ರಕ್ತನಾಳಗಳು ನಮ್ಮ ದೇಹದ ಪ್ರತಿಯೊಂದು ಅಂಗಾಂಗಳಿಗೆ ರಕ್ತ ಸರಬರಾಜಿನ ಕೆಲಸ ಮಾಡುತ್ತದೆ. ಆದರೆ ಕೆಲವೊಂದು ಸಲ ರಕ್ತನಾಳಗಳು ಉಬ್ಬಿಕೊಂಡು, ಗಂಟು ಕಟ್ಟಿಕೊಂಡಿರುವುದು ಕಾಣಿಸುತ್ತದೆ. ಇಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಕಾಲಿನಲ್ಲಿ. ಕೆಲವು ಜನರಲ್ಲಿ ಉಬ್ಬಿರುವ ರಕ್ತನಾಳ (ವೆರಿಕೋಸ್ ವೇನ್ಸ್) ಮತ್ತು ಗಂಟುಕಟ್ಟಿದ್ದ ರಕ್ತನಾಳವು ಕಾಣಿಸುತ್ತದೆ. ಇದನ್ನು ಸಾಮಾನ್ಯವಾಗಿ ಜೇಡರ ರಕ್ತನಾಳವೆಂದು ಕೂಡ ಕರೆಯುತ್ತೇವೆ. ಇಂತಹ ರಕ್ತನಾಳಗಳು ಸೌಂದರ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರುವುದು. ಇನ್ನು ಕೆಲವರಲ್ಲಿ ಉಬ್ಬಿರುವ ರಕ್ತನಾಳಗಳು ನೋವು ಮತ್ತು ಕಿರಿಕಿರಿಯನ್ನುಂಟು ಮಾಡುತ್ತದೆ. ಕೆಲವೊಂದು ಸಂದರ್ಭದಲ್ಲಿ ಉಬ್ಬಿರುವ ರಕ್ತನಾಳಗಳು ತುಂಬಾ ಗಂಭೀರ ಸಮಸ್ಯೆ ಉಂಟು ಮಾಡುವುದು.
ರಕ್ತನಾಳಗಳ ಉಬ್ಬುವಿಕೆಯ ಲಕ್ಷಣಗಳು:-
ಉಬ್ಬಿರುವ ರಕ್ತನಾಳಗಳು ಯಾವುದೇ ನೋವು ಉಂಟು ಮಾಡುವುದಿಲ್ಲ. ಆದರೆ ಉಬ್ಬಿರುವ ರಕ್ತನಾಳದ ಲಕ್ಷಣಗಳು ಈ ಕೆಳಕಂಡಂತೆ ಇವೆ
- ದೀರ್ಘ ಸಮಯ ನಿಂತ ಅಥವಾ ಕುಳಿತುಕೊಂಡ ಬಳಿಕ ನೋವು ಮತ್ತಷ್ಟು ತೀವ್ರವಾಗುವುದು.
- ರಕ್ತನಾಳಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು.
- ರಕ್ತನಾಳದ ಸುತ್ತಲಿನ ಚರ್ಮದ ವರ್ಣ ಕುಂದುವುದು ನೋವಿನ ಅಥವಾ ಬೇರೆ ಲಕ್ಷಣಗಳು ಕಾಣಿಸಿಕೊಳ್ಳುವುದು.
- ಸೆಳೆತ ಅಥವಾ ಕಾಲು ಭಾರವಾಗುವಂತಹ ಭಾವನೆ
- ಉರಿ, ಸಿಡಿತ, ಸ್ನಾಯು ಸೆಳೆತ ಮತ್ತು ಕಾಲುಗಳ ಕೆಳಗಿನ ಭಾಗದಲ್ಲಿ ಊತ ಉಂಟಾಗುವುದು.
- ರಕ್ತನಾಳಗಳು ಕಡುನೇರಳೆ ಅಥವಾ ನೀಲಿ ಬಣ್ಣ ಹೊಂದಿರುವುದು
- ರಕ್ತನಾಳಗಳು ಗಂಟು ಕಟ್ಟಿರಬಹುದು ಅಥವಾ ತಿರುಚಿಕೊಂಡಿರಬಹುದು.
ರಕ್ತನಾಳಗಳ ಉಬ್ಬುವಿಕೆಗೆ ಕಾರಣಗಳು :
• ದುರ್ಬಲ ಅಥವಾ ಹಾನಿಗೀಡಾಗಿರುವ ಕವಾಟಗಳಿಂದಾಗಿ ಉಬ್ಬಿರುವ ರಕ್ತನಾಳದ ಸಮಸ್ಯೆ ಕಾಣಿಸಿಕೊಳ್ಳುವುದು. ಅಪಧಮನಿಗಳು ಹೃದಯದಿಂದ ರಕ್ತವನ್ನು ಬೇರೆ ಅಂಗಾಂಗಗಳಿಗೆ ಪೂರೈಕೆ ಮಾಡುವುದು ಮತ್ತು ರಕ್ತನಾಳಗಳು ದೇಹದ ಬೇರೆ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಪೂರೈಕೆ ಮಾಡುವುದು. ಇದರಿಂದ ರಕ್ತವನ್ನು ಮರುಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದು. ಹೃದಯಕ್ಕೆ ರಕ್ತವನ್ನು ಸಾಗಿಸಲು ಕಾಲಿನಲ್ಲಿ ರಕ್ತನಾಳಗಳು ಗುರುತ್ವಾಕರ್ಷಣೆ ವಿರುದ್ಧ ಕೆಲಸ ಮಾಡಬೇಕಾಗುತ್ತದೆ.
• ಕಾಲುಗಳ ಕೆಳಗಿನ ಭಾಗದಲ್ಲಿರುವಂತಹ ಸ್ನಾಯು ಸಂಕೋಚನವು ಪಂಪ್ ನಂತೆ ಕೆಲಸ ಮಾಡುತ್ತದೆ ಮತ್ತು ಸಂಕೋಚನಗೊಂಡಿರುವ ನಾಡಿಯ ಗೋಡೆಗಳು ರಕ್ತವು ಹೃದಯಕ್ಕೆ ಮರಳಲು ನೆರವಾಗುವುದು. ನಾಡಿಯಲ್ಲಿ ಇರುವಂತಹ ತೆಳುವಾದ ಕವಾಟಗಳು ಹೃದಯಕ್ಕೆ ರಕ್ತ ಪೂರೈಕೆ ಆಗುವ ವೇಳೆ ತೆರೆದುಕೊಳ್ಳುವುದು ಮತ್ತು ರಕ್ತವು ಮರಳಿ ಬರದಂತೆ ಅದು ಮುಚ್ಚಿಕೊಳ್ಳುವುದು. ಈ ಕವಾಟಗಳು ದುರ್ಬಲಗೊಂಡರೆ ಅಥವಾ ಹಾನಿಯಾದರೆ ಆಗ ರಕ್ತವು ಹಿಮ್ಮುಖವಾಗಿ ಹರಿಯುವುದು ಮತ್ತು ನಾಡಿಗಳಲ್ಲಿ ಜಮೆಯಾಗುವುದು. ಇದರಿಂದಾಗಿ ನಾಡಿಗಳು ತಿರುಚುವುದು ಅಥವಾ ಗಂಟು ಕಟ್ಟುವುದು.
• ವಯಸ್ಸು:- ವಯಸ್ಸಾಗುತ್ತಾ ಹೋದಂತೆ ಈ ಅಪಾಯವು ಹೆಚ್ಚಾಗುವುದು. ಯಾಕೆಂದರೆ ನಾಡಿನ ಕವಾಟಗಳಲ್ಲಿ ಹಾನಿಯಾಗುವುದು.
• ಕೆಲವು ಉದ್ಯೋಗ :- ದಿನವಿಡೀ ನಿಂತುಕೊಂಡು ಕೆಲಸ ಮಾಡುವ ಪರಿಣಾಮವಾಗಿ ಉಬ್ಬುವ ರಕ್ತನಾಳದ ಸಮಸ್ಯೆಯು ಕಾಣಿಸಿಕೊಳ್ಳಬಹುದು.
• ಗರ್ಭಧಾರಣೆ :- ಗರ್ಭಧಾರಣೆ ವೇಳೆ ರಕ್ತದ ಪ್ರಮಾಣವು ದೇಹದಲ್ಲಿ ಹೆಚ್ಚಾಗುವುದು, ಇದು ಭ್ರೂಣವು ಬೆಳೆಯಲು ನೆರವು ನೀಡುವುದು. ಆದರೆ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದರಿಂದಾಗಿ ಉಂಟಾಗಬಹುದು, ಅದರಿಂದ ಕಾಲುಗಳಲ್ಲಿ ರಕ್ತನಾಳಗಳು ಉಬ್ಬಬಹುದು.
• ಬೊಜ್ಜು :- ದೇಹದ ತೂಕ ಅತಿಯಾಗಿರುವ ಪರಿಣಾಮವಾಗಿ ರಕ್ತನಾಳಗಳ ಮೇಲೆ ಇದು ಒತ್ತಡ ಹಾಕಬಹುದು.
• ಮಹಿಳೆಯರಲ್ಲಿನ ಹಾರ್ಮೋನ್ ಗಳು ನಾಡಿಗಳಿಗೆ ಆರಾಮ ನೀಡುವುದು ಇದಕ್ಕೆ ಕಾರಣವಾಗಿರಬಹುದು. ಗರ್ಭನಿರೋಧಕ ಮಾತ್ರೆಗಳು ಅಥವಾ ಹಾರ್ಮೋನ್ ಥೆರಪಿಯು ಇದಕ್ಕೆ ಕಾರಣವಾಗಿರಬಹುದು.
• ಅನುವಂಶಿಕತೆ :- ಅನುವಂಶಿಕವಾಗಿ ಸಹ ಉಬ್ಬುವ ರಕ್ತನಾಳಗಳ ಸಮಸ್ಯೆಯನ್ನು ಹೆಚ್ಚು ಕಾಡುವುದು.
ರಕ್ತನಾಳಗಳ ಉಬ್ಬುವಿಕೆ ತಡೆಯುವುದು ಹೇಗೆ ?
- ರಕ್ತನಾಳ ಉಬ್ಬುವ ಸಮಸ್ಯೆ ನಿವಾರಣೆ ಮಾಡಲು ಹೆಚ್ಚು ನಾರಿನಾಂಶ ಮತ್ತು ಕಡಿಮೆ ಉಪ್ಪಿನಾಂಶವಿರುವ ಆಹಾರ ಸೇವಿಸಬೇಕು.
- ದೀರ್ಘಕಾಲ ತನಕ ನಿಲ್ಲುವುದನ್ನು ಬಿಡಿ.
- ಕಾಲುಗಳನ್ನು ಒಂದರ ಮೇಲೆ ಮತ್ತೊಂದನ್ನು ಹಾಕಿ ಕುಳಿತುಕೊಳ್ಳಬೇಡಿ.
- ತಲೆದಿಂಬಿನ ಮೇಲೆ ಕಾಲು ಇಟ್ಟು ಕುಳಿತುಕೊಳ್ಳಿ ಅಥವಾ ಮಲಗಿ.
- ಎತ್ತರ ಹಿಮ್ಮಡಿಯ ಚಪ್ಪಲಿ ಮತ್ತು ಬಿಗಿ ಬಟ್ಟೆ ಧರಿಸಬೇಡಿ.
- ವ್ಯಾಯಾಮ ಮಾಡಿ. ಹೆಚ್ಚು ನಡೆಯಿರಿ.
- ಆರೋಗ್ಯಕರ ತೂಕ ಕಾಪಾಡಿಕೊಳ್ಳಿ.
Flax Seeds: ಅಗಸೆ ಬೀಜಗಳಿಂದಾಗುವ ಪ್ರಯೋಜನಗಳೇನು? ನಮ್ಮ ಆರೋಗ್ಯಕ್ಕೆ ಹೇಗೆ ಫಲಕಾರಿಯಾಗಿದೆ?