ದೇಶದಾದ್ಯಂತ ಜೂನ್ 19, 2021 ರಂದು ರಾಷ್ಟ್ರೀಯ ಓದಿನ ದಿನ’ವನ್ನು (National Reading Day 2021) ಆಚರಿಸಲಾಗುತ್ತದೆ. ಈ ದಿನವನ್ನು ಭಾರತದ ಗ್ರಂಥಾಲಯ ಚಳುವಳಿಯ ಪಿತಾಮಹರಾದ ದಿವಂಗತ ಪಿ.ಎನ್.ಪಣಿಕ್ಕರ್ ರವರೆ ಸವಿನೆನಪಿಗಾಗಿ ಆಚರಣೆ ಮಾಡಲಾಗುತ್ತದೆ. ಪಣಿಕ್ಕರ್ ರವರು, ಓದಿನ ಪ್ರಾಮುಖ್ಯತೆ ಬಗ್ಗೆ ಹೆಚ್ಚು ತಿಳಿಸಿದರು. ಕೇರಳ ಸಾಂಸ್ಕೃತಿಕ ಚಳುವಳಿಯ ಪ್ರಮುಖ ಜವಾಬ್ದಾರಿಯ ಹೊರೆ ಹೊತ್ತಿದ್ದರು.
ಓದಿನ ಸಾಮರ್ಥ್ಯಗಳ ಸುಧಾರಣೆ ಮತ್ತು ಪ್ರಚಾರಕ್ಕಾಗಿ ಪ್ರಸ್ತುತ ಸಿಬಿಎಸ್ಇ’ಯು ಶಾಲೆಗಳಿಗೆ ರಾಷ್ಟ್ರೀಯ ಓದಿನ ದಿನ ಆಚರಣೆಗೆ ಆದೇಶ ನೀಡಿದೆ. ವಾರಗಟ್ಟಲೇ, ತಿಂಗಳುಗಟ್ಟಲೇ ಆಚರಣೆ ಮಾಡಿ ಎಂದಿದೆ. ಸಿಬಿಎಸ್ಇ’ಯು ವಿವಿಧ ಶಾಲೆಗಳಿಗೆ ಕಳುಹಿಸಲಾದ ಅಫೀಶಿಯಲ್ ನೋಟಿಸ್ನಲ್ಲಿ, ‘ಜೂನ್ 19 ರಂದು ನ್ಯಾಷನಲ್ ರೀಡಿಂಗ್ ಡೇ ಆಚರಣೆ ಮಾಡಿ, ಹಾಗೆಯೇ ರೀಡಿಂಗ್ ವೀಕ್, ರೀಡಿಂಗ್ ಮಂಥ್ ಎಂದು ಆಚರಣೆ ಮಾಡಿ. ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಚಟುವಟಿಕೆಗಳನ್ನು ನೀಡಿ’ ಎಂದಿದೆ.
’26ನೇ ನ್ಯಾಷನಲ್ ರೀಡಿಂಗ್ ಡೇ ಪ್ರಯುಕ್ತ’ ಶಾಲೆಗಳು pnpanickerfoundation.org ವೆಬ್ಸೈಟ್ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಆನ್ಲೈನ್ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ತಿಳಿಸಿದೆ.
National Reading Day 2021: ಜೂನ್.19 ರಂದು ಆಚರಣೆ ಏಕೆ?
ಪುಥುವಯಿಲ್ ನಾರಾಯಣ ಪಣಿಕ್ಕರ್ ಅಥವಾ ಪಿ.ಎನ್.ಪಣಿಕ್ಕರ್ ರವರ ಸಾವಿನ ಸವಿನೆನಪಿಗಾಗಿ ‘ರಾಷ್ಟ್ರೀಯ ಓದಿನ ದಿನ’ ಆಚರಣೆ ಮಾಡಲಾಗುತ್ತದೆ. ಇವರನ್ನು ಭಾರತೀಯ ಗ್ರಂಥಾಲಯ ಚಳುವಳಿ ಪಿತಾಮಹರೆಂದು ಕರೆಯಲಾಗುತ್ತದೆ. ಅವರು ಕೇರಳದ ಸಾಕ್ಷರತೆ ದರ ಶೇಕಡ.100 ತಲುಪುವಲ್ಲಿ ಮತ್ತು ಗ್ರಂಥಾಲಯಗಳ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರಾಷ್ಟ್ರೀಯ ಓದಿನ ದಿನವನ್ನು 1996 ರಲ್ಲಿ ಕೇರಳದಲ್ಲಿ, ಪಣಿಕ್ಕರ್ ರವರ ಸ್ಮರಣಾರ್ಥ ಆಚರಣೆ ಮಾಡಲಾಯಿತು. 2017 ರಲ್ಲಿ ಪಿಎಂ ನರೇಂದ್ರ ಮೋದಿರವರು 22ನೇ ನ್ಯಾಷನಲ್ ರೀಡಿಂಗ್ ಮಂಥ್ ಅನ್ನು ಉದ್ಘಾಟನೆ ಮಾಡಿದರು. ಕೇರಳ ರಾಜ್ಯದಿಂದ ರಾಷ್ಟ್ರೀಯ ಮಟ್ಟಕ್ಕೆ ‘Read and Grow’ ಎಂಬ ಕರೆಯನ್ನು ನೀಡಲಾಗಿದೆ.
ಗಣರಾಜ್ಯೋತ್ಸವ ದಿನದ ಬಗ್ಗೆ ನಿಮಗೆ ತಿಳಿಯದ ಮಾಹಿತಿಗಳು