ಸ್ಮಾರ್ಟ್ಫೋನ್(Smartphone) ಬಳಕೆದಾರರ ಲವ್ಲಿ ಮೆಸೇಜ್ ಅಪ್ಲಿಕೇಶನ್ ವಾಟ್ಸಾಪ್(WhatsApp) ಈಗ ನಾಲ್ಕು ಹೊಸ ಫೀಚರ್ಗಳೊಂದಿಗೆ ಬಳಕೆದಾರರಿಗೆ ಬಿಗ್ ಅಪ್ಡೇಟ್ ನೀಡಿದೆ.
ವಾಟ್ಸಾಪ್ ಐಓಎಸ್ ಆಪ್ಗೆ ಅಪ್ಡೇಟ್ ನೀಡಿದ್ದು ನಾಲ್ಕು ಹೊಸ ಫೀಚರ್ಗಳನ್ನು, ಹೊಸದಾಗಿ ಲಾಂಚ್ ಆಗಿರುವ ಐಫೋನ್ ಎಕ್ಸ್ಆರ್, ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್, ಆಡಿಯೋ ಮೆಸೇಜ್ಗಾಗಿ ನಿರಂತರ ಪ್ಲೇಬ್ಯಾಕ್ ಫೀಚರ್, ಬಬಲ್ ಮೆನುಗಾಗಿ ಹೊಸ ವ್ಯವಸ್ಥೆ, ಅಲ್ಲದೇ ಸ್ಟೇಟಸ್ ರೀಪ್ಲೇಗಾಗಿ ಹಲವು ಆಯ್ಕೆಗಳನ್ನು ನೀಡಿದೆ. ಈ ಅಪ್ಡೇಟ್ಗೆ ಕಾರಣ ಐಫೋನ್ ಎಕ್ಸ್ಆರ್, ಐಫೋನ್ ಎಕ್ಸ್ಎಸ್ ಸ್ಮಾರ್ಟ್ಫೋನ್ಗಳು ವಿಶಾಲ ಡಿಸ್ಪ್ಲೇ ಹೊಂದಿರುವುದು ಆಗಿದೆ.
ಐಓಎಸ್ಗಾಗಿ ಅಪ್ಡೇಟ್ ಆಗಿರುವ ಹೊಸ ವಾಟ್ಸಾಪ್ ನಲ್ಲಿ ಬಬಲ್ ಮೆನು ಆಯ್ಕೆ ಮರುವಿನ್ಯಾಸಗೊಂಡಿದ್ದು, ಲಾಂಗ್ ಟ್ಯಾಪ್ನಿಂದ ಪಾಪ್ಸ್ ಅಪ್ ಆದಾಗ Delete, Reply, Forward, Star, Copy ಮತ್ತು ಇನ್ನೂ ಹಲವು ಆಯ್ಕೆಗಳನ್ನು ತೋರಿಸುತ್ತದೆ. ಇದು ಮೆಸೇಜ್ ಆಕ್ಷನ್ ಅನ್ನು ಅತಿವೇಗಗೊಳಿಸಲು ಮಾಡಿರುವ ಮರುವಿನ್ಯಾಸ ಎನ್ನಲಾಗಿದೆ.
ಸ್ಟೇಟಸ್ ರೀಪ್ಲೇ ಫೀಚರ್ ಐಓಎಸ್ ಮತ್ತು ಆಂಡ್ರಾಯ್ಡ್ ಎರಡು ಓಎಸ್ಗಳಿಗೂ
ವಾಟ್ಸಾಪ್ ಅಪ್ಡೇಟ್ ಮಾಡಿರುವ ಮೂರನೇ ಫೀಚರ್ ಅಂದ್ರೆ ಸ್ಟೇಟಸ್ ರೀಪ್ಲೇ. ಈ ಹಿಂದೆ ಸ್ಟೇಟಸ್ ಗೆ ರೀಪ್ಲೇ ಮಾಡಬೇಕಾದರೆ ಕೇವಲ ಟೆಕ್ಸ್ಟ್ ಮೆಸೇಜ್, ಇಮೇಜ್, ಜಿಫ್ ಇಮೇಜ್, ವಿಡಿಯೋಗಳನ್ನು ಮಾತ್ರ ಸ್ಟೇಟಸ್ ರೀಪ್ಲೇನಲ್ಲಿ ಕಳುಹಿಸಬಹುದಿತ್ತು. ಆದರೆ ಈಗ ಇವುಗಳಿಗೂ ಮೀರಿ ಹೊಸ ಸ್ಟೇಟಸ್ ರೀಪ್ಲೇ ಫೀಚರ್ನಲ್ಲಿ ವಾಯ್ಸ್ ಮೆಸೇಜ್, ಲೊಕೇಶನ್, ಡಾಕ್ಯುಮೆಂಟ್ಸ್, ಅಲ್ಲದೇ ಕಾಂಟ್ಯಾಕ್ಟ್ಗಳನ್ನು ಕಳುಹಿಸಬಹುದಾಗಿದೆ. ಈ ಫೀಚರ್ ಐಓಎಸ್ ಮತ್ತು ಆಂಡ್ರಾಯ್ಡ್ಎರಡರಲ್ಲೂ ಕಾರ್ಯನಿರ್ವಹಿಸಲಿದೆ.
ನಾಲ್ಕನೇ ಅಪ್ಡೇಟ್ ಅನ್ನು ಫೇಸ್ಬುಕ್ ಮಾಲೀಕತ್ವದ ಕಂಪನಿ ನೀಡಿದೆ ಎಂದೇಳಲಾಗಿದೆ. ಆದರೆ ಪ್ರಸ್ತುತ ಈ ನಾಲ್ಕನೇ ಅಪ್ಡೇಟ್ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಈ ಫೀಚರ್ ಏನೆಂದರೆ ವಾಟ್ಸಾಪ್ ವರ್ಸನ್ 2.18.100 ರಲ್ಲಿ ನೋಟಿಫಿಕೇಶನ್ ಪ್ಯಾನಲ್ನಲ್ಲಿ ವಿಡಿಯೋ ಪ್ರಿವೀವ್ಸ್ ಸಪೋರ್ಟ್ ಮಾಡುವುದು. ಈ ಫೀಚರ್ ಮುಂದಿನ ದಿನಗಳಲ್ಲಿ ಆಕ್ಟಿವ್ ಆಗಲಿದೆ.
Smartphone user’s lovable message application WhatsApp has issued a new update for its iOS and Android both check here.