲಿ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ಈ ಯೋಜನೆಯಡಿ 10 ಲಕ್ಷ ರೂ ವರೆಗೆ ವಿಮೆಯ ಪಲಾನುಭವನ್ನು ಪಡೆಯಬಹುದು.
- ಶಾಶ್ವತ ಭಾಗಶಃ ಅಂಗವೈಕಲ್ಯ / ಪಾರ್ಶ್ವವಾಯು ಉಂಟಾದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚಗಳಿಗೆ ಅಂದರೇ ಇನ್ ಪೆಸೆಂಟ್ ಡಿಪಾರ್ಟ್ಮೆಟ್ ( ಐಪಿಡಿ) ಗೆ 60.000 ರೂ ಮತ್ತು ಔಟ್ ಪೆಸೆಂಟ್ ಡಿಪಾರ್ಟ್ಮೆಟ್ (ಒಪಿಡಿ) ಗೆ 30.000 ರೂ ಕವರೇಜ್ ಕೂಡ ಈ ಯೋಜನೆಯಡಿ ಲಭ್ಯವಿದೆ.
- ಇನ್ನೂ ಆಸ್ಪತ್ರೆಗೆ ದಾಖಲಾದ 10 ದಿನಗಳ ಅವಧಿಗೆ ದಿನಕ್ಕೆ 1000 ರೂ ನಂತೆ 10.000 ರೂಪಾಯಿ ದೊರೆಯುತ್ತದೆ.
- ಅಪಘಾತದಲ್ಲಿ ಮೃತಪಟ್ಟರೆ ಅ ವ್ಯಕ್ತಿಯ ಅರ್ಹ ಇಬ್ಬರು ಮಕ್ಕಳ ಶಿಕ್ಷಣಕ್ಕೆ 1 ಲಕ್ಷ ರೂ ಸಹಾಯ ಧನ ದೊರೆಯಲಿದೆ.
- ಇನ್ನೂ ವಿಮೆದಾರರ ಕುಟುಂಬದವರ ಪ್ರಯಾಣ ವೆಚ್ಚಕ್ಕೆ 25000 ರೂ ವರೆಗೆ ಹಾಗೂ ಅಂತ್ಯ ಸಂಸ್ಕಾರಕ್ಕೆ 5000 ರೂ ಸಹಾಯ ಧನವನ್ನು ಈ ಯೋಜನೆ ಒಳಗೊಂಡಿದೆ.
299 ರೂ ಪ್ರೀಮಿಯಂ ವಿಮೆಯ ಲಾಭಗಳು
- ಇದು ಸಹ 299 ರೂ ಪ್ರೀಮಿಯಂ ವಿಮೆಯಂತೆ ವಾರ್ಷಿಕ ವಿಮಾ ಯೋಜನೆಯಾಗಿದ್ದು, ಈ ವಿಮೆಯ ನೋಂದಾಯಿತ ದಿನಾಂಕದಿಂದ 365 ದಿನಗಳವರೆಗೆ ಮಾತ್ರ ಚಾಲ್ತಿಯಲ್ಲಿ ಇರುತ್ತದೆ. ತದನಂತರ 1 ವರ್ಷದ ಅವಧಿ ಮುಗಿದ ಮೇಲೆ ಪುನಃ ನವೀಕರಿಸಬೇಕು. ಅಂದರೆ ಪ್ರತಿ ವರ್ಷ 299 ರೂ ಗಳನ್ನು ಪಾವತಿಸಬೇಕು.
- ಈ ವಿಮೆಯಲ್ಲಿ 399 ರೂ ಪ್ರೀಮಿಯಂ ವಿಮೆಯಂತೆ ವಿಮೆದಾರರ ಕುಟುಂಬದವರ ಪ್ರಯಾಣ ವೆಚ್ಚ, ಅಂತ್ಯ ಸಂಸ್ಕಾರಕ್ಕೆ ಸಹಾಯ ಧನ ಹಾಗೂ ಮೃತ ವ್ಯಕ್ತಿಯ ಅರ್ಹ ಇಬ್ಬರು ಮಕ್ಕಳ ಶಿಕ್ಷಣಕ್ಕೆ 1 ಲಕ್ಷ ರೂ ಸಹಾಯ ಧನಗಳ ಲಾಭವನ್ನು ಒಳಗೊಂಡಿರುವುದಿಲ್ಲ. ಆದರೇ ಉಳಿದ ಎಲ್ಲಾ ಬಗೆಯ ಅನುಕೂಲಗಳು ಇಲ್ಲಿವೆ.
ಯಾರಿಗೆ ಈ ನೀತಿ ಅನ್ವಯಿಸುವುದಿಲ್ಲ?
- ಆತ್ಮಹತ್ಯೆ ಮಾಡಿಕೊಂಡವರಿಗೆ.
- ಯುದ್ಧದಲ್ಲಿ ಭಾಗಿಯಾದ/ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೈನಿಕರಿಗೆ/ ಮಿಲಿಟರಿ ಬಣಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಈ ಯೋಜನೆ ಲಭ್ಯವಿಲ್ಲ.
- ಏಡ್ಸ್/ ಬ್ಯಾಕ್ಟೀರಿಯ ಸೋಂಕಿತ ವ್ಯಕ್ತಿ/ ಯಾವುದೇ ರೋಗದಿಂದ ಮೃತಪಟ್ಟ ವ್ಯಕ್ತಿಗೆ ಈ ಯೋಜನೆ ಲಭ್ಯವಿಲ್ಲ.
- ಇನ್ನೂ ಅಪಾಯಕಾರಿ ಕ್ರೀಡೆಗಳಲ್ಲಿ ಭಾಗಿಯಾದ ಸ್ಪರ್ಧಿಗಳಿಗೆ ಈ ವಿಮೆಯ ಲಭ್ಯವಿಲ್ಲ.