Home » IES ಮತ್ತು ISS ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

IES ಮತ್ತು ISS ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

by manager manager

ಕೇಂದ್ರ ಲೋಕಸೇವಾ ಆಯೋಗವು(UPSC) ಗ್ರೂಪ್ ಎ ಹುದ್ದೆಗಳಾದ ಭಾರತೀಯ ಅರ್ಥಶಾಸ್ತ್ರ ಸೇವೆ ಮತ್ತು ಭಾರತೀಯ ಸಂಖ್ಯಾಶಾಸ್ತ್ರ ಸೇವೆ ಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಓದಿ ತಿಳಿಯಿರಿ.

ಹುದ್ದೆಗಳ ವಿವರ

ಹುದ್ದೆಯ ಹೆಸರು : ಇಂಡಿಯನ್ ಇಕನಾಮಿಕ್ ಸರ್ವೀಸ್

ಹುದ್ದೆಗಳ ಸಂಖ್ಯೆ : 32

ವಿದ್ಯಾರ್ಹತೆ : ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅರ್ಥಶಾಸ್ತ್ರ, ಅಪ್ಲೈಡ್ ಇಕನಾಮಿಕ್ಸ್, ಬ್ಯುಸಿನೆಸ್ ಇಕನಾಮಿಕ್ಸ್ ವಿಷಯಗಳಲ್ಲಿ ಸ್ತನಾತಕೋತ್ತರ ಪದವಿ ಪಡೆದಿರಬೇಕು.

ಹುದ್ದೆಯ ಹೆಸರು : ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವೀಸ್

ಹುದ್ದೆಗಳ ಸಂಖ್ಯೆ : 33

ವಿದ್ಯಾರ್ಹತೆ : ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸ್ಟ್ಯಾಟಿಸ್ಟಿಕ್ಸ್, ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್, ಅಪ್ಲೈಡ್ ಸ್ಟ್ಯಾಟಸ್ಟಿಕ್ಸ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನ : 16/04/2019

ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ : 16/04/2019

ಪರೀಕ್ಷೆ ನಡೆಯುವ ದಿನಾಂಕ : 28/06/2019

IES ಮತ್ತು ISS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ

ವಯೋಮಿತಿ

– ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ 2019 ಜನವರಿ 1 ಕ್ಕೆ ನಿಗದಿಪಡಿಸಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ರಿಂದ 30 ವರ್ಷದೊಳಗಿರಬೇಕು.

– ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

– ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ

– ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

– ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

– upsc ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ ಎಷ್ಟು?

– ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200

– ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕ ಪಾವತಿ ವಿಧಾನ

– ಅರ್ಜಿ ಸಲ್ಲಿಸಿದ ನಂತರ ಚಲನ್ ಪ್ರಿಂಟ್ ತೆಗೆದುಕೊಂಡು ದೇಶದ ಯಾವುದೇ SBI ಬ್ಯಾಂಕ್‌ ನಲ್ಲಿ ಅಥವಾ SBI ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ವೀಸಾ, ಮಾಸ್ಟರ್ ಕಾರ್ಡ್, ಮ್ಯಾಸ್ಟೋ, ರುಪೇ ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬಹುದು.

ನೇಮಕಾತಿ ವಿಧಾನ

– ಲಿಖಿತ ಪರೀಕ್ಷೆ ನಂತರ ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆ ನಡೆಯುವ ಸ್ಥಳಗಳು

ಬೆಂಗಳೂರು, ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಕಟಕ್, ದೆಹಲಿ, ಹೈದರಾಬಾದ್, ದಿಸ್ಪುರ್, ಜೈಪುರ್, ಜಮ್ಮು, ಕೋಲ್ಕತ್ತ, ಲಖನೌ, ಮುಂಬೈ, ಪಟನಾ, ಪ್ರಯಾಗ್‌ರಾಜ್, ಶಿಲ್ಲಾಂಗ್, ಶಿಮ್ಲಾ ಮತ್ತು ತಿರುವನಂತಪುರ.

IES ಮತ್ತು ISS ಹುದ್ದೆಗಳ ನೇಮಕಾತಿ ಅಧಿಸೂಚನೆಯ ಪಿಡಿಎಫ್‌ ಗಾಗಿ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ – ಕ್ಲಿಕ್ ಮಾಡಿ

You may also like