Home » ನಿದ್ರೆ ಬರುತಿಲ್ಲವೇ..? ಸುಖ ನಿದ್ರೆಗಾಗಿ ಹೀಗೆ ಮಾಡಿ..

ನಿದ್ರೆ ಬರುತಿಲ್ಲವೇ..? ಸುಖ ನಿದ್ರೆಗಾಗಿ ಹೀಗೆ ಮಾಡಿ..

by manager manager

ನಿದ್ದೆ ಎಂಬುದು ಪ್ರತಿ ಮನುಷ್ಯನಿಗೆ ಅತ್ಯಂತ ಅವಶ್ಯಕ ಹಾಗೂ ನಮ್ಮ ಜೀವನದ ಅತ್ಯಂತ ಪ್ರಮುಖ ಕಾರ್ಯ. ಒಳ್ಳೆಯ ನಿದ್ರೆ ಮಾನಸಿಕ ಮತ್ತು ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ಸಾಮಾನ್ಯವಾಗಿ ಏಳು ರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ನಿದ್ರೆ ಹೆಚ್ಚು ಮಾಡಿದಷ್ಟು ನೆನಪಿನ ಶಕ್ತಿಗೆ ಅನುಕೂಲವು ಹೌದು.

 

ನಮ್ಮ ದೇಹಕ್ಕೆ ತಕ್ಕುದಾದ ನಿದ್ದೆ ಇಲ್ಲದ್ದಿದ್ದರೆ ನಮಗೆ ಅನೇಕ ತರಹದ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂದಿನ ಆಧುನಿಕ ಪ್ರಪಂಚದ ಜೀವನಶೈಲಿಯಿಂದ ಪ್ರತಿನಿತ್ಯ ಅನೇಕ ಸಂದರ್ಭಗಳಲ್ಲಿ ಒತ್ತಡಕ್ಕೊಳಗಾಗುತ್ತಿದ್ದು. ರಾತ್ರಿ ಹೊತ್ತು ನಿದ್ದೆಮಾಡಲು ಸಹ ಕಷ್ಟ ಪಡುವಂತಾಗಿದೆ. ಹೀಗಾಗಿ ನಿದ್ದೆಗೆಡುವುದರಿಂದ ರಕ್ತದೊತ್ತಡ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ದರಿಂದ ಕನ್ನಡ ಅಡ್ವೈಜರ್ ಇಂದು ಒಳ್ಳೆಯ ನಿದ್ದೆ ಬರಲು ಸೂಕ್ತ ಸಲಹೆಯನ್ನು ನೀಡುತ್ತಿದೆ. ಈ ಮಾಹಿತಿ ಕೆಳಗಿನಂತಿದೆ ಓದಿರಿ..

ಮಲಗುವಾಗ ಗೊಂದಲ ಬೇಡ
ಮಲಗುವಾಗ ಗೊಂದಲ ಬೇಡ: ರಾತ್ರಿ ಹಾಸಿಗೆಗೆ ಹೋಗುವ ಮುನ್ನ ಯಾವುದೇ ಗೊಂದಲವಿದ್ದರೂ ಅದನ್ನ ಬದಿಗಿಡಿ. ಮನಸ್ಸನ್ನ ತಿಳಿಯಾಗಿಸಿಕೊಂಡು ಹಾಸಿಗೆಗೆ ಹೋಗಿ.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಿ:
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಿ: ಮುಖ್ಯವಾಗಿ ನೀವು ಮಲಗುವ ಮುನ್ನ ಮೊಬೈಲ್, ಕಂಪ್ಯೂಟರ್, ಟಿವಿಯಿಂದ ದೂರವಿರಿ. ಎಲೆಕ್ಟ್ರಾನಿಕ್ ಉಪಕರಣಗಳಿಂದ ಹೊರಬರುವ ವಿಕಿರಣಗಳು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರಿ ನಿಮ್ಮ ನಿದ್ದೆಗೆ ಭಂಗ ತರಬಹುದು. ಹೀಗಾಗಿ ನೀವು ಮಲಗುವ ಕೋಣೆಗೆ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಅನ್ನು ತೆಗೆದುಕೊಂಡು ಹೋಗದಿರಿ.
ಪುಸ್ತಕ ಓದಿ
ಪುಸ್ತಕ ಓದಿ: ನಿದ್ರೆಗೂ ಮುನ್ನ ಯಾವುದಾದರೂ ಪುಸ್ತಕ ಓದುತ್ತಾ ಹೋಗಿ. ಪುಸ್ತಕದಲ್ಲಿರುವ ಕಥೆ ಅಥವಾ ವಿಷಯವನ್ನು ಅರಿಯುವ ಪ್ರಯತ್ನ ಮಾತ್ರ ಮಾಡಬೇಡಿ. ಬರೀ ಅಕ್ಷರಗಳನ್ನು ಓದುತ್ತಾ ಹೋಗಿರಿ. ಆಗ ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುತ್ತದೆ.
ಇಷ್ಟದ ಮ್ಯೂಸಿಕ್ ಕೇಳಿರಿ:
ಇಷ್ಟದ ಮ್ಯೂಸಿಕ್ ಕೇಳಿರಿ: ಸಂಗೀತ ಕೇಳುವುದು ಎಷ್ಟು ರಿಲ್ಯಾಕ್ಸಿಂಗ್ ಎಂಬುದು ಅದನ್ನು ಕೇಳಿದವರಿಗೇ ಗೊತ್ತು. ಹೆಚ್ಚು ಅಬ್ಬರವಿಲ್ಲದ ಸರಳ ಸಂಗೀತದಿಂದ ನಿದ್ರೆ ಬೇಗ ಬರುತ್ತದೆ.
ತಂಗಾಳಿಯಲ್ಲಿ ವಾಕಿಂಗ್ ಮಾಡಿ:
ತಂಗಾಳಿಯಲ್ಲಿ ವಾಕಿಂಗ್ ಮಾಡಿ: ತಾಜಾ ಗಾಳಿಯಲ್ಲಿ ವಾಕಿಂಗ್ ಮಾಡುವುದರಿಮದ ಮನಸ್ಸು ತಿಳಿಗೊಂಡು ಸುಲಭವಾದ ಅನುಕೂಲಕರವಾದ ನಿದ್ರೆ ಬರುತ್ತದೆ.
ವಿಪರೀತ ಕಾಫಿ, ಟೀ ಬೇಡ: ವಿಪರೀತ ಕಾಫಿ, ಟೀ ಸೇವನೆ, ಆಲ್ಕೋಹಾಲ್‌ಗೆ ಗುಡ್‌ ಬೈ ಹೇಳಿದರೆ ಒಳಿತು.
ಬಹುಬೇಗ ಊಟ ಮಾಡಿ ಹಾಗೂ ನಿದ್ದೆಗೆ ಜಾರಿ:
ಬಹುಬೇಗ ಊಟ ಮಾಡಿ ಹಾಗೂ ನಿದ್ದೆಗೆ ಜಾರಿ: ಪ್ರತಿದಿನ ರಾತ್ರಿ 8 ಗಂಟೆಯ ಒಳಗೆ ರಾತ್ರಿ ಊಟವನ್ನು ಮಾಡಿ. ರಾತ್ರಿ 10 ರಿಂದ 10:30 ಒಳಗೆ ನಿದ್ರೆ ಮಾಡುವುದನ್ನು ಮೈಗೂಡಿಸಿಕೊಳ್ಳಿ. ಈ ರೀತಿ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Above Slumber party ideas will help you throw the best sleepover ever. And best sleep will help you to maintain good health.

You may also like