Tips To Protest Twitter Account From Hackers in Kannada
ಇಂದು ನಾವು ನಮ್ಮನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡಿರುತ್ತೇವೆ. ಹಾಗಾಗೀ ಇಂದು ತಮ್ಮನ್ನ ತಾವು ಗುರುತಿಸಿಕೊಳ್ಳವುದಕ್ಕೆ ಈ ಜಾಲತಾಣಗಳು ತುಂಬ ಸಹಾಯ ಮಾಡುತ್ತವೆ ಹಾಗೇ ನಾವು ಸ್ವಲ್ಪ ಯಾಮಾರಿದರೆ ಅದು ಬೇರೆ ಸ್ವರೂಪವನ್ನೆ ಪಡೆದುಕೊಂಡುಬಿಡುತ್ತೆ. ಇಂದು ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡುವುದೇ ಒಂದು ಹೆಗ್ಗಳಿಕೆಯ ಮತ್ತು ಹವ್ಯಾಸವಾಗಿಬಿಟ್ಟಿದೆ. ಇಂದಿನ ಯುವ ಸಮುದಾಯವು ಟ್ವಿಟ್ಟರ್ ಅನ್ನು ಬಳಸುತ್ತ ನಮ್ಮ ಮನಸ್ಸಿನಲ್ಲಿರುವ ನೋವನ್ನು, ಸಂದೇಶವನ್ನು ಹೀಗೆ ಅನಿಸಿದ್ದನ್ನು ಪ್ರಕಟಿಸುತ್ತಾರೆ. ಆದರೆ ಅದು ಬೇರೆಯವರ ಕೈ ಸೇರಿ ಅದು ದುರ್ಬಳಕೆ ಆದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯುವುದು ಬೇಡ.
ಟ್ವಿಟ್ಟರ್ ಖಾತೆಯನ್ನು ಬಹಳ ಗಣ್ಯವ್ಯಕ್ತಿಗಳು ಬಳಸುತ್ತಿದ್ದಾರೆ. ಅವರ ಚಲವಲನಗಳನ್ನು, ಹಾಗು-ಹೋಗುಗಳನ್ನು ಅಪ್ಡೇಟ್ ಮಾಡುತ್ತಿರುತ್ತಾರೆ. ಇಂತಹವರ ಖಾತೆಗಳನ್ನು ಹ್ಯಾಕ್ ಮಾಡಿ ಇಲ್ಲಸಲ್ಲದ ಟೀಕೆ ಟಿಪ್ಪಣಿಗಳನ್ನು ಹಾಕಿದರೆ ಅವರ ಒಳ್ಳೆಯ ವ್ಯಕ್ತಿತ್ವಕ್ಕೆ ಮಸಿ ಬಳಿದಂತೆ ಆಗುತ್ತದೆ. ಹಾಗಾಗೀ ಈ ಟ್ವಿಟ್ಟರ್ ಖಾತೆಯನ್ನು ಹೊಂದಿರುವವರು ಈ ಲೇಖನವನ್ನು ಒಂದು ಬಾರಿ ಓದಿ ಹೇಗೆ ನಿಮ್ಮ ಟ್ವಿಟ್ಟರ್ ಖಾತೆಯನ್ನು ಹ್ಯಾಕರ್ಗಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕೆಂದು ತಿಳಿಯುತ್ತದೆ.
– ಎರಡು ರೀತಿಯ ಅಥೆಂಟಿಕೇಷನ್(ದೃಡೀಕರಣಗೊಳಿಸಿ) :- ನಿಮ್ಮ ಟ್ವಿಟ್ಟರ್ ಖಾತೆಗೆ ಎರಡು ರೀತಿಯ ಪಾಸ್ವರ್ಡ್ ಪ್ರೊಟೆಕ್ಷನ್ ಅನ್ನು ನೀಡಿ. ಇದು ಹ್ಯಾಕರ್ಗಳಿಗೆ ಸ್ವಲ್ಪ ಕಷ್ಟವಾಗಬಹುದು.
– ನಿಮ್ಮ ಟ್ವಿಟ್ಟರ್ ಖಾತೆಗೆ ತುಂಬ ಸ್ಟ್ರಾಂಗ್ ಆದ ಪಾಸ್ವರ್ಡ್ ಸೆಟ್ ಮಾಡಿ.
ಅನ್ ಫಾಲೋ ಮಾಡಿ ಅಥವಾ ಬ್ಲಾಕ್ ಮಾಡಿ :- ನಿಮಗೆ ಟ್ವಿಟ್ಟರ್ನಲ್ಲಿ ಸಮಸ್ಯೆ ಒಡ್ಡುವ ಖಾತೆಗಳನ್ನು ಅನ್ ಫಾಲೋ ಮಾಡಿ, ಇನ್ನು ತುಂಬ ತೊಂದರೆ ಆಗುತ್ತಿದ್ದರೆ ಬ್ಲಾಕ್ ಮಾಡಿ.
ಅಡ್ವಾನ್ಸ್ ಬ್ಲಾಕ್ :- ಇದು ನಿಮಗೆ ಇನ್ನು ಹೆಚ್ಚಿನದಾಗಿ ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಸೆಟ್ಟಿಂಗ್ಸ್ ಹೊರಗೆ ಬ್ಲಾಕ್ಡ್ ಅಕೌಂಟ್ಸ್ ಬಗ್ಗೆ ತಿಳಿಯುತ್ತದೆ.
ನೇರ ಸಂದೇಶವನ್ನು ಡಿಸೇಬಲ್ ಮಾಡಿ :- ನೀವು ಸೆಟ್ಟಿಂಗ್ಸ್ನಲ್ಲಿ ಹೋಗಿ ನಿಮಗೆ ತೊಂದರೆ ಕೊಡುವ ಅಕೌಂಟ್ ಖಾತೆಯಿಂದ ನೇರ ಸಂದೇಶವನ್ನು ರದ್ದು ಮಾಡಿ.
ನಿಮ್ಮ ಸ್ವಂತ ಅಕೌಂಟ್ ಬಳಸಿ:- ನಿಮ್ಮ ಸ್ವಂತ ಟ್ವಿಟ್ಟರ್ ಅಕೌಂಟ್ನಿಂದ ನಿಮ್ಮ ಅನುಮತಿ ಇಲ್ಲದೆ ಯಾರನ್ನು ಫಾಲೋ ಮಾಡೋಕೆ ಆಗಲ್ಲ. ಆದ್ದರಿಂದ ಸ್ವಂತ ಅಕೌಂಟ್ ಬಳಸುವುದರಿಂದ ನೀವು ಹ್ಯಾಕಿಂಗ್ ಅನ್ನು ತಡೆಯಬಹುದು.
ಎಸ್ಎಂಎಸ್ ಆಧಾರಿತ ಅಪ್ಲಿಕೇಶನ್ ಕೋಡ್ ಅನ್ನು ಸೆಟ್ ಮಾಡಿ ಇದರಿಂದ ನಿಮ್ಮ ಟ್ವಿಟ್ಟರ್ ಅಕೌಂಟ್ ಸೇಫ್ ಆಗುತ್ತೆ.
– ಇಮೇಲ್ನಿಂದ ಪ್ರೊಟೆಕ್ಟ್ ಮಾಡಿ. ಇದರಿಂದ ನಿಮ್ಮ ಬಳಿ ಇರುವ ಟ್ವಿಟ್ಟರ್ ಖಾತೆಯ ಸೆಟ್ಟಿಂಗ್ಸ್ನಲ್ಲಿ ಕಸ್ಟಮ್ ಡೊಮೈನ್ನಲ್ಲಿ 2ಎಫ್ಎ ಅನ್ನು ಎನಬಲ್ ಮಾಡಿ.
– ಮೂರನೇ ವ್ಯಕ್ತಿಯು ನಿಮ್ಮ ಟ್ವಿಟ್ಟರ್ ಖಾತೆಯನ್ನು ಬಳಸುತ್ತಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಿ, ಅದು ಅಕೌಂಟ್ ಸೆಟ್ಟಿಂಗ್ಸ್ನಲ್ಲಿ ಹೋಗಿ ಅಪ್ಲಿಕೇಶನ್(App) ಅಂಡ್ ಡಿವೈಸಸ್ ಕ್ಲಿಕ್ ಮಾಡಿದ್ರೆ ಅಲ್ಲಿ ನಿಮಗೆ ‘ರಿವೋಕ್ ಆಕ್ಸೆಸ್’ ಬಟನ್ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ತಿಳಿಯುತ್ತದೆ. ಇದರಿಂದ ಮೂರನೇ ವ್ಯಕ್ತಿ ಉಪಯೋಗಿಸದಂತೆ ಮಾಡಬಹುದು.
– ಟ್ವಿಟ್ಟರ್ನಿಂದ ಬರುವ ಇಮೇಲ್ ನೋಟಿಫಿಕೇಷನ್ಸ್ಗಳನ್ನು ಆಫ್ ಮಾಡಿ
ಈ ರೀತಿಯಾಗಿ ಟ್ವಿಟ್ಟರ್ನಿಂದ ಸ್ವಲ್ಪ ಮಟ್ಟಿಗೆ ಹ್ಯಾಕಿಂಗ್ ಅನ್ನು ತಡೆಯಬಹುದು, ಆದರೆ ನಿಮ್ಮ ಕೈಯಲ್ಲಿ ಇದೆಲ್ಲ ಸಾಧ್ಯವಾದರೂ ಹ್ಯಾಕ್ ಆಗಿದೆ ಎಂದು ದೃಡಪಟ್ಟರೆ, ನಿಮ್ಮ ಅಕೌಂಟ್ ಹೇಗೆ ಹ್ಯಾಕ್ ಆಗಿದೆ, ಮತ್ತು ಅದಕ್ಕೆ ಸೂಕ್ತವಾದ ಸಲಹೆಗಳನ್ನು ಸೈಬರ್ಕ್ರೈಮ್ ಅವರು ನೀಡುತ್ತಾರೆ. ಮತ್ತು ನಿಮ್ಮ ಅಕೌಂಟ್ ಹ್ಯಾಕ್ ಆಗಿದಿಯೇ ಎಂದು ತಿಳಿಯಲು ಯೂಟ್ಯೂಬ್ನಲ್ಲಿ ಕೆಲವು ಟೆಕ್ನಿಕಲ್ ವಿಡಿಯೋಗಳನ್ನು ನೋಡಿ ಅದರಿಂದ ನಿಮಗೆ ಸ್ವಲ್ಪ ಮಟ್ಟಿಗಾದ್ರು ಸಲಹೆ ಸೂಚನೆಗಳು ಸಿಗುತ್ತೆ ಮತ್ತು ತುಂಬ ಗಂಭೀರ ಸ್ವರೂಪವನ್ನ ಹೊಂದಿದ್ರೆ ದಯವಿಟ್ಟು ಸೈಬರ್ಕ್ರೈಮ್ ಪೊಲೀಸ್ ಅನ್ನು ಬೇಟಿಯಾಗಿ.
ಜಿಯೋ ಇ-ಸಿಮ್ ಬಗ್ಗೆ ನಿಮಗೆಷ್ಟು ಗೊತ್ತು? ಇದನ್ನು ಪಡೆಯುವುದು, ಬಳಸುವುದು ಹೇಗೆ?