ಯಾರಿಗಾದ್ರು ಫೋನ್ ಮಾಡಿದಾಗ ನೆಟ್ವರ್ಕ್ ಸಿಗದೇ ಅಥವಾ ಅವರ ಫೋನ್ ಸ್ವಿಚ್ ಆಫ್ ಆಗಿದ್ದಾಗ ಕೇಳಿ ಬರುವ ಒಂದೇ ಒಂದು ಸಂದೇಶ ಅಂದ್ರೆ ಅದು ವಾಯ್ಸ್ ಮೇಲ್ (voicemail) ಕಳಿಸಲು ಒಂದನ್ನು ಕ್ಲಿಕ್ ಮಾಡಿ ಎಂಬುದು. ಈ ಅನುಭವ ಮೊಬೈಲ್ ಹೊಂದಿರುವ ಪ್ರತಿಯೊಬ್ಬರಿಗೂ ಆಗಿರುತ್ತದೆ.
ಆದರೆ ಭಾರತದಲ್ಲಿ ಆಲ್ ಮೋಸ್ಟ್ ಶೇಕಡ 5 ಜನರು ಸಹ ವಾಯ್ಸ್ ಮೇಲ್(voicemail) ಬಳಕೆ ಮಾಡುವುದಿಲ್ಲ. ಅಲ್ಲದೇ ಮೊಬೈಲ್ ನಲ್ಲಿ ವಾಯ್ಸ್ ಮೇಲ್ ಫೀಚರ್ ಅನ್ನೇ ಯಾರು ಸಹ ಬಳಸುವುದೇ ಇಲ್ಲ. ಇದಕ್ಕೆ ಕಾರಣಗಳಲ್ಲಿ ಇಷ್ಟವಿಲ್ಲದೇ ಇರಬಹುದು ಹಾಗೂ ವಾಯ್ಸ್ಮೇಲ್ ಬಳಕೆ ಹೇಗೆ ಮತ್ತು ಅದರ ಉಪಯೋಗ ತಿಳಿಯದೇ ಇರಬಹುದು. ಆದ್ದರಿಂದ ವಾಯ್ಸ್ ಮೇಲ್ ಬಗ್ಗೆ ಒಂದಷ್ಟು ಉಪಯುಕ್ತ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ.
ಅಂದಹಾಗೆ ಎಲ್ಲಾ ಟೆಲಿಕಾಂಗಳು ಸಹ ವಾಯ್ಸ್ ಮೇಲ್(voicemail) ಸೇವೆಯನ್ನು ಹೊಂದಿದ್ದು ಬಳಕೆ ಮಾಡುವುದು ಅತೀ ಸುಲಭ. ಫೋನ್ ಕರೆ ಬಿಲ್ ಗಿಂತಲೂ ವಾಯ್ಸ್ ಮೇಲ್ ಸೇವೆ ಬಿಲ್ ಕಡಿಮೆ.
ಈ ಲೇಖನದಲ್ಲಿ ವೊಡಾಫೋನ್ ಬಳಕೆದಾರರು ಕೇವಲ ಐದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಾಯ್ಸ್ಮೇಲ್ ಸೇವೆಯನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ.
ದಿನನಿತ್ಯ ಹಲವು ಮುಖ್ಯ ಕರೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನಗೆ ಕರೆ ಮಾಡಿದವರು ಯಾರು ಎಂದು ತಿಳಿಯಲು ಅಥವಾ ನೀವೆ ಇನ್ನೊಬ್ಬರಿಗೆ ಕರೆ ಮಾಡಿದಾಗ ಕರೆ ಕನೆಕ್ಟ್ ಆಗದಿದ್ದಲ್ಲಿ ವಾಯ ಮೇಲ್ ಕಳುಹಿಸಿಲು ವಾಯ್ಸ್ಮೇಲ್ ಅನುಕೂಲ. ವೊಡಾಫೋನ್ ಬಳಕೆದಾರರು ವಾಯ್ಸ್ಮೇಲ್ ಸೇವೆ ಆಕ್ಟಿವೇಟ್ ಮಾಡಿಕೊಳ್ಳಲು ಈ ಕೆಳಗಿನ 4 ಹಂತಗಳನ್ನು ಅನುಸರಿಸಿ
1. ವೊಡಾಫೋನ್ ಬಳಕೆದಾರರು ನಿಮ್ಮ ಮೆಸೇಜ್ ಬಾಕ್ಸ್ ನಲ್ಲಿ ACT VMS ಎಂದು ಟೈಪ್ ಮಾಡಿ 199 ಗೆ ಎಸ್ಎಂಎಸ್ ಕಳುಹಿಸಿ.
2. ಮೇಲೆ ತಿಳಿಸಿದಂತೆ ಸಂದೇಶ ಕಳುಹಿಸಿದ ನಂತರ ಒಂದು ರೀಪ್ಲೇ ಎಸ್ಎಂಎಸ್ ವಾಯ್ಸ್ಮೇಲ್ ಸೇವೆ ಖಚಿತ ಮಾಡಲು 1 ಟೈಪಿಸಿ ಎಂದು ಹಾಗೂ ತಿಂಗಳಿಗೆ ಎಷ್ಟು ಚಾರ್ಚ್ ಆಗುತ್ತದೆ ಎಂಬುದರ ಸಹಿತ ಬರುತ್ತದೆ. ಅದಕ್ಕೆ 1 ಅನ್ನು ಟೈಪಿಸಿ ರೀಪ್ಲೇ ಮಾಡಿ.
3 ವಾಯ್ಸ್ಮೇಲ್ ಸೇವೆ ಆಕ್ಟಿವೇಟ್ ಆದ ಬಗ್ಗೆ ನಿಮಗೆ ಪುನಃ ಟೆಲಿಕಾಂ ಆಪರೇಟರ್ನಿಂದ 30 ನಿಮಿಷದಲ್ಲಿ ಸೇವೆಯನ್ನು ಆರಂಭಿಸಬಹುದು ಎಂದು ಎಸ್ಎಂಎಸ್ ಬರುತ್ತದೆ.
4. ಮುಂದಿನ ಹಂತದಲ್ಲಿ ನಿಮ್ಮ ವಾಯ್ಸ್ಮೇಲ್ ಸೇವೆಗೆ ಪಾಸ್ವರ್ಡ್ ಮತ್ತು ಇತರೆ ಸೆಟ್ಟಿಂಗ್ಸ್ಗಳನ್ನು ನಿಮಗೆ ಬೇಕಾದಂತೆ ಅಳವಡಿಸಿಕೊಳ್ಳಬಹುದು.
ವಾಯ್ಸ್ಮೇಲ್ ಅಪ್ಗ್ರೇಡ್ನಿಂದ ಲಭ್ಯವಾಗುವ ಹೆಚ್ಚಿನ ಫೀಚರ್ಗಳು
-ಉತ್ತಮ ಬಳಕೆ ಸ್ನೇಹಿ ಫೀಚರ್ಗಳು
-ಹೊಸ ವಾಯ್ಸ್ ಮೆಸೇಜ್ ಸ್ವೀಕರಿಸಿದಾಗ ಎಸ್ಎಂಎಸ್ ಅಲರ್ಟ್
-ವಾಯ್ಸ್ಮೇಲ್ ಪೂರ್ಣವಾದಾಗ ಎಸ್ಎಂಎಸ್ ಅಲರ್ಟ್
-ಬಹುಮುಖ್ಯವಾದ ವಾಯ್ಸ್ಮೇಲ್ ಗಳನ್ನು ಉಳಿಸಿಕೊಳ್ಳಲು ಆಯ್ಕೆಗಳು
If you daily receiving many calls and missing important ones, and always trying to find out who called you for what ?, Get Voice mail it will give you easy life. Four Steps To Enable VoiceMail Service On Your Vodafone Mobile.