ಈ ಬಾರಿಯಿಂದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(NTA) ನಡೆಸಲಿರುವ ಕಂಪ್ಯೂಟರ್ ಆಧಾರಿತ UGC NET ಪರೀಕ್ಷೆಯ ನಿರ್ಧಿಷ್ಟ ದಿನಾಂಕ ಹೊರಬಿದ್ದಿದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(NTA) ತನ್ನ ಅಧಿಕೃತ ವೆಬ್ಸೈಟ್(www.nta.ac.in) ನಲ್ಲಿಯುಜಿಸಿ ಎನ್ಇಟಿ ಪರೀಕ್ಷೆ ದಿನಾಂಕ ಪ್ರಕಟಿಸಿದ್ದು 2018 ಡಿಸೆಂಬರ್ 18 ರಿಂದ 22 ರ ವರೆಗೆ 5 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ.
UGC NET ಪರೀಕ್ಷೆ 5 ದಿನಗಳಲ್ಲಿಯೂ ಮೊದಲ ಶಿಫ್ಟ್ 9-30 am ರಿಂದ 1-00 pm ವರೆಗೆ ಹಾಗೂ ಎರಡನೇ ಶಿಫ್ಟ್ 2-30pm ನಿಂದ 6-00pm ವರೆಗೆ ನಡೆಯಲಿದೆ.
UGC NET ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(NTA)ದ ಅಧಿಕೃತ ವೆಬ್ಸೈಟ್ www.nta.ac.in ಭೇಟಿ ನೀಡಿ ದಿನಾಂಕ 19-11-2018 ರಿಂದ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
The NTA will conduct the UGC-NET for ‘Assitant Professor’ and ‘Junior Research Fellowship’ between 18th to 22nd december 2018.