ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯವು ತೆಂಗು ಅಭಿವೃದ್ದಿ ಮಂಡಳಿಯ ಪ್ರಾದೇಶಿಕ ಕಚೇರಿ ಬೆಂಗಳೂರು ಇವರು 2018-19ರ ಅವಧಿಯ ಕೃಷಿ(Agriculture) ಪದಾರ್ಥಗಳ ಪೂರೈಕೆಗಾಗಿ ಟೆಂಡರ್ ಪ್ರಕಟಣೆ ಹೊರಡಿಸಿದ್ದಾರೆ.
‘ಪ್ರಾತ್ಯಕ್ಷಿತೆ ಪ್ಲಾಟ್ಗಳನ್ನು ಹಾಕುವ’ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಕೃಷಿ ಸಲಕರಣೆಗಳ ಪೂರೈಕೆಗಾಗಿ ಟೆಂಡರ್ ಅಹ್ವಾನಿಸಲು ಉದ್ದೇಶಿಸಿರುತ್ತಾರೆ. ಕೃಷಿಗೆ ಬಳಸಲಾಗುವ ಬೊರಾಕ್ಸ್, ನೀಮ್ ಕೇಕ್ , ತ್ರಿಚೊಡರ್ಮಾವಿರಿಡಿ, ಅಜಾದಿರಾಚ್ಟಿನ್, ರ್ಯಾಟ್ ಕೇಕ್, ರೀನೋಸೆರಾಸ್, ಬೀಟ್ಲ್ ಮತ್ತು ರೆಡ್ ಪಾಮ್ ವೀವಿಲ್ಗಳ ಫೆರೊಮೋನ್ ಟ್ರಾಪ್ಸ್, ಕಾಪರ್ ಸಲ್ಫೇಟ್ ಮತ್ತು ವೆಜಿಟೇಬಲ್ ಬೀಜಗಳನ್ನು ಅವಶ್ಯಕತೆಯ ಆಧಾರದಲ್ಲಿ ಅಗತ್ಯ ಪ್ರದೇಶಗಳಿಗೆ ಸರಬರಾಜು ಪಡೆಯಲು ಉದ್ದೇಶಿಸಲಾಗಿದೆ.
ತೆಂಗು ಅಭಿವೃದ್ದಿ ಮಂಡಳಿಯ ಪ್ರಾದೇಶಿಕ ಕಚೇರಿ ಹುಳಿಮಾವು, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076 ಇಲ್ಲಿ ಟೆಂಡರ್ ತೆಗೆದುಕೊಳ್ಳಲು ಇಚ್ಛಿಸುವವರು ಕೆಲಸದ ಯಾವುದೇ ದಿನದಲ್ಲಿ ಟೆಂಡರ್ ನಮೂನೆ ಮತ್ತು ಷರತ್ತು ಹಾಗೂ ನಿಬಂಧನೆಗಳನ್ನು ಕೇಳಿ ತಿಳಿಯಬಹುದು. ಅಥವಾ www.coconutboard.gov.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ಮೂರು ವಾರಗಳ ಕಾಲ ಮೊಹರಾದ ಟೆಂಡರ್ಗಳನ್ನು ಸ್ವೀಕರಿಸುವ ಅಂತಿಮ ದಿನಾಂಕವಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕ: 22/10/2018.
Bannerughatta Hulimavu rigional office of Coconut Development Board called Tender publication for supply of agricultural commodities. Read more here for full details.