ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಮಲ್ಟಿ-ಕ್ಯಾಮೆರಾ ಸೆಟಪ್ಗಳು, ಪವರ್ಫುಲ್ ಪ್ರೊಸೆಸರ್ಗಳು, ಅನೇಕ ರೀತಿಯ ಸಾಮರ್ಥ್ಯಗಳಿರುವ ಮೊಬೈಲ್ ಫೋನ್ನನ್ನು ಪಡೆಯುವಲ್ಲಿ ಈ ಹಿಂದೆ ತುಂಬ ಹಣವನ್ನು ವ್ಯಯಮಾಡಬೇಕಿತ್ತು ಆದರೆ ಆವಿಷ್ಕಾರಗಳು ಬೆಳೆದಂತೆ, ಸಾಮಾಜಿಕವಾಗಿ ಮೊಬೈಲ್ ಕ್ಷೇತ್ರವು ಅಭಿವೃದ್ದಿ ಹೊಂದಿದಂತೆ ನಮಗೆ ಕೈ ಗೆಡುಕುವ ಬೆಲೆಯಲ್ಲಿ ನಾವು ಕೇಳುವ ಫೀಚರ್ಸ್ಗಳಿರುವ ಮೊಬೈಲ್ಗಳು ಸಿಗುವಂತಾಗಿದೆ.
ಡಿಸ್ಪ್ಲೇ, ಫಿಂಗರ್ಪ್ರಿಂಟ್ ಸೆನ್ಸಾರ್, ಗೇಮಿಂಗ್ ಪ್ರೊಸೆಸರ್ಗಳು, ಹೆಚ್ಚಿನ ರಿಫ್ರೆಶ್ ರೇಟ್ ಡಿಸ್ಪ್ಲೇಗಳು, ಇಂಟರ್ನಲ್ ಕೂಲಿಂಗ್ ಸಿಸ್ಟಮ್, ಮಲ್ಟಿ-ಕ್ಯಾಮೆರಾ ಸೆಟಪ್, ಗ್ಲಾಸ್ ಆಧಾರಿತ ವಿನ್ಯಾಸಗಳು ಮತ್ತು ಹೆಚ್ಚಿನದನ್ನು ನೀಡುತ್ತದೆ. ಹಾಗಾಗೀ ನಾವು ಇಂದು 15 ಸಾವಿರ ವೆಚ್ಚ ಮಾಡಿ ನಮಗೆ ಬೇಕಾಗಿರುವ ಎಲ್ಲಾ ರೀತಿಯ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಅವುಗಳ ಬಗ್ಗೆ ನಾವು ನೋಡುವುದಾದರೇ..
ಹೊಸದಾಗಿ ಫೋನ್ ಖರೀದಿಸುವ ಬಳಕೆದಾರರು ಬಜೆಟ್ ದರದಲ್ಲಿ ಅತ್ಯುತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್, ಬಿಗ್ ಬ್ಯಾಟರಿ, ಆಕರ್ಷಕ ಡಿಸೈನ್ ಇರುವ ಸ್ಮಾರ್ಟ್ಫೋನ್ಗಳತ್ತ ಗಮನ ನೀಡುತ್ತಾರೆ. ಹೀಗೆ ಸುಮಾರು 15,000ರೂ. ಪ್ರೈಸ್ಟ್ಯಾಗ್ನಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಸ್ಮಾರ್ಟ್ಫೋನ್ಗಳನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.
ಪೊಕೊ ಎಂ2 ಪ್ರೊ :-
ಇದರ ಡಿಸ್ಪ್ಲೇ 6.67-ಇಂಚಿನ ಎಫ್ಹೆಚ್ಡಿ+ (2400) ಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದ್ದು. ಇದರಲ್ಲಿರುವ ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720ಜಿ ಹಾಗೂ ಕ್ಯಾಮೆರಾಕ್ಕೆ ಬಂದರೇ 48 ಎಂಪಿ + 8 ಎಂಪಿ + 5 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಬ್ಯಾಟರಿ ವಿಷಯಕ್ಕೆ ಬಂದರೇ 33 ವ್ಯಾಟ್ಸ್ ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 5000ಎಂಎಹೆಚ್ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ: ರೂ 13,999 (4 ಜಿಬಿ + 64 ಜಿಬಿ), ರೂ 14,999 (6ಜಿಬಿ + 64ಜಿಬಿ), ರೂ 17,999 (8ಜಿಬಿ + 128ಜಿಬಿ) ಇವುಗಳಲ್ಲಿ ಲಭ್ಯವಿದೆ.
ಶಿಯೋಮಿ ರೆಡ್ಮಿ ನೋಟ್ 9 ಪ್ರೊ :-
ಇದು 6.6-ಇಂಚಿನ ಎಫ್ಹೆಚ್ಡಿ+ (2400) ಡಿಸ್ಪ್ಲೇ ಹೊಂದಿದೆ. ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720ಜಿ ಪ್ರೊಸೆಸರ್ ಅನ್ನು ಹೊಂದಿದೆ. ಇನ್ನು ಕ್ಯಾಮೆರಾ ವಿಚಾರದಲ್ಲಿ – 48 ಎಂಪಿ + 8 ಎಂಪಿ + 5 ಎಂಪಿ, ಮ್ಯಾಕ್ರೋ ಕ್ಯಾಮೆರಾ + 2 ಎಂಪಿ ಡೆಪ್ತ್ ಸೆನ್ಸಾರ್ ಬ್ಯಾಟರಿ- 18ವ್ಯಾಟ್ಸ್ ವೇಗದ ಚಾಜಿರ್ಂಗ್ ಬೆಂಬಲದೊಂದಿಗೆ 5020ಎಂಎಹೆಚ್ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ- ರೂ 13,999 (4ಜಿಬಿ + 64ಜಿಬಿ), ರೂ 16,999 (6ಜಿಬಿ + 128ಜಿಬಿ)
ರಿಯಲ್ ಮಿ 6 :-
ಇದರ ಡಿಸ್ಪ್ಲೇ- 6.5-ಇಂಚಿನ ಎಫ್ಹೆಚ್ಡಿ+ (2400*1080*) 90ಹಟ್ರ್ಸ್ ರಿಫ್ರೆಶ್ ಡಿಸ್ಪ್ಲೇಯನ್ನು ಹೊಂದಿದೆ. ಪ್ರೊಸೆಸರ್ರಲ್ಲಿ ಮೀಡಿಯಾ ಟೆಕ್ ಹೆಲಿಯೊ ಜಿ90ಟಿ ಯನ್ನು ಹೊಂದಿದ್ದು, ಬ್ಯಾಟರಿ ವಿಷಯದಲ್ಲಿ 30ವ್ಯಾಟ್ಸ್ ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 4300ಎಂಎಹೆಚ್ ಬ್ಯಾಟರಿ ಕ್ಯಾಪಸಿಟಿಯನ್ನು ಹೊಂದಿದೆ. ಇದರ ಬೆಲೆ- ರೂ 14,999 (4 ಜಿಬಿ + 64 ಜಿಬಿ), ರೂ 16,999 (6 ಜಿಬಿ + 128 ಜಿಬಿ), 17,999 ರೂ (8 ಜಿಬಿ + 128 ಜಿಬಿ)
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ21 :-
6.4-ಇಂಚಿನ ಎಫ್ಹೆಚ್ಡಿ+ (2340 *1080*) ಸೂಪರ್ ಅಮೋಲ್ಡ್ ಪ್ರದರ್ಶನದ ಡಿಸ್ಪ್ಲೇಯನ್ನು ಹೊಂದಿದೆ. ಸ್ಯಾಮ್ಸಂಗ್ ಎಕ್ಸಿನೋಸ್ 9611 ಎಸ್ಒಸಿ ಪ್ರೊಸೆಸರ್ರನ್ನು ಹೊಂದಿದೆ. ಇನ್ನು ಕ್ಯಾಮೆರಾ ವಿಚಾರದಲ್ಲಿ 48 ಎಂಪಿ + 8 ಎಂಪಿ + 5 ಎಂಪಿ + 2 ಎಂಪಿಯನ್ನು ಹೊಂದಿದೆ. ಇನ್ನು ಬ್ಯಾಟರಿಯು 15ವ್ಯಾಟ್ಸ್ ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 6000 ಎಂಎಹೆಚ್ ಬ್ಯಾಟರಿಯನ್ನು ಮೈಗೂಡಿಸಿಕೊಂಡಿದೆ. ಇದರ ಬೆಲೆ ರೂ 13,999 (4 ಜಿಬಿ + 64 ಜಿಬಿ), ರೂ 15,999 (6 ಜಿಬಿ + 128 ಜಿಬಿ).
ಭಾರತದಲ್ಲಿ ವಾಟ್ಸಾಫ್ ಬದಲಿಗೆ ಟ್ರೆಂಡ್ ಆಗಿದೆ ಸರ್ಕಾರದ ಸಂದೇಶ್ ಅಪ್ಲಿಕೇಶನ್: ಡೌನ್ಲೋಡ್ ಲಿಂಕ್ ಇಲ್ಲಿದೆ..