ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ.. ಇದಕ್ಕಾಗಿ ತುಂಬಾ ಡಯಟ್ ಮಾಡುತ್ತಿದ್ದೀರಾ.. ಬೆಲ್ಲಿ ಫ್ಯಾಟ್ ಕರಗಿಸಲು ಸಾಕಷ್ಟು ವ್ಯಾಯಾಮ ಮಾಡುತ್ತಿದ್ದೀರಾ..? ಇದಕ್ಕಾಗಿ ಕೇವಲ ಆಹಾರದ ಮೇಲೆ ಗಮನಹರಿಸುತ್ತಿದ್ದೀರಾ..? ಆದ್ರೆ ತೂಕ ಕಳೆದುಕೊಳ್ಳುವಾ ನಿಮ್ಮ ಗುರಿ ಸಾಧಿಸಲು ಇಷ್ಟು ಸಾಕಾಗುವುದಿಲ್ಲ.(weight loss 5 best drinks and to cut belly fat)
ಹೌದು. ತೂಕ ಕಳೆದುಕೊಳ್ಳಲು ಡಯಟ್, ವ್ಯಾಯಾಮ ಮಾತ್ರವಲ್ಲದೇ ದೇಹವು ಹೆಚ್ಚು ನೀರಿನಂಶವನ್ನು ಹಿಡಿದಿಟ್ಟುಕೊಂಡಿರಬೇಕು. ಅದಕ್ಕೆ ಹಲವು ರೀತಿಯ ಪಾನೀಯಗಳನ್ನು ಕುಡಿಯುವುದು ಅಗತ್ಯ.
ಹಲವು ರೀತಿಯ ಡ್ರಿಂಕ್ಸ್ಗಳು(ಪಾನೀಯಗಳು) ದೇಹದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳವು ಗುಣಗಳನ್ನು ಹೊಂದಿವೆ. ಅಲ್ಲದೇ ಹಲವು ಪಾನೀಯಗಳು ತೂಕವನ್ನು ಕಡಿಮೆ ಮಾಡುವ ಮತ್ತು ದೇಹದ ಕೊಬ್ಬನ್ನು ಕರಗಿಸಲು ಸಹಾಯಕವಾಗಿವೆ. ಅಂತಹ ಟಾಪ್ 5 ಡ್ರಿಂಕ್ಸ್ಗಳನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ತೂಕ ಕಡಿಮೆ ಮಾಡುವ ಮತ್ತು ಬೆಲ್ಲಿ ಫ್ಯಾಟ್ ಕರಗಿಸುವ ಟಾಪ್ 5 ಪಾನೀಯಗಳು ಈ ಕೆಳಗಿನಂತಿವೆ…
1 ಗ್ರೀನ್ ಟೀ (Green Tea)
ತೂಕ ಕಡಿಮೆ ಮಾಡಿಕೊಳ್ಳಲು ಆಯ್ಕೆ ಮಾಡುವ ಪಾನೀಯಗಳಲ್ಲಿ ಗ್ರೀನ್ ಟೀ ಗೆ ಮೊದಲ ಸ್ಥಾನವಿದೆ. ದಿನ ಒಂದಕ್ಕೆ ಗ್ರೀನ್ ಟೀ ಸೇವಿಸುವವರು ಸುಮಾರು 70 ಕ್ಯಾಲೋರಿಯಷ್ಟು ಕೊಬ್ಬನ್ನು ಕರಗಿಸಬಹುದು.
2 ಕ್ಯಾರೋಟ್ ಜ್ಯೂಸ್ (Carrot Juice)
ಕ್ಯಾರೋಟ್ ಜ್ಯೂಸ್ ಡಯಟ್ ನಲ್ಲಿ ಸೇವಿಸಬಹುದಾದ ಮತ್ತೊಂದು ಪಾನೀಯ. ಇದನ್ನು ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸುತ್ತಾರೆ. ಇದು ಕೇವಲ ತೂಕ ಕರಗಿಸಲು ಮಾತ್ರವಲ್ಲದೇ ದೇಹಕ್ಕೆ ವಿಟಮಿನ್ಸ್ ಮತ್ತು ಮಿನೆರಲ್ಸ್ಗಳನ್ನು ನೀಡುತ್ತದೆ. ದೇಹವು ಹೈಡ್ರೇಟ್ ಆಗಿರಲು, ಮತ್ತು ಉತ್ತಮ ಜೀರ್ಣಕ್ರಿಯೆಗೆ ಕ್ಯಾರೋಟ್ ಜ್ಯೂಸ್ ಅತ್ತುತ್ತಮವಾದುದು. ಇದನ್ನು ಬ್ರೇಕ್ ಫಾಸ್ಟ್ ಮತ್ತು ಊಟದ ಮುಂಚೆಯೂ ಸೇವಿಸಬಹುದು. ಈ ಜ್ಯೂಸ್ ಸೇವಿಸುವುದರಿಂದ ಹೊಟ್ಟೆ ಉಬ್ಬಸವನ್ನು ನಿವಾರಿಸಬಹುದು.
3 ಬ್ಲಾಕ್ ಕಾಫಿ (Black Coffee)
ಸಂಶೋಧಕರು ಸಹ ಬ್ಲಾಕ್ ಕಾಫಿಯನ್ನು ದೇಹದ ತೂಕ ಕಡಿಮೆ ಮಾಡಲು ಸೇವಿಸಬಹುದಾದ ಉತ್ತಮ ಡ್ರಿಂಕ್ಸ್ ಎಂದಿದ್ದಾರೆ. ಡಯಟ್ ಪ್ರಿಯರ ನೆಚ್ಚಿನ ಡ್ರಿಂಕ್ಸ್ ಸಹ. ಇಷ್ಟೇ ಅಲ್ಲದೇ ಇದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು, ದೇಹದಲ್ಲಿ ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆಯ ಸುಗಮವಾಗಿ ನೆರವೇರಲು ಸಹಾಯಕವಾಗಿದೆ. ಮತ್ತು ದೇಹದ ಚರ್ಮದ ಕಾಂತಿಯನ್ನು ಹೆಚ್ಚಿಸಿ ಸುರಕ್ಷಿತವಾಗಿರಿಸುತ್ತದೆ.
4 ಸೇಬಿನ ಜ್ಯೂಸ್ (Apple cider vinegar drinks)
Apple cider vinegar ಡ್ರಿಂಕ್ಸ್ ಹಲವು ರೀತಿಯ ಆರೋಗ್ಯ ಅನುಕೂಲಗಳನ್ನು ಹೊಂದಿದೆ. ಇದನ್ನು ಮೊಡವೆಯ ನಿವಾರಕವಾಗಿ, ತಲೆಕೂದಲು ಉದುರುವುದನ್ನು ತಡೆಗಟ್ಟಲು ಮತ್ತು ಹಾಗೆಯೇ ಚಯಾಪಚಯ ಕ್ರಿಯೆಯ ಮೂಲಕ ದೇಹದ ತೂಕ ಕಡಿಮೆ ಮಾಡಲು ಇದು ಸಹಾಯಕಾರಿ. ಹಸಿವನ್ನು ನಿವಾರಿಸಿ ಕೊಬ್ಬನ್ನು ಕರಗಿಸುತ್ತದೆ.
5 ನೀರು (Water)
ದೇಹದ ತೂಕ ಕಡಿಮೆಗಾಗಿ ಮತ್ತು ಬೆಲ್ಲಿ ಫ್ಯಾಟ್ ಕರಗಿಸಲು ನೀವು ಯಾವ ಪಾನೀಯಗಳನ್ನು ಮತ್ತು ಡಯಟ್ ಅನ್ನು ಫಾಲೋ ಮಾಡುತ್ತೀರೋ ಬಿಡುತ್ತೀರೋ ಆದರೆ ನೀರನ್ನು ಮಾತ್ರ ಕುಡಿಯಲು ಮರೆಯದಿರಿ. ಎಷ್ಟೋ ಜನ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ ಮುಖ್ಯವಾಗಿ ತಮ್ಮ ದೇಹಕ್ಕೆ ಸಾಕಷ್ಟು ನೀರನ್ನು ಸೇವಿಸುವುದನ್ನೇ ಮರೆತಿರುತ್ತಾರೆ. ನೀರಿನಲ್ಲಿ ಹೆಚ್ಚು ಖನಿಜಾಂಶಗಳು ಇದ್ದು, ಆಹಾರಕ್ಕಿಂತ ಹೆಚ್ಚಾಗಿ ದೇಹದಲ್ಲಿ ಬಹುಬೇಗ ಹೀರಿಕೊಳ್ಳಲ್ಪಡುತ್ತವೆ.
ಸೂಚನೆ: ಈ ಆರೋಗ್ಯ ಸಲಹೆಯು ಕೇವಲ ಜೆನೆರಲ್ ಆಗಿದ್ದು, ವೃತ್ತಿಪರ ವೈದ್ಯಕೀಯ ಸಲಹೆ ಆಗಿರುವುದಿಲ್ಲ. ದೇಹದ ಫಿಟ್ನೆಟ್ ಆರಂಭಿಸುವ ಮೊದಲು ಯಾವಾಗಲು ಒಮ್ಮೆ ಡಾಕ್ಟರ್ ಬಳಿ ಸಲಹೆ ಪಡೆಯಿರಿ.
If you are trying to lose weight, exercise and diet are extremely important. also these five top drinks help you cut belly fat and weight.