ವೈದ್ಯಕೀಯ ಲೋಕದಲ್ಲಿ ಮಹಾ ಮಾರಿಗಳಾಗಿ ಕಾಡುತ್ತಿದ್ದ ಚಿಕುನ್ ಗುನ್ಯ, ಎಚ್ಐವಿ ಮತ್ತು ಎಚ್ಪಿವಿ ರೋಗಗಳ ನಿವಾರಣೆಗೆ ಅಂತು ಕೊನೆಗೂ ವೈದ್ಯಕೀಯ ಕ್ಷೇತ್ರದ ಸಂಶೋಧಕರು ಔಷಧ ಕಂಡುಹಿಡಿದಿದ್ದಾರೆ.
ಚಿಕುನ್ಗುನ್ಯ, ಎಚ್ಐವಿ ಮತ್ತು ಎಚ್ಪಿವಿ ರೋಗಗಳಿಗೆ ಕಾರಣವಾಗುವಂತಹ ವೈರಸ್ಗಳನ್ನು ಸಾಯಿಸುವ ಲೆಕ್ಟಿನ್ ಪ್ರೊಟೀನ್ ಅನ್ನು ರೂರ್ಕಿ ಐಐಟಿಯ ಪ್ರೊಫೆಸರ್ಗಳು ಪತ್ತೆ ಹಚ್ಚಿದ್ದಾರೆ. ಈ ಪ್ರೋಟೀನ್ ಹುಣಸೆಕಾಯಿ, ಹುಣಸೆ ಹಣ್ಣು, ನಾರು, ಎಲೆಗಳಲ್ಲಿ ಔಷಧೀಯ ಗುಣವಿದೆ. ಆದ್ದರಿಂದಲೇ ಅದನ್ನು ಶತಮಾನಗಳಿಂದ ಊಟದಲ್ಲಿ ಬಳಸಲಾಗುತ್ತಿದೆ ಎಂದು ರೂರ್ಕಿ ಫ್ರೊಫೆಸರ್ ಶೈಲಿ ತೋಮರ್ ಹೇಳಿದ್ದಾರೆ.
ಹುಣಸೆಯಲ್ಲಿ ಹೊಟ್ಟೆನೋವು, ಅತಿಸಾರ ಭೇದಿ, ಬ್ಯಾಕ್ಟೀರಿಯಾ ಸೋಂಕು, ಗಾಯ, ಮಲಬದ್ಧತೆ ಹಾಗೂ ಉರಿಯೂತದಂಥ ಸಮಸ್ಯೆಗಳಿಗೆ ರಾಮಬಾಣ ಔಷಧ ಇರುವುದರಿಂದ, ಇದನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತಂತೆ. ಆದ್ದರಿಂದ ಈಗ ರೂರ್ಕಿ ಫ್ರೊಫೆಸರ್ ಇದರ ಪೇಟೆಂಟ್ ಗಾಗಿ(ಹಕ್ಕು ಸ್ವಾಮ್ಯಕ್ಕಾಗಿ) ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
The drug is in the Tamarind to remove Chikungunya, HIV, HPV founded by Roorkee Professors. Read more about this here.