ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ಹಾಗೂ ರಿಫಾರೆಸ್ಟ್ ಇಂಡಿಯಾ ಜಂಟಿಯಾಗಿ ನಿರ್ಮಿಸಿದ ಕಿರುಚಿತ್ರ `ದಿ ಸ್ಟೋರಿ ಆಫ್ ಕಾವೇರಿ [The Story of Kaveri (and every river, everywhere)]ಗೆ ಪ್ರತಿಷ್ಠಿತ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಸೇರಿದಂತೆ ಒಟ್ಟು 8 ಪ್ರಶಸ್ತಿಗಳು ಲಭಿಸಿದೆ.
ಇತ್ತೀಚಿಗೆ ನಾರ್ತ್ ಗೋವಾದಲ್ಲಿ ನಡೆದ ಕ್ಯೂರಿಯಸ್ ಕ್ರಿಯೇಟಿವ್ ಆವಾರ್ಡ್ಸ್ ಸಮಾರಂಭದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರದ ತಂಡ ಹಾಗೂ ನಿರ್ದೇಶಕ ಅಪ್ಪಯ್ಯ, ವಿನೋದ್ ಈಶ್ವರ್, ರಿಫಾರೆಸ್ಟ್ ಇಂಡಿಯಾದ ಅಧ್ಯಕ್ಷ ಜನೆತ್ ಯಗ್ನೇಶ್ವರನ್ ಪ್ರಶಸ್ತಿ ಸ್ವೀಕರಿಸಿದರು.
ಸುಪ್ರೀಂ ಕೋರ್ಟ್ ಕಾವೇರಿ ತೀರ್ಪನ್ನು ಅಂಗೀಕರಿಸಿದ ದಿನದಂದು ಈ ಕಿರುಚಿತ್ರ ನಿರ್ಮಿಸಲಾಗಿತ್ತು. ಚಿತ್ರದ ನಿರೂಪಣೆಯು ಪುರಾಣದಲ್ಲಿ ಬರಗಾಲವನ್ನು ಸೃಷ್ಟಿಸಿ ನೀರಿಗಾಗಿ ಯುದ್ಧಗಳನ್ನು ಪ್ರೇರೇಪಿಸುತ್ತಿದ್ದ ರಾಕ್ಷಸನ ಕಥೆಯನ್ನು ಹೇಳುತ್ತದೆ. ದಾಹದಿಂದ ನರಳುತ್ತಿದ್ದ ಜನರನ್ನು ಪಾರುಮಾಡಲು ಒಂದು ದೇವಿಯು ನದಿಯ ಅವತಾರವನ್ನು ತಾಳಿ ಧರೆಗಿಳಿಯುತ್ತಾಳೆ. ಇಂದು ದುಸ್ಥಿತಿಯಲ್ಲಿರುವ ಕಾವೇರಿಗಾಗಿ ಹೋರಾಡುವ ವೈಫಲ್ಯತೆಗಳನ್ನು ಕಥೆಯು ತನ್ನ ನಿರೂಪಣೆಯ ಮೂಲಕ ಸೂಚಿಸುತ್ತದೆ. ಹಳೆಯ ಸಂಘರ್ಷವನ್ನು ಶಾಂತಿಯುತ ಹಾಗೂ ಭರವಸೆಯ ಕಥೆಯನ್ನಾಗಿ ಬದಲಾಯಿಸುವ ಆಶಯ ಹೊಂದಿರುವ ಕಿರುಚಿತ್ರ, ತನ್ನ ಸೃಜನಶೀಲ ವಿಧಾನ ಮತ್ತು ಸಮಯದ ಮಹತ್ವದಿಂದಾಗಿ ಪ್ರಪಂಚದಾದ್ಯಂತದ ಮೆಚ್ಚುಗೆ ಗಳಿಸಿದೆ.
ಇನ್ನು ಈ ಚಿತ್ರಕ್ಕೆ ನಿರ್ದೇಶನ, ಎಡಿಟಿಂಗ್, ಛಾಯಾಗ್ರಹಣ ವಿಭಾಗದಲ್ಲಿ 3 ಗೋಲ್ಡ್ ಪ್ರಶಸ್ತಿಗಳನ್ನು ಗೆದ್ದಿದೆ. ಇದೇ ಸಮಾರಂಭದಲ್ಲಿ ನ್ಯಾಷನಲ್ ಜಿಯಾಗ್ರಾಫಿಕ್ ಗ್ರೀನ್ ಅವಾರ್ಡ್ಸ್ನ ಸಿಲ್ವರ್ ಪ್ರಶಸ್ತಿಯೂ ಕೂಡ ಚಿತ್ರಕ್ಕೆ ಲಭಿಸಿದೆ. ಇದುವರೆಗು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 15 ಪ್ರಶಸ್ತಿಗಳನ್ನು ತನ್ನಾದಾಗಿಸಿಕೊಂಡಿದೆ.
ಕಿರುಚಿತ್ರ ನೋಡಲು ಲಿಂಕ್ ಬಳಸಿ: https://www.youtube.com/watch?v=Nt7xtCvm-XA
a short film “The Story of Kaveri has been awarded the Grand Prix Award, at the Abby Goa-fest-2018 recently. This film addresses the global problem of water scarcity and gives a local solution to this crisis with a hard-hitting message.