ನವದೆಹಲಿ: ಒಂದು ಕಾಲದ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ಯಾಹೂ ಮೆಸೆಂಜರ್( Yahoo Messenger ) ಜುಲೈ 17ಕ್ಕೆ ಸ್ಥಗಿತಗೊಳ್ಳಲಿದೆ. ಗೂಗಲ್ ಚಾಟ್, ಫೇಸ್ ಬುಕ್ ಮೆಸೆಂಜರ್, ವಾಟ್ಸಾಪ್, ಹೈಕ್ ಮುಂತಾದ ಚಾಟಿಂಗ್ ಅಪ್ಲಿಕೇಷನ್’ಗಳ ಅಬ್ಬರದ ನಡುವೆ ಯಾಹೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ವಿಫಲವಾಗಿದ್ದು ಬಂದ್ ಆಗಲಿದೆ.
ಡೆಸ್ಕ್ ಟಾಪ್ ಹಾಗೂ ಮೊಬೈಲ್ ಆಪ್ಲಿಕೇಷನ್ ಬಂದ್ ಆಗಲಿದೆ. ಬಳಕೆದಾರರಿಗೆ ಈ ಆ್ಯಪ್’ನಲ್ಲಿರುವ ತಮ್ಮ ಚಾಟ್ ಹಿಸ್ಟರಿಯನ್ನು ಸೇವ್ ಮಾಡಿಕೊಳ್ಳಲು 6 ತಿಂಗಳ ಅವಧಿಯನ್ನು ನೀಡಲಾಗಿದೆ. ಯಾಹೂ ಮೆಸೇಂಜರ್( Yahoo Messenger ) ಬಂದ್ ಆದ ಬಳಿಕ ಬಳಕೆದಾರರು ಹೊಸ ಗ್ರೂಪ್ ಮೆಸೆಜಿಂಗ್ ಆಪ್ ಸ್ಕ್ವಿರ್ಲ್’ಗೆ(Squirrel) ರೀಡೈರೆಕ್ಟ್ ಆಗಲು ಅವಕಾಶವಿದೆ. ಯಾಹೂ ಕಂಪನಿಯ ಸ್ಕ್ವಿರ್ಲ್ ಇನ್ನೂ ಬೀಟಾ ಆವೃತ್ತಿಯಲ್ಲಿದೆ. ಸಾರ್ವಜನಿಕವಾಗಿ ಇನ್ನೂ ಮುಕ್ತವಿಲ್ಲ. ಆಹ್ವಾನ ಇದ್ದವರು ಮಾತ್ರ ಬಳಸಬಹುದಾಗಿದೆ.
1998ರಲ್ಲಿ ಯಾಹೂ ಸಂಸ್ಥೆಯ ಚಾಟ್ ಅಪ್ಲಿಕೇಷನ್ ಮೆಸೆಂಜರ್ ಆರಂಭವಾಗಿತ್ತು. ಸಂಕ್ಷಿಪ್ತ ಅಕ್ಷ ರಗಳು, ಆಕರ್ಷಕ ಎಮೋಜಿಗಳನ್ನು ಉಪಯೋಗಿಸಿ ಚಾಟ್ ಮಾಡುವುದನ್ನು ಹೇಳಿಕೊಟ್ಟಿದ್ದೇ ಈ ಆ್ಯಪ್. ಒಂದು ಕಾಲದಲ್ಲಿ ಎಲ್ಲರ ಮೆಚ್ಚುಗೆಯ ಯಾಹೂ ಮೆಸೆಂಜರ್ ಇನ್ನು ನೆನಪಾಗಿ ಮಾತ್ರ ಉಳಿಯಲಿದೆ.
messaging app Yahoo Messenger Shutting Down on July 17. Yahoo Messenger users will have six months to download their chat history. Yahoo Messenger chat service was introduced in 1998.