ನೀರು ಧರೆಯ ಜೀವ ದ್ರವ, ಜೀವ ದ್ರವ್ಯ. ನೀರು ಸಕಲ ಜೀವಿಗಳ ಒಂದು ಮೂಲಭೂತ ಅವಶ್ಯಕತೆ. ನೀರಿಲ್ಲದೆ ಜೀವಿಗಳ ಬದುಕು ಅಸಾಧ್ಯ. ಸಸ್ಯಗಳು ಉಸಿರಾಡಲು, ದ್ಯುತಿಸಂಶ್ಲೇಷಣೆ ನಡೆಸಲು, ನೆಲದಿಂದ ಪೋಷಕಾಂಶಗಳನ್ನು ಬೇರುಗಳ ಮೂಲಕ ಹೀರಿಕೊಳ್ಳಲು ನೀರು ಬೇಕೇ ಬೇಕು. ಪ್ರಾಣಿಗಳಲ್ಲಿ ಚಯಾಪಚಯ ಕ್ರಿಯೆ ನಡೆಯಲು, ಆಹಾರ ಜೀರ್ಣವಾಗಲು, ವ್ಯರ್ಥ ವಸ್ತುಗಳು ವಿಸರ್ಜನೆಗೊಳ್ಳಲು, ರಕ್ತ ಪರಿಚನೆ ನಡೆಯಲು ನೀರು ಅಗತ್ಯ. ಜೀವಿಗಳಿಗೆ ನೀರಿನ ಅವಶ್ಯಕತೆ ಎಷ್ಟಿದೆಯೆಂದರೆ ನಾವೂ ಸೇರಿದಂತೆ ಯಾವುದೇ ಪ್ರಾಣಿಯ ಶರೀರದ ಒಟ್ಟೂ ದ್ರವ್ಯರಾಶಿಯ ಶತಾಂಶ ಎಪ್ಪತ್ತು ಭಾಗ ನೀರಿನದೇ.
ಇನ್ನು ಮಾನವನಿಗೆ ನೀರು ಅಗತ್ಯವಾದದ್ದು. ತನ್ನ ಆರೋಗ್ಯಕ್ಕೆ ಮತ್ತು ದೇಹಕ್ಕೆ ಎಷ್ಟು ನೀರು ಬೇಕೋ ಅಷ್ಟು ನೀರು ಕುಡಿಯಬೇಕು. ದೇಹಕ್ಕೆ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ನೀರು ಸೆವಿಸಿದರೆ ಹಲವಾರು ತೊಂದರೆಗಳು ಎದುರಿಸಬೇಕಾಗುತ್ತದೆ. ಹೀಗಾಗಿ ಅಗತ್ಯ ಪ್ರಮಾಣದ ನೀರು ಕುಡಿಯಬೇಕು. ಒಂದು ವೇಳೆ ನೀವು ಕಡಿಮೆ ನೀರು ಕುಡಿದರೆ ಯಾವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ..? ಇಲ್ಲಿದೆ ನೋಡಿ ಮಾಹಿತಿ
ಕಡಿಮೆ ನೀರು ಕುಡಿದರೆ ಆಗುವ ಸಮಸ್ಯೆಗಳು
1. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ:
-ನೀವು ಕಡಿಮೆ ನೀರು ಕುಡಿದರೆ ನಿಮ್ಮ ದೇಹದಲ್ಲಿ ನಿಮ್ಮ ದೇಹ ನಿರ್ಜಲೀಕರಣ ಸಮಸ್ಯೆ ಆಗಿ ಯಕೃತ್ತು ತನ್ನ ಗ್ಲೈಕೋಜೆನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿನ ನಿಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆದೊಷ್ಟು ನಿಮ್ಮ ಅರೋಗ್ಯ ಉತ್ತಮವಾಗಿರಬೇಕು ಅಂದ್ರೆ ತುಂಬಾ ನೀರು ಕುಡಿಯಬೇಕು.
2. ಮೂತ್ರ ಹಳದಿ ಬಣ್ಣಕ್ಕೆ ತಿರುಗುತ್ತದೆ:
-ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಿಡ್ನಿಯಿಂದ ಬರುವ ಎಲ್ಲಾ ತ್ಯಾಜ್ಯ ಕಡಿಮೆ ಮೂತ್ರದ ರೂಪದಲ್ಲಿ ಹೊರಬರುತ್ತದೆ. ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರದ ಬಣ್ಣ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ತುಂಬ ಸಮಸ್ಯೆ ಆಗುವು ಸಾಧ್ಯತೆ ಹೆಚ್ಚು. ಅಲ್ಲದೆ ಮೂತ್ರ ಬಣ್ಣಬದಲಾಗಿ ವಾಸನೆ ಉಂಟುಮಾಡುತ್ತದೆ ಹಾಗೂ ಇನ್ಫೆಕ್ಷನ್ ಆಗುತ್ತದೆ.
3. ಉಸಿರಾಟದಲ್ಲಿ ತೊಂದರೆ:
-ಬಾಯಿಯಲ್ಲಿರುವ ಸಲೈವಾ ಉಸಿರಾಟಕ್ಕೆ ಸಮಸ್ಯೆ ಮಾಡಬಲ್ಲ ಬ್ಯಾಕ್ಟೀರಿಯಾಗಳನ್ನು ತಡೆಯುವ ಕೆಲಸ ಮಾಡುತ್ತದೆ. ನೀರನ್ನು ನಾವು ಕಡಿಮೆ ಕುಡಿದಾಗ ಬಾಯಿಯಲ್ಲಿರುವ ಸಲೈವಾ ಪ್ರಮಾಣ ಕೂಡ ಕಡಿಮೆಯಾಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಿಮ್ಮ ಆರೋಗ್ಯದ ಸಮಸ್ಯೆ ಗಂಭೀರ ಪರಿಣಾಮಕ್ಕೆ ಹೋಗುವ ಸಾದ್ಯತೆ ಹೆಚ್ಚು.
4. ತಲೆ ನೋವು ಮತ್ತು ತಲೆಸುತ್ತು:
-ನೀವು ಪ್ರತಿದಿನ ಕಡಿಮೆ ನೀರು ಕುಡಿದರೆ ನಿಮ್ಮ ರಕ್ತ ಮತ್ತು ಮೆದುಳಿನಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತವೆ. ಇದರಿಂದ ತಲೆ ನೋವು ಮತ್ತು ತಲೆಸುತ್ತು ಬರುತ್ತದೆ.
5. ದೇಹ ದಣೆಯೊತ್ತದೆ:
-ನಮ್ಮ ದೇಹ ವಿಷ್ರಂತಿಯ ನಂತರ ಸಕ್ರಿಯವಾಗಲು ಬಹಳ ಕಷ್ಟವಾಗುತ್ತದೆ ಅಂತಹ ಸಮಯದಲ್ಲಿ ೧ ಲೊಟ್ಟ ನೀರು ಕುಡಿಯುವುದರಿಂದ ರಕ್ತ ಸಂಚಾರ ಹೆಚ್ಚಗಿ ದೇಹ ಮತ್ತು ತಲೆ ಹೆಚ್ಚಿತುಕೊಳುತ್ತದೆ.
6. ಮಲಬದ್ಧತೆ ಹೆಚ್ಚಾಗುತ್ತದೆ:
-ಸೆವಿಸುವ ಆಹಾರವು ಜೀರ್ಣವಾಗಳು ಹೆಚ್ಚು ನೀರನ್ನು ಕೆಳುತ್ತದೆ, ನೀರಿನ ಪ್ರಮಾಣ ಕಡಿಮೆಯಾದೆ ಶೌಚಾಲಯಕ್ಕ ಹೊಗಲು ತೊಂದರೆಯಾಗುತ್ತದೆ.
7. ಸಂಧಿವಾತ:
ಕಡಿಮೆ ನೀರಿನಿಂದ ವಿಷ ಅಂಶ ಸೇರಿ ಕೀಲುಗಳು ನೊವು ಉಂಟುಮಾಡುತ್ತದೆ.
-ಉನ್ನತ ಮಟ್ಟದಲ್ಲಿ ಕೆಟ್ಟ ಕೊಲೆಸ್ಟರಾಲ್, ದೇಹದ ತೊಕ ಹೆಚ್ಚಿ ಬೂಜ್ಜು ಉಂಟಾಗುತ್ತದೆ.
-ಅಧಿಕ ಮತ್ತು ಕಡಿಮೆ ಮಟ್ಟದಲ್ಲಿ ರಕ್ತ ಸಂಚಾರ ಬದಲಾವನೆಯಾಗುತ್ತದೆ.
Water is essential for human life. We all need water to survive. it is the most abundant substance in our body. When you don’t get enough water you have to face many problems. Your body uses water in all its cells, organs, and tissues to help regulate its temperature and maintain other bodily functions.